ನಗರ‌ ಸುದ್ದಿಗಳು

ಮಲವಗೊಪ್ಪದಲ್ಲಿ ಅಂತರಘಟ್ಟಮ್ಮ ಜಾತ್ರಾ ಸಡಗರ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಮಲವಗೊಪ್ಪದ ಅಂತರಘಟ್ಟಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅದ್ದೂರಿಯಾಗಿ ಅಂತರಘಟ್ಟಮ್ಮ ದೇವಿ ಜಾತ್ರೆಯನ್ನು ನೆರವೇರಿಸಲಾಯಿತು.

ದೇವಾಲಯ ಸಮಿತಿಯ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಾತ್ರೆ ಅದ್ದೂರಿಯಾಗಿ ನಡೆಯಿತು. ದೇವಿಗೆ ವಿಶೇಷ ಅಲಂಕಾರ ಹಾಗೂ ಮೆರವಣಿಗೆ ಪೂಜೆ ನೆರವೇರಿಸಿ
ತಾಯಿಯ ಕೃಪೆಗೆ ಭಕ್ತಾದಿಗಳು ಗ್ರಾಮಸ್ಥರು ಪಾತ್ರರಾದರು.

ದೇವಿಗೆ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಈಡೇರುವ ಸಂಪ್ರದಾಯವಿದೆ ಹಾಗೆ ಬೇಡಿಕೆ ಈಡೇರಿದ ಭಕ್ತಾದಿಗಳು ದೇವಿಗೆ ಹರಕೆ ತೀರಿಸಿದರು. ಹಾಗೂ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು. ಮಲಗೊಪ್ಪದ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9649

Related Articles

Leave a Reply

Your email address will not be published. Required fields are marked *

Back to top button