ಸ್ಥಳೀಯ ಸುದ್ದಿಗಳು

ಬೆದರಿಕೆಯ ಪೋಲಿಟಿಕ್ಸ್- ಬಿಎಸ್ ವೈ ನ ಕಟ್ಟಿಹಾಕ್ತಾರ ಈಶ್ವರಪ್ಪ ಮತ್ತು‌ ಕಾಂತೇಶ್?

ಸುದ್ದಿಲೈವ್/ಶಿವಮೊಗ್ಗ

ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ಪಡೆಯುವಲ್ಲಿ ಮಾಜಿ ಡಿಸಿಎಂ ಈಶ್ವರಪ ಮತ್ತು ಅವರ ಪುತ್ರ ಕಾಂತೇಶ್ ಬೆಂಬಲಿಗರ ಮೂಲಕ ಬೆದರಿಕೆ ತಂತ್ರಗಾರಿಕೆಗೆ ಮೊರೆ ಹೋದರಾ? ಎಂಬ ಅನುಮಾನ ಆರಂಭಗೊಂಡಿದೆ. ಹಾವೇರಿಯ ಟಿಕೇಟ್ ಗೆ ಶಿವಮೊಗ್ಗದಲ್ಲಿ ರಾಜಕೀಯ ಚಟುವಟಿಕೆ ಗರಿಬಿಚ್ಚಿಕೊಂಡಿವೆ..

ಇಂದು ಮತ್ತೊಮ್ಮೆ ದೆಹಲಿಗೆ ಹೋಗುವ ಬಿಎಸ್ ವೈ ಕಾರ್ಯಕ್ರಮ ಮುಂದೂಡಲಾಗಿದೆ. ಬಿಎಸ್ ವೈ ಸಹ ಕಾಂತೇಶ್ ಗೆ ಟಿಕೇಟ್ ನೀಡುವ ವಿಚಾರದಲ್ಲಿ ಮತ್ತೊಮ್ಮೆ ಹೈಕಮಾಂಡ್ ಜೊತೆ ಮಾತುಕತೆ ಮಾಡುವುದಾಗಿ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಮಾಜಿ ಡಿಸಿಎಂ ಈಶ್ವರಪ್ಪನವರ ಮನೆಗೆ ನಿನ್ನೆ ಭೇಟಿ ನೀಡಿದ್ದಾರೆ. ಉಬಯಕುಶಲೋಪರಿ ಭೇಟಿ ಎನಿಸಿದರೂ  ಟಿಕೇಟ್ ಹಂಚಿಕೆ ವಿಷಯದಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ ಹಿನ್ನಲೆಯಲ್ಲಿ  ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ಕಾಂತೇಶ್ ಮತ್ತು ಈಶ್ವರಪ್ಪನವರ ಬೆಂಬಲಿಗರೆಂದು ಬಂದವರೆಲ್ಲ ಟಿಕೇಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಇಬ್ಬರನ್ನೂ ಕಣಕ್ಕಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹಾವೇರಿಯಲ್ಲಿ ಕಾಂತೇಶ್ ಮತ್ತು‌ ಶಿವಮೊಗ್ಗದಲ್ಲಿ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ‌ ಎಂದು ಬೆಂಬಲಿಗರು  ಮಾಧ್ಯಮಗಳಿಗೆ ಹೇಳಿರುವುದರಿಂದ ಉಬಯ ನಾಯಕರು ಬೆದರಿಸುವ ತಂತ್ರಗಾರಿಕೆ ಇಳಿದಿದ್ದಾರೆ ಎಂಬ ಅನುಮಾನವೂ ಹುಟ್ಟಿಕೊಂಡಿದೆ.

ಒಂದು ವೇಳೆ ಈಶ್ವರಪ್ಪನವರು, ಸಂಸದ ಬಿ.ವೈ ರಾಘವೇಂದ್ರರ ವಿರುದ್ಧ ಸ್ಪರ್ಧಿಸಿ ಚುನಾವಣೆ ಗೆಲ್ಲದಿದ್ದರೂ, ಮತ ವಿಭಜಿಸಿ, ಬಿಎಸ್ ವೈ ಪುತ್ರನನ್ನ ಸೋಲಿಸುವಲ್ಲಿ ಯಶಶ್ವಿಯಾದರೆ ಈ ಚುನಾವಣೆಯಲ್ಲಿ ಈಶ್ವರಪ್ಪ ಸೋತರು ಗೆದ್ದಂತೆ ಎಂಬ ಲೆಕ್ಕಾಚಾರ ಬೆಂಬಲಿಗರದ್ದು. ಈ ಬೆದರಿಕೆಯ‌ ಮೂಲಕ ಬಿಎಸ್ ವೈರನ್ನ ಕಟ್ಟಿಹಾಕಿ ಕಾಂತೇಶ್ ಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗ್ತಾರಾ ಎಂಬುದು ಕಾದುನೋಡಬೇಕಿದೆ.

