ತೀರ್ಥಹಳ್ಳಿ ತಾಲೂಕು ತಳಲೆ ಗ್ರಾಮದಲ್ಲಿ ಆನೆ ಹಾವಳಿ-ಮಾಜಿ ಗೃಹಸಚಿವ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಳಲೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಆನೆಗಳ ಹಾವಳಿಯಿಂದೆ ಅಡಿಕೆ ಮತ್ತು ಭತ್ತದ ಫೈರು ಹಾನಿಗೊಳಗಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ ಆನೆಗಳ ಹಾವಳಿಯಿಂದ ಅಡಿಕೆ ಮತ್ತು ಭತ್ತಕ್ಕೆ ಹಾನಿ ಉಂಟಾಗಿದೆ. ಜನ ಭೀತಿಯಲ್ಲಿದ್ದಾರೆ. ಹೆಚ್ಚು ಆನೆಗಳು ಓಡಾಡುವುದರಿಂದ ಆರ್ಥಿಕ ನಷ್ಟದ ಜೊತೆ ಓಡಾಡುವುದಕ್ಕೆ ಭಯವುಂಟಾಗಿದೆ ಎಂದು ಜನರ ಅಳಲಾಗಿದೆ.
ಹಾನಿಗೊಳಗಾದ ತೋಟ ಮತ್ತು ಗದ್ದೆಗೆ ಅರಣ್ಯ ಇಲಾಖೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿರುವೆ. ಅಲ್ಲದೆ ಆನೆಯನ್ನ ಓಡಿಸಲು ಅಧಿಕಾರಿಗೆ ಹೇಳಿರುವೆ ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದರು.
ಆನೆಗಳು ಈ ಭಾಗದಲ್ಲಿ ಇರುವುದು ನಿಜ. ಶೆಟ್ಟಿಹಳ್ಳಿ, ಮಂಡಗದ್ದೆಯ ಭಾಗಗಳಲ್ಲಿ ಕಾಡಾನೆಗಳು ಇರುವುದು ನಿಜ. ಈ ಮೆಕ್ಕೆಜೋಳ ತೆನೆಕಟ್ಟುವ ವೇಳೆ ಸರಿಯಾಗಿ ದಾಳಿ ಇಡುತ್ತವೆ. ಇವು ಒಂದು ಕಡೆ ಕಾಣಿಸಿಕೊಳ್ಳದೆ ಒಂದು ದಿನ ಒಂದು ಭಾಗದಲ್ಲಿ ಕಾಣಸಿಗುತ್ತವೆ. ಇದರಿಂದ ಹೊರಬಂದು ಗ್ರಾಮಗಳಲ್ಲಿ ಹಾವಳಿ ಮಾಡುತ್ತದೆ.
ಭಾನುವಾರ ವಾರ ರಾತ್ರಿ ತಳಲೆ ಗ್ರಾಮದ ನಿರ್ಮಲಾ, ಯೋಗೀಶ್, ಪದ್ಮಾವತಿ, ಉದಯಶೆಟ್ಟಿ, ಪುಷ್ಪಾ, ಸೀತಾಲಕ್ಷ್ಮೀ ಎಂಬುವರ ಅಡಿಕೆ ತೋಟ, ಗದ್ದೆಗಳು ಮತ್ತು ತೋಟದ ಗೇಟುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ-https://suddilive.in/archives/943
