ಸ್ಥಳೀಯ ಸುದ್ದಿಗಳು
ಪೆಟ್ಟಿಗೆಗಳು ಹೆಣಬಾರ-ಓರ್ವ ಪೊಲೀಸರ ವಶಕ್ಕೆ

ಸುದ್ದಿಲೈವ್/ಶಿವಮೊಗ್ಗ

ರೈಲ್ವೆ ನಿಲ್ದಾಣದ ಬಳಿ ಎರಡು ಪೆಟ್ಟಿಗೆ ಪತ್ತೆಯಾದ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನ ಹಿಂವಾಲಿಸಿಕೊಂಡು ಶಿವಮೊಗ್ಗ ಪೊಲೀಸರು ತಿಪಟೂರಿಗೆ ತೆರಳಿರುವುದಾಗಿ ತಿಳಿದು ಬಂದಿದೆ. ವಿಚಾರಣೆಗಾಗಿ ಆತನನ್ನ ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಕಬ್ಬಿಣದ ಪೆಟ್ಟಿಗೆ ಆತಂಕ ಮೂಡಿಸಿತ್ತು. ಸುತ್ತಲುಮರಳಿನ ಚೀನ ಹಾಕಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪತ್ತೆಯಾದ ಪೆಟ್ಟಿಗೆಯ ಮೇಲೆ ಬಾಂಗ್ರಾದ ವಿಳಾಸ ಬರೆದಿರುವುದು ಆತಂಕ ಮೂಡಿಸಿದೆ. ಪಟ್ಟಿಗೆ ಪತ್ತೆಯಾಗಿರುವ ಸ್ಥಳದಲ್ಲಿ ದು ಹಳದಿ ಬಣ್ಣದ ಬೋರ್ಡ್ ನ ಕಾರು ಸುತ್ತಾಡಿರುವುದು ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ.
ಈ ಅನುಮಾನದ ಮೇರೆಗೆ ಪೊಲೀಸರು ತಿಪ್ಪಟೂರಿನಲ್ಲಿ ಪತ್ತೆಯಾದ ವ್ಯಕ್ತಿಯನ್ನಬಿಂಬಾಲಿಸಿ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಬಾಂಬ್ ಸ್ಕ್ವಾಡ್ ಬರಬೇಕಿದೆ. ಪೆಟ್ಟಿಗೆ ಬಾರಿ ಭಾರವಾಗಿದೆ ಎಂದು ಹೇಳಲಾಗುತ್ತಿದೆ. ಬಾಂಬ್ ಸ್ಕ್ವಾಡ್ ನಿಂದ ಏನು ಎತ್ತ ಎಂಬುದರ ಬಗ್ಗೆ ಮಾಹಿತಿ ತಿಳಿಯಳಿದೆ.
ಇದನ್ನೂ ಓದಿ-https://suddilive.in/archives/2507
