ಉದ್ಯೋಗ ಸುದ್ದಿಗಳು

ಯುವನಿಧಿ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಭೆ

ಸುದ್ದಿಲೈವ್/ಶಿವಮೊಗ್ಗ

ಜನವರಿ 12 ರಂದು ಯುವನಿಧಿ ಕಾರ್ಯಕ್ರಮ ಫ್ರೀಡಂ ಪಾರ್ಕ್ ನಲ್ಲಿ ಲೋಕಾರ್ಪಣೆ ಆಗುತ್ತಿದ್ದು ಸಿಎಂ ಸಿದ್ದರಾಮಯ್ಯ ಭಾಗಿಯಾಗುವ ನಿರೀಕ್ಷೆ ಇದೆ. ಈ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣ ದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ಶಿಕ್ಷಣ ಸಚಿವ ಮಧು ಹಾಗೂ ಸಚಿವ ಸುಧಾಕರ್ ಬಂಗಾರಪ್ಪನವರ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆದಿದೆ.

ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಸುಮಾರು ಕಾಲೇಜಿನ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಲು . 5-6 ಸೆಮಿಸ್ಟರ್ ವಿದ್ಯಾರ್ಥಿಗಳನ್ನ‌ಈ ಕಾರ್ಯಕ್ರಮಕ್ಕೆ ಕರತೆಲು ನಿರ್ಧರಿಸಲಾಯಿತು.‌ ಶಿವಮೊಗ್ಗದಿಂದ 20 ಸಾವಿರ ಕಾಲೇಜಿನ ಮಕ್ಕಳು  ಮೂರು ಹೊರ ಜಿಲ್ಲಾ 6 ಸಾವಿರ ಜನ ಮಕ್ಕಳು ಭಾಗಿಯಾಗಲಿರುವ ನಿರೀಕ್ಷೆ ಇದೆ ಎಂದು ಜಿಪಂ ಸಿಇಒ ತಿಳಿಸಿದರು.

ಮೊದಲನೇ ಆಧ್ಯತೆ ಶಿವಮೊಗ್ಗದ ವಿದ್ಯಾರ್ಥಿಗಳನ್ನ ಮಾಡಲು ಸಚಿವ ಶರಣಪ್ರಕಾಶ್ ಪಾಟೀಲ್ ಸೂಚಿಸಿದರು. ವಿದ್ಯಾರ್ಥಿಗಳನ್ನ ಬಸ್ ನಲ್ಲಿ ಕರೆತರುವುದನ್ನ ಬಿಟ್ಟು ವಿಧಾನ ಸಭಾ ಕ್ಷೇತ್ರದ ಸಾರ್ವಜನಿಕರನ್ನ ಕರೆತರಲು ಯೋಚಿಸಬೇಕಿದೆ ಎಂದು ಹೇಳಿದರು. ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಡಿಕೊಂಡವರನ್ನ ಮಾತ್ರ ಫ್ರೀಡಂ ಪಾರ್ಕ್ ನ ವೇದಿಕೆ ಮುಂಭಾಗದಲ್ಲಿ  ಬಿಟ್ಟುಕೊಳ್ಳಲು ಸೂಚಿಸಲಾಯಿತು.

ಮಧು ಬಂಗಾರಪ್ಪ ಮಾತನಾಡಿ ಶಿರಸಿ, ಕಾರವಾರ ಮತ್ತು‌ ಹಾವೇರಿಯಿಂದ ಮಕ್ಕಳನ್ನ 10 ಸಾವಿರ ಸೇರಿಸಲು ಸೂಚಿಸಿದರು. ಎರಡು ಗ್ರಾಪಂ ಗೆ ನಮ್ಮವರನ್ನ  ನೇಮಿಸಿ  ಕರೆತರಲು ಸೂಚಿಸಿದರು.

ದಾವಣಗೆರೆ ಸಿಇಒ ಮಾತನಾಡಿ 5000 ಮಕ್ಕಳನ್ನ ಕರೆತರಲು 110 ಬಸ್ ಗಳು ಬೇಕಿದೆ ವ್ಯವಸ್ಥೆ ಮಾಡಲಾಗುವುದು. ಚಿತ್ರದುರ್ಗದಿಂದ 5000 ಮಕ್ಕಳನ್ನ ಕರೆತರಲಾಗುತ್ತಿದೆ. 110 ಬಸ್ ಕೊಟ್ಟರೆ  ಮ್ಯಾನೇಜ್ ಮಾಡಲು ಸಾಧ್ಯ ಎಂದು ಚಿತ್ರದುರ್ಗ ಜಿಲ್ಲಾ ಆಡಳಿತ ಸಭೆಯಲ್ಲಿ ಕೋರಿಕೊಂಡಿದೆ.‌ ಚಿಕ್ಕಮಗಳೂರಿಂದ 4 ಸಾವಿರ ಮಕ್ಕಳನ್ನ ಕರೆತರಲಾಗುತ್ತದೆ. ಉಡುಪಿ ಜಿಲ್ಲೆಯಿಂದ 150 ಕಿಮಿ ಇರುವುದರಿಂದ ದೂರ ಆಗಲಿದೆ ಎಂದು ಸಭೆ ನಿರ್ಧರಿಸಿತು.‌

