ರಾಜಕೀಯ ಸುದ್ದಿಗಳು

ದಿನೇಶ್ ಜ್ಯೋತಿಷಿ ಯಾವಾಗಾದರು? ಆಯನೂರು

ಸುದ್ದಿಲೈವ್/ಶಿವಮೊಗ್ಗ

ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆ ರಚನೆಯಾಗಿ 50 ವರ್ಷದ ಸಂದರ್ಭದಲ್ಲಿ ವೈದ್ಯಕೀಯ ಭತ್ಯೆಯನ್ನ 1000 ದಿಂದ 1500  ಏರಿಸಿದ್ದಾರೆ. ಸ್ವಾಗತದ ಕ್ರಮ‌ ಆದರೂ ಪೊಲೀಸರ ಇತರೆ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೆಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು. .

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್ ಕರ್ತವ್ಯ ಮತ್ತು ನೂನ್ಯತೆಗಳನ್ನ‌ ಗುರುತಿಸಿ ನೌಕರರ ಬದುಕು ಸುಧಾರಣೆಗಾಗಿ ಈ ಕ್ರಮ ಸ್ವಾಗತಾರ್ಹವಾಗಿದೆ. ಸಿಬ್ಬಂದಿಗಳ ಒಳಿತಿಗಾಗಿ ರಾಘವೇಂದ್ರ ಔರಾದ್ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಸಗಿತ್ತು. ಇದರಲ್ಲಿ ಸೇವಾ ಜೇಷ್ಠತೆ ನೂನ್ಯತೆ ಯಾಗಿತ್ತು. ಇತ್ತೀಚಗೆ ಸೇರಿದ ನೌಕರರಿಗೆ ಹಿರಿಯ ನೌಕರರಿಗೆ ಸಂಬಳ ಒಂದೇ ಮಾಡಿದ್ದರ ಪರಿಣಾಮ ಅನ್ಯಾಯವಾಗಿತ್ತು ಎಂದು ದೂರಿದರು.

ಪೊಲೀಸರ ವೇತನದ ತಾರತಮ್ಯದ ಬಗ್ಗೆ ಔರಾದ್ಕರ್ ಅವರ ವರದಿಯಿಂದ ಅನ್ಯಾಯವಾಗಿತ್ತು. ಮುಂಬಡ್ತಿ ಹೆಚ್ಚಾದಾಗ ವೇತನ ಮತ್ತು ಭತ್ಯೆ ಹೆಚ್ಚಾಗಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಮುಂಬಡ್ತಿ ಹಿಂಬಡ್ತಿ ಪಡೆಯುತ್ತಿತ್ತು. ಪೊಲೀಸರಿಗೆ ರಜೆಗಳಿರುವುದಿಲ್ಲ. ಹಾಗಾಗಿ ಅವರಿಗೆ 13 ತಿಂಗಳ ವೇತನವನ್ನ ನೀಡುವ ಜಾಗದಲ್ಲಿ 15 ದಿನಗಳ ವೇತನ ಕಡಿತವಾಗುತ್ತಿತ್ತು. ರಿಸ್ಕ್ ಅಲೌಯೆನ್ಸ್ ನೀಡಲಾಗುತ್ತಿತ್ತು‌. ಮುಂಬಡ್ತಿಯಾದರೆ ಅಪಾಯ ಭತ್ಯೆ ಸಂಪೂರ್ಣ ಸಿಗುತ್ತಿರಲಿಲ್ಲ ಎಂದು ದೂರಿದರು.

ಪೊಲೀಸರ ಬದುಕಿನ ಕಷ್ಟ ಕೆಲಸದ ಬಗ್ಗೆ ಮೊದಲ ಬಾರಿಗೆ ಸದನದಲ್ಲಿ ಧ್ವನಿ ಎತ್ತಿದ್ದೆ ಆದರೆ ಫಲಿತಾಂಶ ಸಿಗಲಿಲ್ಲ. ಈಗ‌ ಆಗಲಿದೆ ಎಂದು ಆಶಿಸಿದರು. ಒಂದು ಕಂಪನಿಗಳ ಅನುಕೂಲಕ್ಕಾಗಿ ಕಾರ್ಮಿಕರ ಕೆಲಸದ ಸಮಯವನ್ನ ಹೆಚ್ಚಿಸಿ ಬೊಮ್ಮಾಯಿ ಸರ್ಕಾರ ಅನ್ಯಾಯ ತೋರಿತ್ತು. ಈಗ ಸಿದ್ದರಾಮಯ್ಯನವರು 12 ರಿಂದ 8 ಗಂಟೆಗೆ ಇಳಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ತಂದು ಇದನ್ನ‌ ಜಾರಿಗೊಳುಸಬೇಕೆಂದು ಒತ್ತಾಯಿಸಿದರು.

