ನಗರ‌ ಸುದ್ದಿಗಳು

ಮೋದಿ ಸೇರಿ ಬ್ರಹ್ಮ ಬಂದ್ರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪನವರ ಬಂಡಾಯ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಖಚಿತತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಮನೆಯಲ್ಲೇ ಲೋಕಸಭಾ ಚುನಾವಣೆಯ ಕಾರ್ಯಾಲಯ ಆರಂಭಿಸಿದ್ದಾರೆ.

ಮನೆಯಲ್ಲಿ ಚಪ್ಪರ ಹಾಕಿಸಿ ಸಹಸ್ರ ಮೋದಕ ಗಣಪತಿ ಹೋಮ ನಡೆಸಿದ ಮಾಜಿ ಡಿಸಿಎಂ ಐದು ಜನ ಮುತ್ತೈದೆಯರಿಂದ ಕಚೇರಿ ಉದ್ಘಾಟನಾ ಕಾರ್ಯಕ್ರಮ ಆರಂಭಿಸಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಎಲ್ಲಾ ಸ್ವಾಮೀಜಿ ಅವರನ್ನ ಭೇಟಿ ಮಾಡಿದ ಮೇಲೆ ಬೆದರಿಕೆ ಹಾಕಿಸುತ್ತಿದ್ದಾರೆ. ಆದರೆ ಸಾಧು ಸಂತರು, ಜನರು ಗೆದ್ದು ಬಾ ಎಂದು ಆಶೀರ್ವಾದ ನೀಡುತ್ತಿದ್ದಾರೆ ಎಂದರು.

ಬಿಎಸ್ ವೈ ಮತ್ತು ಕುಟುಂಬದ ವಿರುದ್ಧ ಮಾತನಾಡಿದ ತನಗೆ ಮಾತ್ರ ಸ್ವಾಮೀಜಿ ಆಶೀರ್ವಾದ ಬೇಕು ಬೇರೆಯರಿಗೆ ಸಿಗಬಾರದು ಎಂಬ ಮನೋಭಾವ ಎಷ್ಟು ಸರಿ ಎಂದರು.

ಕಮ್ಯೂನಿಸ್ಟ್ ನವರು, ಕಾಂಗ್ರೆಸ್ ನವರು, ಕೇಸರಿ ವೇದಿಕೆಯನ್ನ ಹಂಚಿಕೊಂಡಿದ್ದಾರೆ. ನಾನು ಇನ್ನೂ ಪಕ್ಷ ನನನ್ನ ಉಚ್ಚಾಟಿಸಿಲ್ಲ. ಆದರೆ ಇವರೆಲ್ಲಾ ಬಂದು ಬೆಂಬಲಿಸಿದ್ದಾರೆ ಎಂದರು.

ಕಳೆದ ಬಾರಿ ಬೈಂದೂರು ಹೆಚ್ಚು ಲೀಡ್ ಕೊಟ್ಟಿದೆ ಬಿಜೆಪಿಗೆ. ಈ ಬಾರಿ ನಾವು ಬೈಂದೂರಿಗೆ ಹೋಗಿ ಬಂದ ಮೇಲೆ ನಿಧಾನಕ್ಕೆ ನಮ್ಮ‌ಬೆಂಬಲಕ್ಕೆ ಬರ್ತಾ ಇದ್ದಾರೆ. ಬೈಂದೂರಿನವರು ಸಂಘಟನೆ ಮತ್ತು ಶಕ್ತಿಕೊಡುವುದಾಗಿ ಭರವಸೆ ನೀಡಿದರು.

ಮೋದಿ ಬಂದು ಬೇಡ ಎಂದರೂ ಸ್ಪರ್ಧಿಸುವವನೆ, ಹಾಗೆ ಗೆದ್ದ ಮೇಲೆ ಮೋದಿ ಹತ್ತಿರ ಹೋಗುವವನೆ ಎಂದ ಅವರು, ಬಿಎಸ್ ವೈಗೆ ಎಚ್ಚರಿಕೆ ಕೊಟ್ಟರು. ಹೊಂದಾಣಿಕೆ ರಾಜಕಾರಣ ಈ ಬಾರಿಯೇ ಕೊನೆಯಾಗಲಿದೆ ಎಂದರು.