ಹಾವೇರಿಯಿಂದ 6 ಸಾವಿರ ಮಕ್ಕಳಿದ್ದು 3 ಸಾವಿರ ಜನ ಕಾರ್ಯಕ್ರಮಕ್ಕೆ ಬರಬಹುದಾಗಿದೆ. ನಾಲ್ಕು ಜಿಲ್ಲೆಯಿಂದ 4 ರಿಂದ ಐದು ಸಾವಿರ ಜನ ನಿರೀಕ್ಷಿಸಲಾಗುತ್ತದೆ. ಪ್ರತಿ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಕರೆತರಲು ಕೆಎಸ್ ಆರ್ ಟಿಸಿ ಮತ್ತು ಖಾಸಗಿ  ಬಸ್ ವ್ಯವಸ್ಥೆ ಮಾಡಲಾಗಿದ್ದು,  ಯಾರಾದರೂ ಒಬ್ಬ ಅಧಿಕಾರಿ ಇರಬೇಕು.‌ ದೊಡ್ಡ ಶಿಕ್ಷಣ ಸಂಸ್ಥೆಗೆ ಖಾಸಗಿ ಬಸ್ ತರಲು ಸೂಚಿಸಲಾಯಿತು.

ಡಿಸಿ ಕೆಎಸ್ಆರ್ ಟಿಸಿಗೆ 800 ಬಸ್ ಬರಬೇಕಿದೆ ಎಂದು ಕೇಳಿದಾಗ ಡಿಸಿ ಇಲ್ಲ ನಮಗೆ 100 ಬಸ್ ಒದಗಿಸಬಹುದು ಎಂದರು‌. ಇದಕ್ಕೆ ಶಾಕ್ ಆದ ಸಚಿವ ಶರಣಪ್ರಕಾಶ್ ಪಾಟೀಲ್ ksrtc ಎಂಡಿ ಹತ್ತಿರ ಮಾತನಾಡುವುದಾಗಿ ತಿಳಿಸಿದರು. 2000 ಟ್ರಾಕ್ಸ್ ಗಳಲ್ಲಿ ಸಭೀಕರನ್ನ ಕರೆತರಲು ಸೂಚಿಸಲಾಯಿತು.

ಹುಬ್ಬಳ್ಳಿ ಮತ್ತು ಧಾರವಾಡದಿಂದ ಮಕ್ಕಳನ್ನ ಕರೆತರಲು ಮಧು ಬಂಗಾರಪ್ಪ ಸೂಚಿಸಿದರು. 600 ಬಸ್ ಗಳು ಶಿವಮೊಗ್ಗ ಜಿಲ್ಲೆಗೆ ಬೇಕಿದೆ. ಜನವರಿ 6 ರಂದು ಮತ್ತೊಂದು ಸಭೆ ನಡೆಸಿ‌ ಖಾಸಗಿಯವರು ಭಾಗಿಯಾಗಲು ಸೂಚಿಸುವಂತೆ ಮಧು ಸಭೆಗೆ ತಿಳಿಸಿದರು. ಗ್ರಾಮಪಂಚಾಯಿತಿಯಲ್ಲಿ ಪ್ರಚಾರ ನೀಡಲು ಸೂಚಿಸಲಾಯಿತು.

ಆಹ್ವಾನ ಪತ್ರಿಕೆ ರಚಿಸಲು. ಆಹ್ವಾನ ಪತ್ರಿಕೆಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಸರು ಇರಲು ಸೂಚಿಸಲಾಯಿತು. ಜನವರಿ 11 ಗಂಟೆಗೆ ಕಾರ್ಯಕ್ರಮ ಆರಂಭಿಸಿದರೆ 12 ಕ್ಕೆ ಸಿಎಂ ಸಿದ್ದರಾಮಯ್ಯರನ್ನ‌ಕರೆತರಲು ಸಭೆ ನಿರ್ಣಯಿಸಿತು. 2 ಗಂಟೆಯ ಒಳಗೆ ಕಾರ್ಯಕ್ರಮ‌ ಮುಗಿದರೆ ದೂರದವರು ತಮ್ಮ ಊರನ್ನ ಸಂಜೆ ಒಳಗೆ ತಲುಪುವಂತೆ ಸಭೆ ತೀರ್ಮಾನಿಸಿತು‌.

ಐಟಿಐ ವಿದ್ಯಾರ್ಥಿಗಳು ಸಧ್ಯಕ್ಕೆ ಕಾರ್ಯಕ್ರಮಕ್ಕೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಜನವರಿ 8 ರಿಂದ ಸಚಿವ ಶರಣ್ ಪ್ರಕಾಶ್ ಪಾಟೀಲ್ ಶಿವಮೊಗ್ಗದಲ್ಲಿ ಉಳಿದುಕೊಂಡು ಕಾರ್ಯಕ್ರಮ ನಿರ್ದೇಶಿಸಲಾಯಿತು

ಇದನ್ನೂ ಓದಿ-https://suddilive.in/archives/6079

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373