ಆಗಲೂ ನಿಮ್ಮದೆ ಸರ್ಕಾರ ಇತ್ತು ಈಗಲೂ ನಿಮ್ಮದೆ ಸರ್ಕಾರ  ಎಂಬ ಪ್ರಶ್ನೆಗೆ ಉತ್ತರಿಸಿದ ಆಯನೂರು ಸರ್ಕಾರ ಬಡವರ‌ ಪರವಾಗಿರ ಬೇಕೆಂದು ಹೇಳಿದರು.

ಅವರು ಜ್ಯೋತಿಷಿ ಯಾಕೆ ಆದರು?

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ನಡುವಿ ಆರೋಪಕ್ಕೆ ಪ್ರತ್ಯಾರೋಪ ಮುಂದುವರೆದಿದೆ.  ದಿನೇಶ್ ಅವರು ಕಾಂಗ್ರೆಸ್ ಗೆ ಬಂದಿರುವ ಆಯನೂರಿಗೆ ಗುರುಬಲ ಇಲ್ಲ ಎಂದಿರುವ ಟಾಂಗ್ ಗೆ ತಿರುಗೇಟು ನೀಡಿರುವ ಮಾಜಿ ಶಾಸಕ ಆಯನೂರು ಮಂಜುನಾಥ್ ಈ ಬಾರಿಯ‌ನೈರುತ್ಯ ಪದವೀಧರ ಚುನಾವಣೆಗೆ ನನ್ನ ಪರವಾಗಿ ಏಜೆಂಟಾಗಿ ಕೆಲಸ ಮಾಡಲಿ ಎಂದು ದೂರಿದರು.‌

ನನಗೆ ಗುರು ಬಲ ಇಲ್ಲ ಎಂದು ಹೇಳಿರುವ ದಿನೇಶ್  ಯಾಕೆ ಇದುವರೆಗೂ ತಮ್ಮ ಬಲ ಕಂಡುಕೊಳ್ಳಲಿಲ್ಲ? ಅವರು ಜ್ಯೋತಿಷಿ ಯಾಕೆ ಆದರು ಎಂದು ತಿರುಗೇಟು ನೀಡಿರುವ ಆಯನೂರು, ದಿನೇಶ್ ರವರ ಮತ್ತೊಂದು ಆರೋಪವಾಗಿರುವ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು  ಪಕ್ಷ ಸೇರುವ ಸಂದರ್ಭದಲ್ಲಿ ಆಯನೂರು ಮಂಜುನಾಥ್ ಯಾವುದೇ ಬೇಡಿಕೆ ಇರಲಿಲ್ಲ. ಪಕ್ಷ‌ಸೇರಿ ನಾಲ್ಕು ದಿನಗಳ ನಂತರ ಅರ್ಜಿ ಹಾಕಿದ್ದಾರೆ ಎಂಬ ಆರೋಪಕ್ಕೂ ಉತ್ತರಿಸಿದ ಆಯನೂರು ದಿನೇಶ್ ಬಳಿ ಬಂದ ನನ್ನ ಸ್ನೇಹಿತನ ಹೆಸರು ಬಹಿರಂಗ ಪಡಿಸಲಿ ಎಂದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತಾವು ವಿಧಾನ ಪರಿಷತ್ ನಲ್ಲಿ ವಿಧಾನ ಸಭೆ ಸೂಕ್ತ ಎಂದು ಹೇಳಿ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದ ಆಯನೂರಿಗೆ ಈಗ ಮತ್ತೆ ಅದೇ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದೀರಿ. ಹಿಂದಿನ ಪಕ್ಷದಲ್ಲಿ ಅವಕಾಶ ಸಿಗಲಿಲ್ಲವೆಂದು ಎರಡು ಪಕ್ಷ ಬದಲಿಸಿದ್ದೀರಿ  ಎಂಬ ಪ್ರಶ್ನೆಗೆ ತಡಬಡಾಯಿಸಿ ಉತ್ತರ ನೀಡಿದ ಆಯನೂರು ಎಲ್ಲಿ ಶಾಸನಗಳು ರಚನೆ ಆಗುತ್ತವೋ ಅಲ್ಲಿಗೆ ಹೋಗಲು ಬಯಸಿದ್ದೇನೆ. ಹಂಸ ಕ್ಷೀರ ನ್ಯಾಯ ನಿಮಗೆ ಬಿಟ್ಟಿರುವೆ ಎಂದರು.

