ಸ್ಥಳೀಯ ಸುದ್ದಿಗಳು

ಫೇಸ್ ಬುಕ್ ಇನ್ ಸ್ಟಾಗೆ ಏನಾಗಿದೆ?

ಸುದ್ದಿಲೈವ್/ಶಿವಮೊಗ್ಗ

ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ಮತ್ತು  ಇನ್ ಸ್ಟಾಗ್ರಾಮ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಗ್ರಾಹಕರು ಪರದಾಡುವಂತೆ ಆಗಿದೆ.

ಫೇಸ್ ಬುಕ್ ಲಾಗಿನ್ ಆಗಲು ಕೋಡ್ ನ್ನ ಕೇಳಲಾಗುತ್ತಿದ್ದು ಇನ್ ಸ್ಟಾಗ್ರಾಮ್ ನಲ್ಲೂ ಲಾಗಿನ್ ಆಗಲು ಬಿಡುತ್ತಿಲ್ಲ. ಬಹುಶಃ ಸರ್ವರ್ ಡೌನ್ ಆಗಿರುವುದರಿಂದ‌ಈ ರೀತಿ ಸಮಸ್ಯೆ ಕಾಣಿಸಿಕೊಂಡಿದೆ.

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್  (Facebook And Instagram) ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.  ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಇನ್ನು ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ  ಲಾಗಿನ್ ಆಗುವುದಕ್ಕೆ  ಪರದಾಡುವಂತಾಗಿದೆ.

ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್‌ ಆಗಿದ್ದು, ಮತ್ತೆ ಲಾಗ್‌ಇನ್‌ ಆಗುತ್ತಿಲ್ಲ.ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ? ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್​ವರ್ಡ್​ ಮರೆತವರು ಮತ್ತು ಬೇರೆಯವರ ಕಡೆಯಿಂದ ಫೇಸ್ಬುಕ್ ಖಾತೆ ಸೃಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ. ಇದರಿಂದಾಗಿ ಸಾವಿರಾರು ಜನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಫೇಸ್‌ಬುಕ್‌ಗೆ ಏನಾಗಿದೆ? ಯಾಕೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಏಕಾಏಕಿ ಲಾಗ್‌ಔಟ್‌ ಆಗಿವೆ? ಯಾಕೆ ಮತ್ತೆ ಲಾಗ್‌ಇನ್‌ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಎಕ್ಸ್‌ನಲ್ಲಿ ಜನ ಕೇಳುತ್ತಿದ್ದಾರೆ. ಇನ್ನು, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿರುವ ಕುರಿತು ಬಗೆಬಗೆಯ ಟ್ರೋಲ್‌ಗಳು, ವಿಡಿಯೊಗಳನ್ನು ಟ್ವಿಟ್ಟರ್​ ಎಕ್ಸ್‌ನಲ್ಲಿ ಹರಿದಾಡುತ್ತಿವೆ. ಇನ್ನು ಯಾಕೆ ಈ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ-https://suddilive.in/archives/10140

Related Articles

Leave a Reply

Your email address will not be published. Required fields are marked *

Back to top button