ಕ್ರೈಂ ನ್ಯೂಸ್

ಕೆಎಸ್ ಆರ್ ಟಿಸಿ ಮೇಲಾಧಿಕಾರಿಗಳಿಂದ ಕ್ರಮ ಕೈಗೊಳ್ಳದ ಆರೋಪ-ಸಿಬ್ಬಂದಿಯಿಂದ ಆತ್ಮಹತ್ಯೆಗೆ ಯತ್ನ

ಸುದ್ದಿಲೈವ್/ಶಿವಮೊಗ್ಗ

ಹಣದ ವಿಚಾರದಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿಗಳ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಕೆಎಸ್ ಆರ್ ಟಿಸಿಯ ನಿರ್ವಾಹಕ ಕಂ ಚಾಲಕ  ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಸಂಸ್ಥೆಯ ಮೇಲಾಧಿಕಾರಿಗಳು  ಕ್ರಮ‌ಜರುಗಿಸಿಲ್ಲವೆಂದು ಮನನೊಂದು ವಿಷ ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಸವರಾಜ್ ಟಿ.ವಿ ಎಂಬುವರು ಹೊನ್ನಾಳಿ ಕೆಎಸ್ ಆರ್ ಟಿಸಿ  ಘಟಕದಲ್ಲಿ ಕೆಲಸ ಮಾಡುತ್ತಿದ್ದು, ಮಾ.16 ರಂದು ಕೆಲಸಕ್ಕೆ ಹೋದಾಗ ಅಲ್ಲಿನ ಮೆಕಾನಿಕ್ ಒಬ್ಬರು ಬಾಯಿಗೆ ಬಂದಂತೆ ಬೈದು ನನಗೆ ಹಣ ತಂದು ಕೊಡು ಎಂದು ಹೇಳಿದ್ದಾರೆ. ಯಾಕೆ ಜೋರು ಮಾಡುತ್ತೀಯ ಎಂದು ಬಸವರಾಜ್ ಕೇಳಿದ್ದಕ್ಕೆ ಬಣಸವರಾಜ್ ಮೇಲೆ ಹಲ್ಲೆ ನಡೆದಿದೆ.

ಕಲ್ಲಿನಿಂದ ಹಲ್ಲೆ ನಡೆಸಿ ಇಲ್ಲಿಂದ ಹೋಗು ಇಲ್ಲವಾದಲ್ಲಿ ಕಬ್ಬಿಣದ ರಾಡಿನಲ್ಲಿ ಹೊಡೆಯುವುದಾಗಿ ಮೆಕಾನಿಕ್ ಗದರಿಸಿದ್ದಾರೆ. ಇಲ್ಲಿಂದ ತಪ್ಪಿಸಿಕೊಂಡ ಬಂದ ಬಸವರಾಜ್  ಮೇಲಾಧಿಕಾರಿಗಳಿಗೆ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವಿಭಾಗೀಯ ಸಂಚಲನಾಧಿಕಾರಿಗಳಿಗೆ ತಿಳಿಸಿದ್ದು ಯಾವುದೇ ಕ್ರಮ ಜರುಗಿಸಿಲ್ಲವೆಂದು ಎಫ್ ಐಆರ್ ನಲ್ಲಿ ದೂರಲಾಗಿದೆ.

ಈ ಹಿಂದೆ ಇಂತಹ ಘಟನೆ ನಡೆದಿದ್ದು ಈ ಬಗ್ಗೆ ಚನ್ನಗಿರಿ ಮತ್ತು ಹೊನ್ನಾಳಿ ಠಾಣೆಯಲ್ಲಿ ದೂರು ನೀಡಲಾಗಿತ್ತು. ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲವೆಂದು ಮಾನಸಿಗೆ ಹಚ್ಚಿಕೊಂಡ  ಸಿಬ್ಬಂದಿ ಬಸವರಾಜ್ ಕೇಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಾ.23 ರಂದು ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.

ಸಧ್ಯಕ್ಕೆ ಮೆಗ್ಗಾನ್ ನ ಎಂಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜುವಿನ ಮೇಲೆ ಹಲ್ಲೆ ನಡೆಸಿರುವ ಮೆಕಾನಿಕ್ ವಿರುದ್ಧ ಕ್ರಮ ಜರುಗಿಸುವಂತೆ ಬಸವರಾಜ್ ಪತ್ನಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/11795

Related Articles

Leave a Reply

Your email address will not be published. Required fields are marked *

Back to top button