ಸ್ಥಳೀಯ ಸುದ್ದಿಗಳು

ಜಿಲ್ಲಾ‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಚಂದ್ರಭೂಪಾಲ್ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಮಟ್ಟದ ಅಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಉಸ್ತುವಾರಿಗಳಾದ ಶ್ರೀ ಸಿ.ಎಸ್. ಚಂದ್ರಭೂಪಾಲ ಅವರನ್ನು ನೇಮಕಮಾಡಿ
ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿ.ಎಸ್.ಚಂದ್ರಭೂಪಾಲರವರು ಕಾಂಗ್ರೆಸ್
ಪಕ್ಷದಲ್ಲಿ ಹಿರಿಯ ಕಾರ್ಯಕರ್ತರಾಗಿ ನಿತ್ಯಾ
ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿಸುತ್ತಿದ್ದಾರೆ . ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಸಂಯೋಜಕ ರಾಗಿ ಮತ್ತು ಅಹಿಂದ ಸಂಘಟನೆಯಜಿಲ್ಲಾ ಅಧ್ಯಕ್ಷರಾಗಿ ಸಾರ್ವಜನಿಕರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳು ಈಗಾಗ ಲೇ ರಾಜ್ಯದಲ್ಲಿ ಜಾರಿಗೊಂಡಿದ್ದು ಈ ಐದು ಗ್ಯಾರಂಟಿ ಯೋಜನೆಯ ಲಾಭವು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಐದು ಗ್ಯಾರಂಟಿ ಗಳು ಯೋಜನೆಗಳ ಅನುಷ್ಠಾನಪ್ರಾಧಿಕಾರವನ್ನು
ರಾಜ್ಯ ಸರ್ಕಾರ ರಚನೆ ಮಾಡಿ ಶಿವಮೊಗ್ಗ
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರುಗಳನ್ನು ಸರ್ಕಾರ ನೇಮಕ ಮಾಡಿದೆ.

ಈ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿ ಸುತ್ತಾರೆ. ಅದರಂತೆ ಶಿವಮೊಗ್ಗದ ಅಫ್ತಾಬ್ ಪರ್ವೇಜ್ , ಭದ್ರಾವತಿಯ ಎಸ್ ಮಲ್ಲಿಕಾರ್ಜುನ, ಬಸವರಾಜಪ್ಪ, ಆರ್. ಶಿವಣ್ಣ ಉಪಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರೆಲ್ಲರೂ ಜಿಲ್ಲಾ ಮಟ್ಟದ ಪ್ರಾಧಿಕಾರದ ಪದಾಧಿಕಾರಿಗಳಾಗಿದ್ದಾರೆ.

ಮಧು ಹೆಚ್. ಎಂ, ಹೊಸನಗರದ ಮಾರುಪುರದ ಚಿದಂಬರ, ಭದ್ರಾವತಿಯ ಮಣಿಶೇಖರ್, ಸೊರಬದ ಜಯಶೀಲಪ್ಪ, ತೀರ್ಥಹಳ್ಳಿಯ ಶಚೀಂದ್ರ ಹೆಗಡೆ, ಸಾಗರದ ಬಿ.ಆರ್.ಜಯಂತ್, ಶಿಕಾರಿಪುರದ ನಾಗರಾಜ್ ಗೌಡ ಈ 7 ಜನ ತಾಲೂಕು ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ತಾಲೂಕು ಮಟ್ಟದ ಅಧ್ಯಕ್ಷರಾಗಿದ್ದರೆ ಜಿಲ್ಲಾ ಮಟ್ಟದ ಪ್ರಾಧಿಕಾರದ ಸದಸ್ಯರಾಗಲಿದ್ದಾರೆ.

ಹೊಸನಗರದ ಅಮೀರ್ ಆಮ್ಲಾ, ಸೊರಬದ ಎಸ್ ಪ್ರಭಾಕರ್, ಸಾಗರದ ಭವ್ಯ ಕೃಷ್ಣಮೂರ್ತಿ, ಶಿವಮೊಗ್ಗದ ರಾಹುಲ್ ಎಂ, ವಿಜಯಕುಮಾರ್ ಎಸ್ ಮೊದಲಾದವರು ಸದಸ್ಯರಾಗಲಿದ್ದಾರೆ.

ಇದನ್ನೂ ಓದಿ-https://suddilive.in/archives/10710

Related Articles

Leave a Reply

Your email address will not be published. Required fields are marked *

Back to top button