ರಾಜ್ಯದಲ್ಲಿ ವಿದ್ಯುತ್ ಶಾಕ್ ಹೆಚ್ಚಾಗಿದೆ ಬಿಎಸ್ ವೈ

ಸುದ್ದಿಲೈವ್/ಶಿವಮೊಗ್ಗ

ಬೆಳಗಾವಿಯಲ್ಲಿ ಅಧಿವೇಶನ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ತಡಿಯೂರಪ್ಪ ಪ್ರತಿಕ್ರಿಯಿಸಿದರು. ಬೆಳಗಾವಿಯಲ್ಲಿ ದೊಡ್ಡ ಸೌಧ ಕಟ್ಟಿದ್ದೇವೆ. ಅಷ್ಟೆಲ್ಲಾ ಖರ್ಚು ಮಾಡಿ ಸೌಧ ಕಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ವಿನೋಬನಗರದಲ್ಲಿ ಮಾತನಾಡಿದ ಅವರು ಅಲ್ಲಿ ಅಧಿವೇಶನ ನಡೆಯಲಿಲ್ಲ ಅಂದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು ಅಂತಿಮವಾಗಿ ಸರಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಅದು ಅವರಿಗೆ ಬಿಟ್ಟಿದ್ದು ಎಂದರು.
ಲೋಡ್ ಶೆಡ್ಡಿಂಗ್ ವಿಚಾರ
ರಾಜ್ಯಾದ್ಯಂತ ಈಗಾಗಲೇ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ವಿದ್ಯುತ್ ಶಾಖ್ ಎಲ್ಲರಿಗೂ ಆಗಿದೆ. ಸರಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯ ಪ್ರವಾಸ ವಿಚಾರ
ಹಲವು ಬಾರಿ ರಾಜ್ಯಪ್ರವಾಸದ ಬಗ್ಗೆ ಪ್ರಸ್ತಾಪಿಸಿದಂತೆ ಇವತ್ತು ಸಹ ರಾಜಾಹುಲಿ ರಾಜ್ಯ ಪ್ರವಾಸದ ಬಗ್ಗೆ ಮತ್ತೆ ಪುನರುಚ್ಚಿಸಿದ್ದರು. ನಾನು ಈಗಾಗಲೇ ಪ್ರವಾಸ ಆರಂಭಿಸಬೇಕಿತ್ತು. ಹಬ್ಬ ಎಲ್ಲಾ ಮುಗಿಯಲಿ ಅಂತಾ ಸುಮ್ಮನಿದ್ದೇನೆ. ಹಬ್ಬ ಮುಗಿದ ನಂತರ ಎಲ್ಲರೂ ಒಟ್ಟಿಗೆ ಪ್ರವಾಸ ಮಾಡ್ತೀವಿ ಎಂದರು.
ಎಸ್ ಇಪಿ ಶಿಕ್ಷಣ ತಜ್ಞರ ನೇಮಕ ವಿಚಾರ
ಎಸ್ ಇಪಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
