ಉದ್ಯೋಗ ಸುದ್ದಿಗಳು

ಆರ್ ಎಫ್ ಒ ರಾಜೇಶ್ ಮತ್ತು ಶಮಿವುಲ್ಲಾ ಅಮಾನತ್ತು

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ವಲಯ ಆರ್ ಎಫ್ ಒ ರಾಜಶೇಖರ್ ಕೆ.ಆರ್ ಮತ್ತು ಕೂಡ್ಲಿಗೆರೆ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಫಿವುಲ್ಲಾ ಎಂಬರನ್ನ  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಬ್ರಿಜೇಶ್ ಕುಮಾರ್ ಧೀಕ್ಷಿತ್ ಕರ್ತವ್ಯದಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ಭದ್ರಾವತಿ ವಲಯದ ಕಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 41 ರ ಜೇಡಿಕಟ್ಟೆ 1985 ರ ಎಂಪಿಎಂ ನೆಡುತೋಪಿನಿಂದ 500-600 ನೀಲಗಿರಿ ಮರ ಕಡಿತಲೆಯಾಗಿತ್ತು. ಈ ಕಡಿತಲೆಯನ್ನ  ಜುಲೈ 10 ರಂದು ನಡೆದಿತ್ತು.

ಈ ಕೂಗು ಬಹಳ ಗಂಭೀರವಾಗಿ ಕೇಳಿ ಬಂದ ಬೆನ್ನಲ್ಲೇ, ಅರಣ್ಯ ಜಾಗೃತ ದಳ ತನಿಖೆ ನಡೆಸಿತ್ತು. ಸಿಎನ್ ಒ 8287 ಕ್ರಮಸಂಖ್ಯೆಯ ಲಾರಿಯಲ್ಲಿ ಅಕ್ರಮ ನೀಲಿಗಿರಿ ಮರಗಳ ಕಳ್ಳ ಸಾಗಾಣಿಕೆ ಮಾಡಲಾಗಿದ್ದು. ಕರ್ತವ್ಯದಲ್ಲಿದ್ದ ಆರ್ ಎಫ್ ಓ ರಾಜೇಶ್ ಕೆ.ಆರ್. ಮತ್ತು ಉಪ ವಲಯ ಅರಣ್ಯಾಧಿಕಾರಿ ಶಫಿವುಲ್ಲಾರು ನಿರಂತರವಾಗಿ ಗುತ್ತಿಗೆದಾರೊಂದಿಗೆ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ರಾಜೇಶ್ ಅವರನ್ನ ತನಿಖೆಗೊಳಪಡಿಸಿದ ಜಾಗೃತದಳಕ್ಕೆ ಉತ್ತರ ಸಿಕ್ಕಿದ್ದು ಶೂನ್ಯವೇ.  ಪ್ರಕರಣಕ್ಕೂ ಮತ್ತು ತಮಗೂ ಯಾವುದೇ ಸಂಬಂಧವಿಲ್ಲವೆಂದು ಆರ್ ಎಫ್ ಒ ರಾಜೇಶ್ ಹೇಳಿಕೆ ನೀಡಿದ್ದರು. ಈ ಮಧ್ಯೆ ದೂರುದಾರರಾದ ಪ್ರಕಾಶ್ ಲಿಗಾಡಿರವರು ಪ್ರಕರಣಕ್ಕೆ ಸಾಕಷ್ಟು ದಾಖಲಾತಿ ನೀಡಿದ್ದರು‌. ಮೊಬೈಲ್ ನ ವಾಯ್ಸ್ ರೆಕಾರ್ಡ್ ಈ ಎಲ್ಲಾ ಪ್ರಕರಣಕ್ಕೆ ತಿರುವು ನೀಡಿದೆ ಎಂದು ಅಮಾನತ್ತು ಪತ್ರದಲ್ಲಿ ಉಲ್ಲೇಖವಾಗಿದೆ.

ಅದರಂತೆ ಶಫಿವುಲ್ಲಾರವರು ಹೇಳಿಕೆಯ ಪ್ರಕಾರ ಇಲಾಖಾ ಕೆಲಸಕ್ಕೆ ನೀಲಗಿರಿ ಕಂಬಗಳು ಅವಶ್ಯಕತೆ ಇದೆ ಸಾಗಾಣಿಕೆ ಮಾಡಿಕೊಡಿ ಎಂದು ಕೇಳಿದ್ದರಿಂದ ಶಫಿವುಲ್ಲಾ ಸಹಕರಿಸಿದ್ದರು ಎಂಬ ವರದಿ ಹೊರಗೆಬಿದ್ದಿದೆ. ಅಲ್ಲದೆ ತನಿಖೆ ಪೂರೈಸಿದ ಜಾಗೃತಿದಳ ಶಿಸ್ತಿ ಪ್ರಾಧಿಕಾರ ಕಾರಣಕೇಳಿ ನೋಟೀಸ್ ಸಹ ಜಾರಿ ಮಾಡಿತ್ತು.