ಕಾಂತೇಶ್ ಗೆ ಎಂಪಿ ಟಿಕೇಟ್ ಕೊಡಿಸಿ ಓಡಾಡಿ ಗೆಲ್ಲಿಸುವುದಾಗಿ ಹೇಳಿದ್ದರು. ಕೊಡಲಿಲ್ಲ. ಕೇವಲ ಭರವಸೆ ನೀಡ್ತಾರೆ. ಏನೂ ಕೆಲಸ ಆಗ್ತಾ‌ಇಲ್ಲ. ಭದ್ರಾವತಿಯಲ್ಲಿ ಹೋದಾಗ ಕಾರ್ಮಿಕರಿಗೆ ಸ್ಪಷ್ಟ ಚಿತ್ರಣ ನೀಡಿ ನಂತರ ಮಾತನಾಡುವುದಾಗಿ ಹೇಳಿದ್ದೇನೆ. ಬಿಎಸ್ ವೈ ಬಗ್ಗೆ ಜನರಿಗೆ ನಂಬಿಕೆ ಹೆಚ್ಚಿದೆ. ಆದರೆ ನಾನು ಅನುಭವಿಸಿ ಸಾಕಾಗಿ ಹೊರಬಂದಿದ್ದೇನೆ ಎಂದರು.

ಆರ್ ಎಸ್ ನ ಸೂಚನೆ ಮೀರಿಲ್ಲ ಅವರು ಬಂದು ನನನ್ನ ಭೇಟಿ ಆಗಿದ್ದರು. ಕಾರ್ಯಕರ್ತರು ಎಷ್ಟು ದಿನ ನೋವು ಅನುಭವಿಸಬೇಕು. ಅವರಿಗೆ ಹೇಳಿರುವೆ ನನ್ನ ಸ್ಪರ್ಧೆ ಏಕೆ ಮತ್ತು ಗೆದ್ದ ಮೇಲೆ ಏನು ಮಾಡ್ತೀನಿ ಎಂದು ಹೇಳಿದ್ದೇನೆ ಒಪ್ಪಿಕೊಂಡು ಹೋಗಿದ್ದಾರೆ ಎಂದರು.

ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬರ್ತಾ ಇದೆ. ಬಿಎಸ್ ವೈ ಕೈಗೆ ನಲುಗಿ ಈ ಬಾರಿ ಎಷ್ಟು ಸೀಟು ಬರುತ್ತೋ ಗೊತ್ತಿಲ್ಲ. ಆದರೆ 28 ಸ್ಥಾನದಲ್ಲಿ 27 ಎನ್ ಡಿಎ ಬರಬೇಕು ಶಿವಮೊಗ್ಗದಲ್ಲಿ ನಾನೇ ಗೆಲ್ಲಬೇಕೆಂಬುದು ನನ್ನ ಆಸೆ ಎಂದರು. ಚಿಹ್ನೆ ಯಾವುದೆ ಬಂದರೂ ಯಾರಿಗೆ ಮತಹಾಕಬೇಕು ಗೊತ್ತಿಗೆ ಅವರನ್ನೇ ಗೆಲ್ಲಿಸಬೇಕು ಎಂದರು.

ಏ.12 ಮಾರಿಕಾಂಬ ಫೈನಾನ್ಸ್, ಓಂ ಶಕ್ತಿ ಸಂಘಟನೆಯಿಂದ 10 ಸಾವಿರಕ್ಕೂ ಹೆಚ್ಚು ಜನ ಬರ್ತಾರೆ. ಈಶ್ವರಪ್ಪನವರು ಯಾಕೆ ಎಂಬುದನ್ನ ಜನರಿಗೆ ಮನವರಿಕೆ ಮಾಡಿದರೆ ಜನ ಹೆಚ್ಚು ಜನ ಬರ್ತಾರೆ. ಲಿಂಗಾಯಿತರು ಬಿಎಸ್ ವೈ ಅವರ ಹಿಂದೆ ಅಂತೆ, ಈಡಿಗರು ಕಾಂಗ್ರೆಸ್ ಗೆ ಅಂತೆ ಆದರೆ ನನಗೆ ಸಮಸ್ತ ಹಿಂದೂ ಸಮಾಜ ಮತಹಾಕಲಿದೆ. ಮೋದಿ ಸೇರಿ ಬ್ರಹ್ಮ ಬಂದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದರು.

ಇದನ್ಬೂ ಓದಿ-https://suddilive.in/archives/11615

Related Articles

Leave a Reply

Your email address will not be published. Required fields are marked *

Back to top button