ರಾಜಕೀಯ ಸುದ್ದಿಗಳು

ಕಾಂತೇಶ್ ಗೆ ಟಿಕೇಟ್ ಸಿಕ್ಕಿದ್ದರೆ, ಪಕ್ಷದಲ್ಲಿನ ಶುದ್ಧೀಕರಣದ ಮಾತನ್ನ ಈಶ್ವರಪ್ಪ ಹೇಳುತ್ತಿದ್ದರಾ?

ಸುದ್ದಿಲೈವ್/ಶಿವಮೊಗ್ಗ

ಕೆ.ಇ.ಕಾಂತೇಶ್ ಅವರಿಗೆ ಹಾವೇರಿಯಲ್ಲಿ ಟಿಕೇಟ್ ಸಿಕ್ಕಿದ್ದರೆ, ಕೆ.ಎಸ್.ಈಶ್ವರಪ್ಪನವರು ಬಂಡಾವೇಳುತ್ತಿದ್ದರೆ? ರಾಜಕಾರಣ ಶುದ್ಧೀಕರಣದ ಬಗ್ಗೆ
ಮಾತನಾಡುತ್ತಿದ್ದರೆ? ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಪ್ರಶ್ನೆ
ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಶುದ್ಧೀಕರಣದ ಮಾತು ಎಲ್ಲಾ
ಕಾಲಕ್ಕೂ ಇರುತ್ತದೆ. ಆದರೆ ಕೇವಲ ಟಿಕೇಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಶುದ್ಧಿಕರಣದ
ಮಾತು ಬಂದಿರುವುದು ವಿಷಾಧನೀಯವಾಗಿದೆ. ರಾಜಕಾರಣ ಎಂದರೆ ಅದೊಂದು ರೀತಿಯ
ಯುದ್ಧವಾಗಿದೆ. ಆಕಸ್ಮಾತ್ ಕಾಂತೇಶ್‌ಗೆ ಟಿಕೇಟ್ ಕೊಟ್ಟಿದ್ದರೆ ನಾವು ಕೂಡ ಸಂತೋಷ ಪಡುತ್ತಿದ್ದೆವು, ನಮ್ಮ ಜಿಲ್ಲೆಯ ಕುಸ್ತಿಪಟು ಒಬ್ಬ ಬೇರೆ ಜಿಲ್ಲೆಗೆ ಹೋಗಿ
ಗೆದ್ದುಬಂದರೆ ಸಂಭ್ರಮಿಸಿದ ಹಾಗೆ ಕಾಂತೇಶ್ ಕೂಡ ಹಾವೇರಿ ಜಾತ್ರೆಯಲ್ಲಿ ಕುಸ್ತಿ ಗೆದ್ದುಬಂದಂತೆ ಆಗುತ್ತಿತ್ತು. ಆದರೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ
ಬದ್ಧರಾಗಬೇಕು ಎಂಬುವುದೇ ಸತ್ಯ ಎಂದರು.

ಪ್ರಧಾನಿ ಮೋದಿ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಸಾಧನೆಗಳನ್ನು ಕಾಂಗ್ರೆಸ್ ನವರು ತೆರೆದ ಕಣ್ಣಿನಿಂದ ನೋಡಬೇಕು ಎಂದು ಕಾಂಗ್ರೆಸ್ಸಿಗೆ ಟೀಕೆಗೆ
ತಿರುಗೇಟು ನೀಡಿದ ಸಿದ್ರಾಮಣ್ಣ, ಮೋದಿಯವರ ೧೦ ವರ್ಷದ ಸಾಧನೆಯನ್ನು ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ಅಂಕಿ ಅಂಶಗಳನ್ನು ತಿಳಿದು ಮಾತನಾಡಲಿ ಎಂದರು.

