ರಾಜಕೀಯ ಸುದ್ದಿಗಳು

ಆ ಯುವತಿ ಸಾವನ್ನಪ್ಪಿದ್ದು ಜಿಲ್ಲಾ ಆರೋಗ್ಯ ಇಲಾಖೆಯ ತಪ್ಪುನಡಿಗೆಯಿಂದಲಾ? ಆಯುಕ್ತರು ಏನಂದ್ರು?

ಸುದ್ದಿಲೈವ್/ಶಿವಮೊಗ್ಗ

ಕೆಎಫ್ ಡಿ ವಿಚಾರದಲ್ಲಿ ಹೊಸನಗರದ 19 ವರ್ಷದ ಯುವತಿ ಅಸುನೀಗಿದ್ದಳು. ಈ ವಿಷಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಪ್ಪು ನಡೆಯ ಬಗ್ಗೆ ಆರೋಪವೂ ಕೇಳಿ ಬಂದಿತ್ತು. ಈ ತಪ್ಪು ನಡೆಯ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆಯುಕ್ತರಿಗೆ ಮಾಧ್ಯಮಗಳ ಮೊದಲನೇ ಪ್ರಶ್ನೆಯೇ ಆ ಯುವತಿಯ ಸಾವಿನ ಕುರಿತು ಡಿಹೆಚ್ ಒವಿನ ತಪ್ಪು ನಡೆಯ ಕುರಿತಾದ್ದಾಗಿತ್ತು. ಆಯುಕ್ತರು ಸಹ ಈ ಪ್ರಕರಣದಿಂದ ಎಚ್ಚೆತ್ತುಕೊಂಡು ಬೆಂಗಳೂರಿನಿಂದ ತಂಡವೊಂದು ಶಿವಮೊಗ್ಗಕ್ಕೆ ಭೇಟಿ ನೀಡಿತ್ತು ಎಂದು ತಿಳಿಸಿದರು.

ಎರಡೆರೆಡು ಬಾರಿ ಯುವತಿಯನ್ನ ಪರೀಕ್ಷೆ ಗೊಳಪಡಿಸಲಾಗಿತ್ತು. ಈ ಬಗ್ಗೆ ತನಿಖಾ ತಂಡ ವರದಿ ನೀಡಲಿದೆ ವರದಿ ಬಂದ ನಂತರ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ನಮ್ಮ ಅಧಿಕಾರಿಗಳು ಇದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಮೊದಲ ನೋಟಕ್ಕೆ ಯಾರು ಬೇಕಾದರೂ ಲ್ಯಾಬ್ ಗೆ ಹೋಗಿ ಮಾಹಿತಿ ಪಡೆಯಬಹುದಾಗಿತ್ತು. ಈ ವಿಚಾರದಲ್ಲಿ ಮಾಹಿತಿ ಪಡೆಯುವ ವಿಚಾರದಲ್ಲಿ ಶಿಷ್ಠಾಚಾರ ಪಾಲಿಸುತ್ತಿಲ್ಲ ಎಂಬ ಪ್ರಾಥಮಿಕ ಮಾಹಿತಿ ಕೇಳಿ ಬರುತ್ತಿದೆ. ಇದನ್ನ ಬಿಗಿ ಮಾಡಲಾಗಿದೆ. ಡಿಸಿಎಂಒ ಮತ್ತು ಬಯಾಲಜಿಸ್ಟ್ ಅವರು ಸ್ಟೇಟ್ ಗೆ ಮಾಹಿತಿ ಕೊಟ್ಟು ಬಹಿರಂಗ ಪಡಿಸುವಂತಾಗಿದೆ ಎಂದರು.

ಎರಡು ವಾರದಲ್ಲಿ ತನಿಖಾ ತಂಡದ ವರದಿಯನ್ನ ಬಹಿರಂಗ ಪಡಿಸಲಾಗುವುದು ಎಂದ ಅವರು ಕೆಎಫ್ ಡಿ ಪರಿಕ್ಷಾ ಕೇಂದ್ರ ತೆರೆಯಲು ಗೊಂದಲ ಮುಂದುವರೆದಿದೆ. ಈ ಹಿಂದಿನಿಂದಲೂ ಸಾಗರದಲ್ಲಿ ಪರೀಕ್ಷಾ ಕೇಂದ್ರ ತೆರೆಯಬೇಕೆಂಬ ಕೂಗುಹಾಗೆ ಮುಂದುವರೆದಿದೆ. ಅದರ ಜೊತೆಗೆ ಈಗ ಶಿರಸಿ ಜಿಲ್ಲೆಯಲ್ಲಿ ಕೆಎಫ್ ಡಿ ತಲೆದೋರಿದ್ದು, ಶಿರಸಿ ಮತ್ತು ಸಿದ್ದಾಪುರದಲ್ಲಿ ಲ್ಯಾಬ್ ತೆರೆಯುವ ಪ್ರಸ್ತಾವನೆ ಇದೆ. ಈ ಬಗ್ಗೆ ಪುಣೆಯ ಲ್ಯಾಬೋರೇಟರಿ ಐಎನ್ ಎಸ್ ಸರ್ಟಿಫಿಕೇಟ್ ಯಾವ ಊರಿಗೆ ಕೊಡ್ತಾರೆ ಅಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದರು.

ಇದರಿಂದ ಗೊಂದಲ ಮುಂದು ವರೆದಿದೆ. ಯಾವಾಗ ಕೆಎಫ್ ಡಿ ಉಲ್ಬಣಗೊಳ್ಳುತ್ತದೆ ಈ ವಿಡಿಎಲ್ ಲ್ಯಾಬ್ ಬಗ್ಗೆ ಗಮನ ಹರಿಸಲಾಗುತ್ತದೆ. ಅದರಂತೆ ಲ್ಯಾಬ್ ನ ವಿಷಯ ಮುನ್ನೆಲೆಗೆ ಬರುತ್ತದೆ.

ಇದನ್ನೂ ಓದಿ-https://suddilive.in/archives/8367

Related Articles

Leave a Reply

Your email address will not be published. Required fields are marked *

Back to top button