ಟಾರ್ಗೆಟ್ ಪಿಐ ಅಭಯ್ ಪ್ರಕಾಶ್ ಸೋಮನಾಳ್?

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡ-ಶಾಂತಿನಗರದಲ್ಲಿ ಯಾವ ಹಿಂದೂ ಮನೆಗಳು ಟಾರ್ಗೆಟ್ ಗೂ ಮುನ್ನ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಅಭಯ್ ಪ್ರಕಾಶ್ ಟಾರ್ಗೆಟ್ ಆಗಿದ್ರಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮೆರವಣಿಗೆಯಲ್ಲಿ ಕಲ್ಲುತೂರಾಟಕ್ಕೂ ಮುನ್ನ ಕಟೌಟ್ ವಿಚಾರದಲ್ಲಿ ಅಭಯ್ ತೆಗೆದುಕೊಂಡ ನಿಲುವು ಅವರ ಕೊಲೆ ಸಂಚಿಗೆ ಕಾರಣವಾಗಿತ್ತಾ ಎಂಬ ಶಂಕೆ ಸಹ ಹೊರ ಬೀಳುತ್ತಿದೆ. ಇಮ್ರಾನ್, ಬಾಬಾ ಸೇರಿ 15 ಕ್ಕೂ ಹೆಚ್ಚು ಮಂದಿಯಿಂದ ಹತ್ಯೆಯ ಶಂಕೆ ನಡೆದಿತ್ತಾ ಎಂಬ ಮಾಹಿತಿ ಲಭ್ಯವಾಗಿದೆ. ಹಿಂದೂ ಸೈನಿಕನ ಹತ್ಯೆಗೈಯುವ ಟಿಪ್ಪು ಕಟೌಟ್ ಗೆ ಬಣ್ಣ ಬಳಿದ್ದಕ್ಕೆ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಅಂಶದ ಕುರಿತು ತನಿಖೆಗೆ ಆದೇಶಿಸಿದಲ್ಲಿ ಸತ್ಯ ಬಯಲಾಗಲಿದೆ.
ಕಟೌಟ್ ಗೆ ಬಣ್ಣ ಬಳಿಸಿದ್ದೇ ಗ್ರಾಮಾಂತರ ಇನ್ಸ್ ಸ್ಪೆಕ್ಟರ್ ಅಭಯ್ ಪ್ರಕಾಶ್ ಕಾರಣ ಎಂಬ ಹಿನ್ನೆಲೆಯಲ್ಲಿ ಹತ್ಯೆಗೆ ಸಂಚು ನಡೆದಿದೆ ಎನ್ನಲಾಗಿದೆ. ಘಟನೆ ನಡೆದ ನಂತರ ಇಮ್ರಾನ್ ಮತ್ತು ಬಾಬಾ ಸೇರಿ 15 ಜನ ನಾಪತ್ತೆಯಾಗಿರುವುದು ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇವರೆಲ್ಲರ ಪತ್ತೆಗೆ ಪೊಲೀಸರು ಮುಂದಾಗಿದ್ದರೆ. ಈ ಹಿಂದೆ ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ ಇಮ್ರಾನ್ ಮತ್ತು ಬಾಬಾ ಸಕ್ರೀಯವಾಗಿದ್ದರು ಎನ್ನಲಾಗುತ್ತಿದೆ. ಎಲ್ಲದಕ್ಕೂ ಇವರಿಬ್ಬರ ಬಂಧನದ ಬಳಿಕ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ-https://suddilive.in/archives/751
