ಗಾಯಾಳು ಭರತ್ ಹೇಳಿಕೆ ಪಡೆದು ತನಿಖೆ ಆರಂಭಿಸಲಾಗುವುದು-ಎಸ್ಪಿ ವಿಥುನ್ ಕುಮಾರ್

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿ ಅರಳಸುರಳಿಯಲ್ಲಿ ಮೂವರು ಸಾವುಕಂಡ ಪ್ರಕರಣದ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತೀರ್ಥಹಳ್ಳಿ ತಾಲೂಕಿನ ಗ್ರಾಮದಲ್ಲಿ ಮೂರು ಸಾವು ಆಗಿದೆ. ರಾಘವೇಂದ್ರ, ನಾಗರತ್ನ, ಶ್ತೀರಾಮ ಮೃತಪಟ್ಟಿದ್ದಾರೆ. ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಎರಡು ಮೂರು ಕ್ಲೂ ಸಿಕ್ಕಿದೆ. ತನಿಖೆ ಮುಂದುವರಿದಿದೆ. ತನಿಖೆ ನಂತರ ಏಕೆ ಆಗಿದೆ ಅಂತಾ ಗೊತ್ತಾಗಲಿದೆ. ಮನೆಯ ಒಂದು ರೂಂ ನಲ್ಲಿ ಈ ಘಟನೆ ನಡೆದಿದೆ. ಮೂರು ಮೃತದೇಹಗಳು ಒಂದರ ಮೇಲೊಂದು ಬಿದ್ದಿದೆ. ಮನೆಯ ಒಳಗಡೆ ಕೆಲವು ಅಂಶ ಪತ್ತೆಯಾಗಿದೆ ಎಂದು ತಿಳಿಸಿದರು.
ಗಾಯಗೊಂಡಿರುವ ಭರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತರಿಕೆ ಕಂಡಮೇಲೆ ಆತನ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು. ತನಿಖೆ ಬಳಿಕ ಹೆಚ್ಚಿನ ವಿಚಾರ ಹೊರ ಬರಲಿದೆ. ತನಿಖೆಯಾಗದೇ ಏನು ಹೇಳಲು ಬರುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳು ಆತ್ಮಹತ್ಯೆಯ ಶಂಕೆಯೂ ವ್ಯಕ್ತವಾಗಿತ್ತು. ಆಸ್ತಿ ವಿಚಾರದಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಶಂಕಿಸಲಾಗಿತ್ತು. ಇವೆಲ್ಲದಕ್ಕೂ ತನಿಖೆ ನಂತರವೇ ಉತ್ತರ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ-https://suddilive.in/archives/781