ಕಾರಣಕೇಳಿ ನೋಟೀಸ್ ಗೂ ಸಹ ಇಬ್ಬರು ಅಧಿಕಾರಿಗಳು ಸಂಬಂಧವಿಲ್ಲವೆಂಬ ಉತ್ತರ ನೀಡಿದ ಮೇರೆಗೆ ಶಿಸ್ತು ಪ್ರಾಧಿಕಾರ ಇಬ್ಬರನ್ನೂ ಅಮಾನತ್ತು ಪಡಿಸಿ ಆದೇಶಿಸಿದ್ದಾರೆ. ಎಂಪಿಎಂ ನಲ್ಲಿ ನಡೆದ ಭ್ರಷ್ಠಾಚಾರ ನಡೆದರೂ  ಎಂಪಿಎಂನ ಅರಣ್ಯ ಅಧಿಕಾರದ ವಿರುದ್ಧ ಕ್ರಮ ಜರುಗಿಸಿಲ್ಲವೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಕ್ಷೇಪಿಸಿದ್ದಾರೆ.

ಶಿವಕುಮಾರ್ ಆಕ್ಷೇಪ

ಎಂಪಿಎಂ ಗೆ ಸಂಭಂದಿಸಿದ Drfo.Rfo .Dfo.ಗಳಿದ್ದರು ಎಂಪಿಎಂ ಅರಣ್ಯದಲ್ಲಿ 500 600 ಮರಗಳ ಕಡಿತಲೆಯಾದರೂ ಕರ್ತವ್ಯದಲ್ಲಿ ಇರಲ್ಲಿಲ್ಲವೇ ,? ಎಂಪಿಎಂ ಅರಣ್ಯಾಧಿಕಾರಿಗಳ ಗಮನಕ್ಕೆ ಏಕೆ ಬರಲಿಲ್ಲ ಮತ್ತು ಆ ಅಧಿಕಾರಿಗಳು ಏಕೆ ದೂರು ದಾಖಲಿಸಿಲ್ಲ ಎಂಪಿಎಂ ಅರಣ್ಯ ಅಧಿಕಾರಿಗಳೇ ಮರಕಟಾವು ಮಾಡಿಸಿ ಬೇಕಾದವರಿಗೆ ಸಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತದೆ ಇವರೆಲ್ಲರ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು ಆದರೆ ಏಕ ಪಕ್ಷಿಯ ನಿರ್ಧಾರ ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಕ್ಷೇಪಿಸಿದ್ದಾರೆ

ಪ್ರಕಾಶ್ ಲಿಗಾಡಿ ಸುದ್ದಿಗೋಷ್ಠಿ

ಅರಣ್ಯ ವಲಯ ಅಧಿಕಾರಿ ರಾಜೇಶ್ ಕೆ.ಆರ್ ಯಾವುದೇ ಮೇಲಿನ ಅಧಿಕಾರಿಗಳ ಆದೇಶವಿಲ್ಲದೆ ನೀಲಗಿರಿ ಮರಗಳನ್ನ ಕಳ್ಳತನ ಮಾಡಿದ್ದು ಇವರ ವಿರುದ್ಧ ಡಿಎಸ್ ಎಸ್ ನ ಮುಖಂಡ ಪ್ರಕಾಶ್ ಲಿಗಾಡಿ ಇಂದು ಪತ್ರಿಕಾಗೋಷ್ಠಿ ನಡೆಸಿ ದೂರು ಕೊಟ್ಟರು ಯಾವುದೇ ಕ್ರಮ ಜರುಗಿಸಿಲ್ಲ. ರಜೆಯ ಮೇಲಿದ್ದ ರಾಜೇಶ್ ಭದ್ರಾವತಿ ಶಾಸಕರ ಆದೇಶವನ್ನೂ ಓವರ್ ಟೇಕ್ ಮಾಡಿ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಆಕ್ಷೇಪಿಸಿದ್ದರು. ಈ ಎಲ್ಲಾ ಆಕ್ಷೇಪಕ್ಕೆ ಅರಣ್ಯ ಇಲಾಖೆ ಅಮಾನತ್ತು ಪಡಿಸಿ ಆದೇಶಿಸಿದೆ.

ಇದನ್ನೂ ಓದಿ-https://suddilive.in/archives/3862

Related Articles

Leave a Reply

Your email address will not be published. Required fields are marked *

Back to top button