ಸಿನಿಮಾ ಸುದ್ದಿಗಳು
ತಮಿಳು ಚಲನಚಿತ್ರ ಪ್ರದರ್ಶನಕ್ಕೆ ವಿರೋಧ

ಸುದ್ದಿಲೈವ್/ಶಿವಮೊಗ್ಗ

ತಮಿಳು ಸಿನಿಮಾ ಪ್ರದರ್ಶಿಸದಂತೆ ಕನ್ನಡ ಕಾರ್ಮಿಕರ ರಕ್ಷಣ ವೇದಿಕೆ ಚಲನಚಿತ್ರ ಮಂದಿರದ ಪೋಸ್ಟರ್ ಗಳನ್ನ ಹರಿದು ಪ್ರತಿಭಟನೆ ನಡೆಸಿದೆ.
ವೀರಭದ್ರ ಚಲನ ಚಿತ್ರದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ನಡೆಯುವ ವೇಳೆ ಚಲನಚಿತ್ರ ಮಂದಿರಕ್ಕೆ ಹೋದ ಸಂಘಟನೆಯ ಮುಖಂಡ ವಾಟಾಳ್ ಮಂಜು ಮತ್ತು ಇತರರು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ.
ಈ ವೇಳೆ ತಮಿಳು ಚಲನಚಿತ್ರ ಪ್ರದರ್ಶನ ಸರಿಯಲ್ಲವೆಂದು ಆರೋಪಿಸಿ ಸಂಘಟನೆ ಪೋಸ್ಟರ್ ಹರಿದಿದೆ. ನಂತರ ಕಾವೇರಿ ವಿಷಯ ತಣ್ಣಗಾಗುವ ತನಕ ಕನ್ನಡ ಬಿಟ್ಟು ಬೇರೆ ಭಾಷೆ ಚಲನಚಿತ್ರ ಪ್ರದರ್ಶನ ಮಾಡದಂತೆ ಚಲನಚಿತ್ರ ಮಂದಿರದ ಮಾಲೀಕರಿಗೆ ಮನವಿ ಮಾಡಲಾಯಿತು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದು ಮುಂದುವರೆದರೆ ಚಿತ್ರಮಂದಿರಕ್ಕೆ ಬೀಗ ಜಡಿಯುವ ಕೆಲಸ ಮುಂದು ವರೆಯಲಿದೆ ಎಂದು ಹೋರಾಟಗಾರ ವಾಟಾಳ್ ಮಂಜು ಎಚ್ಚರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/711
