ಸ್ಥಳೀಯ ಸುದ್ದಿಗಳು

ಅ.14, 15 ರಂದು ಶಿವಮೊಗ್ಗದಲ್ಲಿ ಕನ್ಯಾದಾನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೆಸರಾಂತ ಸಹ್ಯಾದ್ರಿ ರಂಗತರಂಗ ತಂಡವು ಕನ್ಯಾದಾನ ನಾಟಕ ಪ್ರದರ್ಶನ ಮಾಡಲಿದೆ. ನಾಟಕ ಇದೇ ತಿಂಗಳ 14, 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.ಆಪ್ತರಂಗ ಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ. ಆದರೆ ಪಾಸ್ ಕಡ್ಡಾಯವಾಗಿದೆ.  :ಪಾಸ್ ಗಾಗಿ  +91 94499 25746 ಪರ್ಕಿಸ ಬಹುದಾಗಿದೆ.

ಕನ್ಯಾದಾನ ನಾಟಕದ ಲೇಖಕರು: ವಿಜಯ ದೋಂಡೋಪಂತ್ ತೆಂಡೂಲ್ಕರ್.

ವಿಜಯ ದೋಂಡೋಪಂತ್ ತೆಂಡೂಲ್ಕರ್ ಖ್ಯಾತ ಮರಾಠಿ ಚಿಂತಕ. ಪ್ರಬಂಧಕಾರರಾಗಿ, ಪತ್ರಕರ್ತರಾಗಿ ಟಿವಿ/ಸಿನಿಮಾ ಸಂಭಾಷಣಕಾರರಾಗಿರುವ ಇವರು ಈ ದೇಶ ಕಂಡ ಓರ್ವ ವಿಶಿಷ್ಟ ಮರಾಠಿ ನಾಟಕಕಾರ. “ಶಾಂತ! ಕೋರ್ಟ ಚಾಲೂ ಆಹೇ”, “ಘಾನ್ಷಿರಾಂ ಕೋತ್ವಾಲ್” “ಸಖಾರಾಂ ಬಿಂದರ್”…… ಮುಂತಾದುವು ಇವರ ಪ್ರಖ್ಯಾತ ನಾಟಕಗಳು. ಸುಮಾರು ಐದು ದಶಕಗಳ ಕಾಲ ಮರಾಠಿ ರಂಗ ಭೂಮಿಯಲ್ಲಿ ಸಕ್ರಿಯರಾಗಿದ್ದ ತೆಂಡೂಲ್ಕರ್ ಭಾರತೀಯ ರಂಗ ಭೂಮಿಗೆ ಹೊಸ ಅಲೆ ಪರಿಚಯಿಸಿದವರಲ್ಲಿ ಪ್ರಮುಖರು.

ದೇಶದ ಶ್ರೇಷ್ಠ ನಾಟಕಕಾರ ಚಿಂತಕ ವಿಜಯ್ ತೆಂಡೂಲ್ಕರ್ ಅವರು ಮರಾಠಿಯಲ್ಲಿ ಬರೆದ ಈ ನಾಟಕವನ್ನು ಡಾ. ಹೆಚ್.ಎಸ್. ನಾಗಭೂಷಣ ಅವರು ಅನುವಾದಿಸಿದ್ದಾರೆ. ಡಾ. ಹೆಚ್.ಎಸ್. ನಾಗಭೂಷಣ ಅವರ ಶಿವಮೊಗ್ಗ ಕಮಲಾ ನೆಹರೂ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ನಾಟಕ: ಕನ್ಯಾದಾನ

ತೆಂಡೂಲ್ಕರರ ನಾಟಕಗಳು ಸಮಾಜದ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಕಾರಣಕ್ಕಾಗಿ ಅನೇಕ ಚರ್ಚೆಗಳಿಗೆ ಅವಕಾಶ ನೀಡುತ್ತವೆ. 1983 ರಲ್ಲಿ ಪ್ರಕಟವಾದ ‘ಕನ್ಯಾದಾನ’ ಗಂಡು ಹೆಣ್ಣಿನ ಸಂಬಂಧ ಹಾಗು ಭಾರತೀಯ ಸಮಾಜದ ಜಾತಿ ಪದ್ಧತಿ ಬಗ್ಗೆ ವಿಶೇಷ ಬೆಳಕು ಚೆಲ್ಲುವಂತಹುದು. “ಈ ರೀತಿಯ ಸಂಕೀರ್ಣ ಸಮಸ್ಯೆಗಳಿಗೆ ಒಂದು ಅಂತಿಮ ಪರಿಹಾರ ಸಾಧ್ಯ” ಎಂಬುದು ನಮ್ಮ ಕೇವಲ ಒಂದು ಆಶಯವಾಗಿಯೇ ಉಳಿದುಬಿಟ್ಟಿದೆ. ಆದರ್ಶ ಹಾಗು ವಾಸ್ತವ- ಈ ಎರಡು ತುದಿಗಳ ನಡುವೆ ಹೊಯ್ದಾಡುವ ಈ ನಾಟಕ ಅನೇಕ ಸಂದರ್ಭಗಳಲ್ಲಿ ಇಂದಿಗೂ ಪ್ರಸ್ತುತವೆನಿಸುತ್ತಿದೆ.