ವಿಧಾನ ಸಭೆಗೆ ಅವಕಾಶ ಇರಲಿಲ್ಲ ಮತ್ತೆ ಎಂಎಲ್ ಸಿಗೆ ಸ್ಪರ್ಧಿಸುವೆ. ತಪ್ಪೇನಿದೆ. ಮೂಲ ಕಾಂಗ್ರೆಸ್ ಮತ್ತು ವಲಸಿಗರು ಎಂಬ ಮಾತು ಕೇಳಿಬಂದಿದೆ ಅಂತಹದ್ದೇನು ನಡೆಯೊಲ್ಲ ಇಲ್ಲಿ. ಆಯನೂರು ಯಾವ ಪಕ್ಷದಲ್ಲಿ ನೆಲಸಿದ್ದಾರೋ ಅಲ್ಲಿ ಕಾಯ ವಾಚ ಕೆಲಸ ಮಾಡುವಂತವನು ಎಂದರು. ಕೆಲವರು ದೇಹ ಇಲ್ಲಿರುತ್ತೆ ಕೆಲಸ ಬೇರವರಿಗೆ ಮಾಡುತ್ತಾರೆ ಎಂದು ಹೆಸರು ಹೇಳದೆ ಅರೊಪಿಸಿದರು.

ಎಐಸಿಸಿಗೆ ಎರಡು ಹೆಸರು ಹೋಗಿದೆ ನನ್ನ ಹೆಸರು ಹೋಗಿದೆ ಇನ್ನೊಬ್ಬರ ಹೆಸರು ನಾನೇಕೆ ಬಹರಂಗಪಡಿಸಲಿ ಎಂದು ದಿನೇಶ್ ‌ಹೆಸರು ಪ್ರಸ್ತಾಪಿಸದೆ ಮಾತನಾಡಿದ ಅವರು, ನನಗೆ ಟಿಕೇಟ್ ಸಿಕ್ಕರೆ ನಾನು ಕೆಲಸ ಮಾಡುವುದಾಗಿ ದಿನೇಶ್ ತಿಳಿಸಿದ್ದರು. ಅದರಂತೆ ಆಯನೂರಿಗೆ ಟಿಕೇಟ್ ಸಿಕ್ಕರೆ ಸ್ಪಷ್ಟ ಮಾಹಿತಿ ಕೊಡುವುದರಲ್ಲಿ ದಿನೇಶ್ ತಿಳಿಸಿದ್ದರು. ಅವರ ಹೇಳಿಕೆಯೇ ನನ್ನದು ಆದರೆ ಗಮ್ಮಣ್ಣ ಗುಸ್ಕ ನಾನಲ್ಲ ಎಂದು ದಿನೇಶ್ ಹೆಸರು ಹೇಳದೆ ಟಾಂಗ್ ನೀಡಿ ಸ್ಪಷ್ಟಪಡಿಸಿದ್ದಾರೆ.

ನನ್ನ ಪರವಾಗಿ ಏಜೆಂಟಾಗಿ ಕೆಲಸ ಮಾಡಲಿ

ನಾನು ಬಿಜೆಪಿಗೆ ವಾಪಾಸ್ ಹೋಗಲ್ಲ. ನನ್ನ‌ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಂದಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು. ಪಕ್ಷ ಎಂಎಲ್ ಸಿ ಟಿಕೇಟ್ ಗೆ ಸ್ಪರ್ಧಿಸಲು ಅವಕಾಶಕೊಡುತ್ತೆ ಎಂಬ ವಿಶ್ವಾಸವಿದೆ.  ದಿನೇಶ್ ಬಂಗಾರಪ್ಪ ನವರು ಚುನಾವಣೆ ಎದುರಿಸಿದ್ದಾಗ ಏಜೆಂಟ್ ಆಗಿದ್ದರು  ಈ ಬಾರಿ ನನಗೆ ಪಕ್ಷದ ಏಜೆಂಟಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

ಇದನ್ನೂ ಓದಿ-https://suddilive.in/archives/7504

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373