ರಾಜಕೀಯ ಸುದ್ದಿಗಳು

ಸಿದ್ದರಾಮಯ್ಯರಿಗೆ ಓಟು ಹಾಕಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಟ್ತಾರೆ-ಆರಗ

ಸುದ್ದಿಲೈವ್/ಶಿವಮೊಗ್ಗ

ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹಿಜಬ್ ವಾಪಾಸ್ ಪಡೆಯುವುದಾಗಿ ಹೇಳಿರುವುದಕ್ಕೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.

ಹಿಜಬ್ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿದ್ದೇನೆ. ಹಿಜಬ್ ಬಗ್ಗೆ ಕಳೆದ ಸರಕಾರದಲ್ಲಿ ಯಾರ ವಿರೋಧವು ಇರಲಿಲ್ಲ. ಕಾಲೇಜು, ಹೈಸ್ಕೂಲ್ ನಲ್ಲಿ ಮಕ್ಕಳ ಮನಸ್ಸಿನಲ್ಲಿ ಭೇಧಭಾವ ಆಗಬಾರದು ನಾವೆಲ್ಲಾ ಒಂದೇ ಎಂಬ ಭಾವನೆ ಇರಬೇಕು ಅಂತಾ ಸಮವಸ್ತ್ರ ತಂದಿದ್ದು ಎಂದರು.

ಕಾಲೇಜು ಒಳಗಡೆ ಸಮವಸ್ತ್ರ ಇರಬೇಕು ಇದು ಕೋರ್ಟ್ ತೀರ್ಪಾಗಿದೆ. ಸಿದ್ದರಾಮಯ್ಯ ಹೇಳಿಕೆಯಿಂದ ಮಕ್ಕಳು ಹಾಗಾದ್ರೆ ಯಾವ ಡ್ರೆಸ್ ನಲ್ಲಾದರೂ ಬರಬಹುದಾ?ಒಂದೊಂದು ಧರ್ಮದವರು ಒಂದೊಂದು ರೀತಿ‌ ಬರಬಹುದಾ? ಹಾಗಾದರೆ, ಯೂನಿಫಾರ್ಮ್ ಏನಾಗ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ವಿಚಿತ್ರವಾದ ಹೇಳಿಕೆ ಕೊಡ್ತಿದ್ದಾರೆ. ಮೌಲ್ವಿಗಳ ಸಭೆಯಲ್ಲಿ ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀವಿ, ನಿಮ್ಮ ಪಾಲು ಕೊಡ್ತೀವಿ ಅಂತಾರೆ. ಬರಪೀಡಿತ ರೈತರ ಬಳಿ ಹೋಗಿ ಈ ಮಾತು ಹೇಳಲಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ರೈತ ಸಮುದಾಯಕ್ಕೆ ಹೇಳಕ್ಕೆ ದುಡ್ಡಿಲ್ಲ, ಓಟು ಬ್ಯಾಂಕಿಗೆ ಹೇಳಲು ದುಡ್ಡಿದೆ ಎಂದು ಕುಟುಕಿದ್ದಾರೆ.

ಟಿಪ್ಪು ಜಯಂತಿ ಮಾಡಿದ್ರು, ಪಿಎಫ್ ಐ ನಿಷೇಧ, ಮುಸ್ಲಿಂ ಮೂಲಭೂತವಾದಿಗಳ ಕೇಸ್ ವಾಪಸ್ ತಗೊಂಡ್ರು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಇವೆಲ್ಲಾ ನಿರೀಕ್ಷಿತ ಬೆಳವಣಿಗೆಗಳು. ನಾಳೆ ಯಾರಾದ್ರು ಹಳದಿ, ಕೇಸರಿ ಶಾಲು ಹಾಕಿಕೊಂಡು ಬಂದ್ರೆ ಸಿದ್ದರಾಮಯ್ಯ ಕೇಸ್ ಹಾಕಿಸ್ತಾರೆ. ಈ ರೀತಿ ಮಾನಸಿಕತೆ ಸಿದ್ದರಾಮಯ್ಯ ಅವರಿಗೆ ಮೂಲಭೂತವಾಗಿದೆ ಎಂದರು.

136 ಸೀಟ್ ಗೆಲ್ಲಿಸಿದ್ದಾರೆ. ಅಲ್ಪಸಂಖ್ಯಾತರೇ 136 ಸೀಟ್ ಬರಲು ಕಾರಣ ಎಂಬ ಮನಸ್ಥಿತಿ ಅವರಲ್ಲಿದೆ. ಸಿದ್ದರಾಮಯ್ಯ ಅವರಿಗೆ ಓಟು ಕೊಟ್ಟವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದು ಗುಡುಗಿದರು.

ಇದನ್ನೂ ಓದಿ-https://suddilive.in/archives/5325

Related Articles

Leave a Reply

Your email address will not be published. Required fields are marked *

Back to top button