ನಿರ್ದೇಶಕ: ಹಾಲಸ್ವಾಮಿ ಆರ್ ಎಸ್.

ಸಮಾಜ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ವೃತ್ತಿಯಲ್ಲಿ ಪತ್ರಕರ್ತರು. ನಾವಿಕ, ಕನ್ನಡಪ್ರಭ, ಸುವರ್ಣನ್ಯೂಸ್, ವಿಜಯ ಕರ್ನಾಟಕ, ಸ್ಪಂದನ ಟಿವಿ, ಪಬ್ಲಿಕ್ ಟಿವಿ, ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡಿ ಈಗ ಟಿವಿ ಭಾರತ್ ವಾಹಿನಿಯ ಸಂಪಾದಕರಾಗಿದ್ದಾರೆ. ಮೂರು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಇವರ ನಿರ್ದೇಶನದ ಪ್ರಮುಖ ನಾಟಕಗಳೆಂದರೆ ಗಾಂಧಿ ವರ್ಸಸ್ ಗೋಡ್ಸೆ, ದ್ವಂದ್ವ ದ್ವಾಪರ, ಯಾಪಿಲ್ಲು, ಕುದುರೆ ಮೊಟ್ಟೆ. ನೀರೆಲ್ಲವೂ ತೀರ್ಥ(ಕುವೆಂಪು ನಾಟಕಗಳ ಕೊಲಾಜ್). ಇದಲ್ಲದೇ ಗಂಗಾಲಹರಿ ಹಾಗು ಓ ಲಕ್ಷ್ಮಣ, ಹೆಳವನಕಟ್ಟೆ ಗಿರಿಯಮ್ಮ ನಾಟಕಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ.

ಅಭಿನಯ ತಂಡದಿಂದ ರಂಗ ಪಯಣ ಆರಂಭಿಸಿದ ಇವರು ಶಿವಮೊಗ್ಗ ರಂಗ ತಂಡಗಳ ಒಕ್ಕೂಟದ ಸ್ಥಾಪಕ ಕಾರ್ಯದರ್ಶಿ, ಹಾಗೆಯೇ ನಂ ಟೀಂ ತಂಡದ ಸ್ಥಾಪಕರಲ್ಲಿ ಒಬ್ಬರು. ಕರ್ನಾಟಕ ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜನಪದ ಜಾತ್ರೆಯ ಜಿಲ್ಲಾ ಸಂಚಾಲಕರಾಗಿ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ, ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ನಾಟಕ ಅಕಾಡೆಮಿ ಇನ್ನಿತರ ಸಂಸ್ಥೆಗಳಿಗೆ ರಾಷ್ಟ್ತೀಯ ಹಾಗು ಅಂತರಾಷ್ಟ್ರೀಯ ನಾಟಕೋತ್ಸವ/ ಸ್ಪರ್ಧೆಗಳು/ ರಂಗ ಶಿಬಿರಗಳಿಗೆ ಸಂಚಾಲಕರಾಗಿ, ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಈಗ ಸಹ್ಯಾದ್ರಿ ರಂಗ ತರಂಗಕ್ಕೆ ಕನ್ಯಾದಾನ ನಾಟಕ ನಿರ್ದೇಶನ ಮಾಡುತ್ತಿದ್ದಾರೆ.

ಕನ್ಯಾದಾನ ನಾಟಕ ಪಾತ್ರವರ್ಗದಲ್ಲಿ

ಡಾ. ಎಚ್ ಎಸ್ ನಾಗಭೂಷಣ
ಮಧುರ ಬಿ.ಎಸ್.
ಚೇತನ್ ರಾಯನಹಳ್ಳಿ
ದೀಪಿಕ ಎಸ್.
ಅರ್ಜುನ್ ಎಂ.
ಶ್ರೀಕಂಠ ಪ್ರಸಾದ್
ಶ್ರೀನಿಧಿ ದೇಶಪಾಂಡೆ
ನಿರ್ಮಾಣ ನಿರ್ವಹಣೆ- ಶಂಕರ್ ಬೆಳಲಕಟ್ಟೆ
ಸಂಗೀತ: ರವಿ ಶಂಕರ್ ಹಚ್.ಕೆ.
ಮೃದಂಗ: ಕೃಷ್ಣಮೂರ್ತಿ
ಬೆಳಕು: ಮಂಜುನಾಥ ಕೂದುವಳ್ಳಿ (ಮಂಕು)

ಇದನ್ನೂ ಓದಿ-https://suddilive.in/archives/931

Related Articles

Leave a Reply

Your email address will not be published. Required fields are marked *

Back to top button