ಸಂಸದರ ಅಭಿವೃದ್ಧಿ ಕೆಲಸ ಕಣ್ಣಿಗೆ ಕಾಣುತ್ತಿದೆ. ಅವರು ಏನು ಮಾಡಿದ್ದಾರೆ ಎಂದು ಹೇಳಲು ಅನೇಕ ದಿನಗಳು ಬೇಕಾಗುತ್ತದೆ. ಶರಾವತಿ ಹಿನ್ನೀರು ಪ್ರದೇಶದ
ಸಂಪರ್ಕ ಸೇತುವೆ ಆಗುತ್ತಿದ್ದು, ಆ ಭಾಗದ ಜನರಿಗೆ ಕೊಲ್ಲೂರು ಮತ್ತು ಸಾಗರ ಭಾಗದ ಸಂಪರ್ಕದ ಕೊಂಡಿಯಾಗಿದೆ. ವಿಮಾನ ನಿಲ್ದಾಣ ಆಗಿದೆ. ಪ್ರವಾಸೋಧ್ಯಮಕ್ಕೆ ಒತ್ತು ನೀಡಿ ಹಲವಾರು ಕೋಟಿಗಳ ಅನುದಾನ ತರಲಾಗಿದೆ. ರೈಲ್ವೆ, ಹೈವೆಗೆ ಸಾವಿರಾರು
ಕೋಟಿ ರೂ.ಗಳನ್ನು ಸಂಸದರು ತಂದಿದ್ದು, ದೇಶದಲ್ಲೇ ಅಭಿವೃದ್ಧಿ ಮಾಡಿದ ಸಂಸದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕೇಂದ್ರದಲ್ಲಿ ಭ್ರಷ್ಟಚಾರ ರಹಿತ ಆಡಳಿತ
ನೀಡಿದೆ. ಇಡೀ ಪ್ರಪಂಚವನ್ನೇ ನನ್ನ ಪರಿವಾರ ಎಂದು ಭಾವಿಸಿ ಭಾರತದ ಬಗ್ಗೆ ಹೆಮ್ಮೆ
ಪಡುವ ರೀತಿಯಲ್ಲಿ ವಿಶ್ವನಾಯಕನಾಗಿ ಪ್ರಧಾನಿಯವರು ಗುರುತಿಸಿಕೊಂಡಿದ್ದಾರೆ. ದೇಶದ ಘನತೆ ಹೆಚ್ಚಿಸಿದ್ದಾರೆ ಎಂದರು.

ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಸ್ಪಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ
ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷವಾಗಿದೆ. ಇಂತಹ ಸಂದರ್ಭಗಳನ್ನು ಪಕ್ಷ ಯಶಸ್ವಿಯಾಗಿ ನಿರ್ವಹಿಸುತ್ತದೆ. ರಾಘವೇಂದ್ರ ಸಂಸದರಾಗಲು ಕೆ.ಎಸ್.ಈಶ್ವರಪ್ಪ
ಅವರ ಧ್ವನಿಯು ಇದೆ. ಅವರು ಸ್ಪರ್ಧಿಸುವ ಬಗ್ಗೆ ಪಕ್ಷದ ಸಭೆಗಳಲ್ಲಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಕೇಂದ್ರ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ರಾಷ್ಟೀಯ ಕಾರ್ಯದರ್ಶಿ ರಾಧಮೋಹನ್ ಅವರು ಈಗಾಗಲೇ ಬಂದು ಮಾತನಾಡಿದ್ದಾರೆ.
ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಗ ಇದೇ ಈಶ್ವರಪ್ಪನವರು ಹಾಡಿಹೊಗಳಿ ಸ್ವಾಗತಿಸಿದ್ದರು. ಒಂದು ವೇಳೆ ಕಾಂತೇಶ್‌ಗೆ ಟಿಕೇಶ್ ಸಿಕ್ಕಿದ್ದರೆ ಬಂಡಾಯ,
ಶುದ್ಧೀಕರಣ ಇರುತ್ತಿತ್ತ ಎಂದರು.

ಸರ್ಕಾರಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಹೇಳಿ ಮೋದಿ ೨೦ ಕೋಟಿ ಉದ್ಯೋಗ
ಸೃಷ್ಠಿ ಮಾಡಿಲ್ಲ ಎಂಬ ಕಾಂಗ್ರೆಸ್‌ನ ಆರೋಪವಿದೆ ಎಂಬ ಪ್ರಶ್ನೆಗೆ ಪ್ರಧಾನಿಯವರು ಹೇಳಿದ್ದು, ೨೦ ಕೋಟಿ ಸರ್ಕಾರಿ ಉದ್ಯೋಗ ಅಲ್ಲ. ವಿವಿಧ ರೀತಿಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಠಿಯಾಗುತ್ತದೆ. ಅದಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಅದೇ ರೀತಿ
ವಿವಿಧ ಯೋಜನೆಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಅನೇಕರು ಸ್ವಂತ
ಉದ್ಯಮ ನಡೆಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಣ್ಣಪ್ಪ, ಚಂದ್ರಶೇಖರ್ ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/11380

Related Articles

Leave a Reply

Your email address will not be published. Required fields are marked *

Back to top button