ಸಧ್ಯಕ್ಕೆ ಈಶ್ವರಪ್ಪನವರಾಗಲಿ, ಕಾಂತೇಶ್ ಆಗಲಿ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಮಾತನಾಡಿಲ್ಲ.‌ ಆದರೆ ಬೆಂಬಲಿಗರಿಂದ ಹೇಳಿಸುವ ಮೂಲಕ  ಬೆದರಿಕೆಯ ತಂತ್ರಗಾರಿಕೆಗೆ ಇಳಿದಿರುವುದು ಕಂಡು ಬರುತ್ತಿದೆ. ಪಕ್ಷವನ್ನ ತಾಯಿಗೆ ಹೋಲಿಸಿಕೊಂಡು ಓಡಾಡುವ ಈಶ್ವರಪ್ಪನವರು ಈ ಕೆಲಸಕ್ಕೆ ಇಳಿತಾರಾ ಎಂಬುದಕ್ಕೆ ಕಾಲ ಉತ್ತರಿಸಲಿದೆ.

ಒಂದು ವೇಳೆ ಪಕ್ಷದ ವಿರುದ್ಧ ಈಶ್ವರಪ್ಪ ತಿರುಗಿಬಿದ್ದರೆ,  ಪುತ್ರನಿಗಾಗಿ ತಂದೆಯೇ ರೆಬಲ್ ಆದರು ಎಂಬ ಹಣೆಪಟ್ಟಿ ಬರೊದಿಲ್ವಾ? ಪಕ್ಷ ಅವರಿಗೆ ಡಿಸಿಎಂ ಪದವಿ ಕೊಡಿಸಿದೆ. ಅಂತಹ ಮಾತೃ ಪಕ್ಷಕ್ಕೆ ಈಶ್ವರಪ್ಪ ದ್ರೋಹ ಮಾಡಿದಂತಾಗೊಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಕಾಯಬೇಕಿದೆ. ಟಿಕೇಟ್ ಘೋಷಣೆಯ ನಂತರ ಈ ಎಲ್ಲಾ ಊಹಾಪೂಹಗಳಿಗೆ ತೆರೆಬೀಳಲಿದೆ.

ಈಶ್ವರಪ್ಪನವರ ಮಾತು

ಈ ಮಧ್ಯೆ ಈಶ್ವರಪ್ಪ ಮಾಧ್ಯಮಗಳಿಗೆ ಮಾತನಾಡಿ, ಬೆಂಬಲಿಗರು ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಟಿಕೇಟ್ ಕೈತಪ್ಪಿದರೆ, ಅವರೊಂದಿಗೆ ಕುಳಿತು ಚರ್ಚಿಸುವುದಾಗಿ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬಿಎಸ್ ವೈ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮತ್ತು ಶೋಭಾ ಕರಂದ್ಲಾಜೆಗೆ ಟಿಕೇಟ್ ಎಂದಿರುವುದರಿಂದ ಗೊಂದಲ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕಾಂತೇಶ್ ಮಾತು!

ಈಶ್ವರಪ್ಪ ಪುತ್ರ ಕಾಂತೇಶ್, ಹಾವೇರಿಯಿಂದ ಗದಗಿನಿಂದ ಜನ ಬರ್ತಿದ್ದಾರೆ. ನಮ್ಗೆ ವಿಶ್ವಾಸ ಇದೆ ಪಕ್ಷ ನೂರಕ್ಕೆ ನೂರು ಟಿಕೆಟ್ ನೀಡುತ್ತೆ ಅಂತ. ನಮ್ಗೆ ಟಿಕೆಟ್ ಸಿಗುತ್ತದೆ ಅನ್ನುವ ವಿಶ್ವಾಸ ಇದೆ. ಆ ವಿಶ್ವಾಸ ದಲ್ಲಿ ನಾವು ಕಾಯ್ತಾ ಇದ್ದೀವಿ. ಈಗ ಸುಮ್ಮನೆ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರು ಎಬ್ಬಿಸಿದ್ದಾರೆ ಅದನ್ನು ಹೇಳೋಕೆ ಇಷ್ಟ ಪಡಲ್ಲ. ಪಕ್ಷ ನಮಗೆ ಒಳ್ಳೆ ರೀತಿಯಲ್ಲಿ ನಡೆಸಿಕೊಳ್ಳುತ್ತದೆ. ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವ ಕುರಿತು ಚೆರ್ಚೆ‌ ಆಗಿಲ್ಲ ಎಂದು ಸಮಾಧಾನದ ಮಾತನಾಡಿದ್ದಾರೆ.

ಇದನ್ನೂ ಓದಿ-https://suddilive.in/archives/10412

Related Articles

Leave a Reply

Your email address will not be published. Required fields are marked *

Back to top button