ಮತ್ತೊಮ್ಮೆ ಮುನ್ನೆಲೆಗೆ ಬಂದ ವಿಹಂಗಮ ರೆಸಾರ್ಟ್-ವಶಪಡಿಸಿಕೊಂಡ ವಸ್ತುಗಳು ಎಲ್ಲಿ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕು ತೀರ್ಥಹಳ್ಳಿಯ ರೆಸಾರ್ಟ್ ವೊಂದರಲ್ಲಿ ಪೊಲೀಸ್ ದಾಳಿ ನಡೆದು ಪತ್ತೆಯಾದ ಟ್ರೋಫಿಗಳು ಏನಾದವು ಎಂಬುದರ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ.
ಹುಲಿ ಉಗುರು ಪ್ರಕರಣ ಸೆಲೆಬ್ರಟಿಗಳಗೆ ಕಂಟಕವಾಗುತ್ತಿರುವ ಬೆನ್ಬಲ್ಲೇ ಶಿವಮೊಗ್ಗ ಜಿಲ್ಕೆಯ ರೆಸಾರ್ಟ್ ವೊಂದರ ಮೇಲೆ ಪೊಲೀಸ್ ದಾಳಿ ನಡೆದಿತ್ತು. ದಾಳಿಯಲ್ಲಿ ಪತ್ತೆಯಾದ ವನ್ಯಜೀವಿಗಳ ಟ್ರೋಫಿ ಇನ್ನೂ ಪೊಲೀಸ್ ಇಲಾಖೆಯಲ್ಲಿಯೇ ಉಳಿದಿರುವುದು ಕುತೂಹಲ ಮೂಡಿಸಿದೆ.
ಹುಲಿ ಉಗುರು ಪ್ರಕರಣ ರಾಜ್ಯದ್ಯಂತ ಬೆಚ್ಚಿಬೀಳಿಸಿದೆ. ಆದರೆ ಶಿವಮೊಗ್ಗ ತಾಲೂಕಿನ ತೀರ್ಥಹಳ್ಳಿಯ ವಿಹಂಗಮ ರೆಸರ್ಟ್ ಮೇಲಿನ ಪೊಲೀಸ್ ದಾಳಿ ಆಗಸ್ಟ್ 12 ರಂದು ನಡೆದಿತ್ತು. ಈ ದಾಳಿಯಲ್ಲಿ ಡಬ್ಬಲ್ ಬ್ಯಾರೆಲ್ ಬಂದೂಕು, 310 ಜೀವಂತ ಗುಂಡುಗಳು, ಒಂದು ಕತ್ತಿ ಒಂದು ಚಾಕು, ಮೂರು ಕಾಡುಕೋಣದ ಟ್ರೋಫಿಗಳು, 6 ಜಿಂಕೆ ಕೊಂಬಿನ ಟ್ರೋಫಿಗಳು
ಸಿಸಿ ಟಿವಿ ಡಿವಿಆರ್, 51 ಡಿವಿಆರ್ ಪತ್ತೆಯಾಗಿತ್ತು. 1 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಈ ಕುರಿತು ವನ್ಯ ಜೀವಿ ಪ್ರಾಣಿಗಳಾದ ಕಾಡುಕೋಣ, ಮತ್ತು ಜಿಂಕೆಗಳ ಟ್ರೋಫಿ ಅರಣ್ಯ ಇಲಾಖೆಗೆ ಹಸ್ತಾಂತರವಾಗದೆ ಇರುವುದು ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆ ಎಲ್ಲೂ ಈ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಆದರೆ ಇಲಾಖೆ ಖ್ಯಾತ ಪರಿಸರ ವಾದಿ ಮತ್ತು ಪತ್ರಕರ್ತರೊಬ್ಬರಿಗೆ ಪೊಲೀಸ್ ಇಲಾಖೆಯಲ್ಲೇ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿರುವುದು ಕುತೂಹಲ ಮೂಡಿಸಿದೆ.
ಹುಲಿ ಉಗುರು ಇಲ್ಲವೆಂಬುದು ಬಿಟ್ಟರೆ ಖಾಸಗಿ ರೆಸರ್ಟ್ ನಲ್ಲಿ ಪತ್ತೆಯಾದ ಪ್ರಕರಣ ಬಹಳ ಪ್ರಾಮುಖ್ಯತೆ ಪಡೆಯಕೊಳ್ಳುತ್ತಿತ್ತು. ಮೂರು ಕಾಡುಕೋಣ ಮತ್ತು ಜಿಂಕೆಯ ಕೊಂಬುಗಳು ಸಹ ಹುಲಿ ಉಗುರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕಿತ್ತು.
ದಾಳಿ ನಡೆದು ಎರಡು ತಿಂಗಳಿಗೂ ಅಧಿಕ ಅವಧಿಗಳು ಕಳೆದಿದೆ. ಆದರೆ ಅರಣ್ಯ ಇಲಾಖೆ ದಾಳಿ ನಡೆಸುವ ಬಗ್ಗೆ ಪೊಲೀಸ್ ಮಾಹಿತಿ ನಿಡಿದ್ದು ಬಿಟ್ಟರೆ ತನಿಖೆಯಾಗಲಿ ದಾಳಿಯಲ್ಲಿ ಪತ್ತೆಯಾದ ಟ್ರೋಫಿಗಳನ್ನ ಅರಣ್ಯ ಇಲಾಖೆಗೆ ಹಸ್ತಾಂತರಿಸದೆ ಇರುವುದು ಬೆಳಕಿಗೆ ಬಂದಿದೆ. ತನಿಖೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂಬುದಕ್ಕೆ ಕಾರಣ ತಿಳಿಯಬೇಲಿದೆ
ಇದನ್ನೂ ಓದಿ-https://suddilive.in/archives/1858
