ನಗರ‌ ಸುದ್ದಿಗಳು

ಅತಿರುದ್ರಯಾಗದ ಪೂರ್ಣಾಹುತಿ

ಸುದ್ದಿಲೈವ್/ಶಿವಮೊಗ್ಗ

ನಗರದ ವಿನೋಬನಗರದ ಶಿವಾಲಯದಲ್ಲಿ ಲೋಕಕಲ್ಯಾರ್ಥ ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ನಡೆಯುತ್ತಿರುವ ಅತಿರುದ್ರ ಯಾಗದ ಪೂರ್ಣಾಹುತಿ ಕಾರ್ಯಕ್ರಮ ನಡೆದಿದೆ.

ಅತಿರುದ್ರ ಯಾಗದಲ್ಲಿ 11 ಹೋಮಕುಂಡಗಳಲ್ಲಿ ನಡೆದಿದ್ದು 11 ಹೋಮಕುಂಡಕ್ಕೆ 121 ಋತ್ವಿಜರು ನಡೆಸಿಕೊಟ್ಟಿದ್ದಾರೆ. ನಿನ್ನೆ ಮತ್ತು ಇಂದು ಎರಡು ದಿನದ ಈ ಕಾರ್ಯಕ್ರಮದಲ್ಲಿ ನಿನ್ನೆ ಗಂಗೆ ಪೂಜೆ, ಗಣಪತಿ ಪೂಜೆ, ನಾಂದಿ, ಪುಣ್ಯಹ ಉಮಾಮಹೇಶ್ವರ, ಪಂಚಬ್ರಹ್ಮ, ಕಲಶ, ಕದಶ, ರುದ್ರ ಕಲಾಶರಾಧನೆ, ನವಗ್ರಹ, ದುರ್ಗಾ ಸಪ್ತಪದಿ ಕಾರ್ಯಕ್ರಮ ನಡೆದರೆ.

ಇಂದು ಅತಿರುದ್ರ ಮಹಾಯಾಗದ ಪೂರ್ಣಾಹುತಿ ನಡೆದಿದ್ದು ಇಂದಿಗೆ ಯಾಗದ ಸಂಕಲ್ಪ ಸಂಪನ್ನಗೊಂಡಿದೆ.

ಯಾಗದ ಮಹತ್ವ:

“ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” ಎಂಬಂತೆ ಧರ್ಮವೇ ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ನಮ್ಮ ಸನಾತನ ಪರಂಪರೆಯಲ್ಲಿ ಧರ್ಮ ರಕ್ಷಣೆಗೆ ಮಹತ್ವವನ್ನು ನೀಡಿದ್ದಾರೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ.

ಧರ್ಮ ರಕ್ಷಣೆ ಎಂದರೆ ಧರ್ಮಾಚರಣೆ ಮಾಡುವುದು ಎಂದರ್ಥ. ಲೋಕಕಲ್ಯಾಣಾರ್ಥವಾಗಿ ಭಗವಂತನ ಆರಾಧನೆ ಮಾಡುವುದರಿಂದ ಲೋಕಕ್ಕೆ ಒಳಿತಾಗುತ್ತದೆ. ಆ ಉದ್ದೇಶದಿಂದ ಕ್ಷೇತ್ರಗಳಲ್ಲಿ ಲೋಕಕಲ್ಯಾಣಾರ್ಥವಾಗಿ, ಭಗವಂತನ ಪ್ರೀತ್ಯರ್ಥವಾಗಿ ಧರ್ಮ ಕಾರ್ಯಗಳು ಜರುಗುತ್ತವೆ.

ಭಗವಂತನ ಆರಾಧನೆಯಲ್ಲಿ ರುದ್ರಾರಾಧನೆಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ಏಕೆಂದರೆ “ರುಜಂ ದ್ರಾವಯತೀತಿ ರುದ್ರಃ” ಎಂಬಂತೆ ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ಹಾಗೂ ಮನುಷ್ಯನ ದೇಹದಲ್ಲಿರುವ ರೋಗವು ರುದ್ರಾರಾಧನೆಯಿಂದ ಶಮನವಾಗುತ್ತದೆ ಎಂಬುದು ನಂಬಿಕೆ.

ವೇದೋಕ್ತವಾದ ನಮಕ(ರುದ್ರ)ದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, 11 ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, 1331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14641 ಬಾರಿ ಮಾಡಿದರೆ “ಅತಿರುದ್ರಾಭಿಷೇಕವಾಗುವುದು. ಹೀಗೆ ಏಕೋತ್ತರ ವೃದ್ಧಿಯಲ್ಲಿ ಅಭಿಷೇಕ ಮಾಡಿದರೆ ಅಥವಾ ಮಾಡಿಸಿದರೆ ರುದ್ರನು ಪ್ರೀತನಾಗಿ ಸಮಸ್ತ ಲೋಕಕ್ಕೆ ಕಲ್ಯಾಣವನ್ನುಂಟು ಮಾಡುತ್ತಾನೆ.

ಅಲ್ಲದೇ “ಶ್ರುತಂ ಹರತಿ ಪಾಪಾನಿ” ಎನ್ನುವ ಹಾಗೆ ರುದ್ರವನ್ನು ಶ್ರವಣ ಮಾಡುವುದರಿಂದ ನಮ್ಮ ಪಾಪಗಳು ದೂರವಾಗುತ್ತವೆ. ಆ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಮಹಾಯಾಗವನ್ನು ನೆರವೇರಿಸಲಾಯಿತು.

ಅತಿರುದ್ರಯಾಗದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಪುತ್ರ ಕಾಂತೇಶ್, ಪತ್ನಿ ಜಯಲಕ್ಷ್ಮಿ, ಸೊಸೆ ಭಾಗಿಯಾಗಿದ್ದರೆ. ಸಂಸದರಾದ ಬಿ.ವೈ.ರಾಘವೇಂದ್ರ ಮತ್ತು ಪತ್ನಿ ತೇಜಸ್ವಿನಿ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಎನ್.ಜೆ.ರಾಜಶೇಖರ್ (ಸುಭಾಷ್), ಸಮಿತಿಯ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್, ಉಪಾಧ್ಯಕ್ಷರಾದ ಎಚ್.ವಿ.ಮಹೇಶ್ವರಪ್ಪ, ಜ್ಞಾನೇಶ್ವರ್, ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಚ್. ಮಲ್ಲಿಕಾರ್ಜುನ ಸ್ವಾಮಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಧನಂಜಯ ಸರ್ಜಿ, ಸಹ ಸಂಚಾಲಕರಾದ ಮಹಾಲಿಂಗಯ್ಯ ಶಾಸ್ತ್ರಿ, ನಾಗಯ್ಯ ಶಾಸ್ತ್ರಿಗಳು, ಮಹಾನಗರ ಪಾಲಿಕೆ ಸದಸ್ಯ .ವಿಶ್ವಾಸ್, ಅನಿತಾ ರವಿಶಂಕರ್, ಮೋಹನ್ ರೆಡ್ಡಿ ಮತ್ತಿತರರು ಯಾಗದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/10147

Related Articles

Leave a Reply

Your email address will not be published. Required fields are marked *

Back to top button