ರಾಜಕೀಯ ಸುದ್ದಿಗಳು

ದೇಶದ್ರೋಹಿಗಳ ರಕ್ಷಣೆ ಕೂಡ ಕಾಂಗ್ರೆಸ್ ನ ಗ್ಯಾರೆಂಟಿಯಲ್ಲೊಂದು-ಬಿ.ವೈ.ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ನಿನ್ನೆಯೇ ಘೋಷಣೆ ಕೂಗಿದವರನ್ನ ಅಲ್ಲಿಯೇ ಬಂಧಿಸಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಶಿಕಾರಿಪುರದಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ.

ಘೋಷಣೆ ಕೂಗಿದ ಜಾಗದಲ್ಲೇ ಆತನಿಗೆ ಒದ್ದು ಅರೆಸ್ಟ್ ಮಾಡಬೇಕಿತ್ತು. ಇದ್ರಲ್ಲಿ ತನಿಖೆ ಮಾಡೋದು ಏನಿದೆ?ದೇಶದ್ರೋಹಿ ಗಳನ್ನ ಬಂಧಿಸಲು ಯೋಚನೆ ಮಾಡಬೇಕಾ? ದೇಶದ್ರೋಹಿ ಗಳನ್ನ ಹಿಡಿಯಿರಿ ಅಂದ್ರೆ ಹೋರಾಟ ಮಾಡಿದ ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದ್ದೀರಾ? ಎಂದು ಗುಡುಗಿದ್ದಾರೆ.

ಸರ್ಕಾರದ ಆರನೇ ಗ್ಯಾರಂಟಿ ಯನ್ನ ಘೋಷಣೆ ಮಾಡಿದ್ದಾರೆ. ಅದು ದೇಶದ್ರೋಹಿ ಗಳನ್ನ ರಕ್ಷಣೆ ಮಾಡೋದು ಅವರ ಗ್ಯಾರೆಂಟಿಯಲ್ಲೊಂದಾಗಿದೆ. ನಾಸೀರ್ ಹುಸೇನ್ ಅವರು ರಾಜ್ಯಸಭಾ ಸದಸ್ಯ ನಾದ ತಕ್ಷಣ ಈ ರೀತಿ ಘಟನೆ ನಡೆದಿದೆ ಅಂದ್ರೆ, ಮುಂದೆ ಏನ್ ಗಂಡಾಂತರ ಕಾದಿದ್ದೀಯೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿ ಗಳಿಗೆ ಬೆಂಬಲ ನೀಡ್ತಾ ಇದ್ದಾರೆ ಎಂದು ದೂರಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾದ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.ಇದು ರಾಜ್ಯದ ಜನರು ತಲೆತಗ್ಗಿಸುವ ಕೆಲಸವಾಗಿದೆ. ನಿನ್ನೆ ಮಂಗಳೂರಿನಲ್ಲಿ ನಟ ಪ್ರಕಾಶ್ ರೈ ಯಾರೋ ಒಬ್ಬ ಅಯೋಗ್ಯರು ಮಾತಾಡ್ತಾರೆ ಅಂತಾ ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ನರೇಂದ್ರ ಮೋದಿಯವರನ್ನು ದೇಶದ ಎಲ್ಲಾ ವರ್ಗದ ಜನರು ಒಪ್ಪಿದ್ದಾರೆ. ದೇಶದ ಪ್ರಧಾನಿಯಾಗಿ ಮೋದಿಯವರೇ ಆಯ್ಕೆಯಾಗಬೇಕೆಂದು ಜನರು ಬಯಸಿದ್ದಾರೆ.

ಖರ್ಗೆಯವರು ಕೂಡ ಅದೇ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 400 ಕ್ಕೂ ಹೆಚ್ಚು ಸೀಟು ಗೆದ್ದು ಮೋದಿ ಪ್ರಧಾನಿಯಾಗ್ತಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರೇ ಪ್ರಧಾನಿಯಾಗ್ತಾರೆ. ಉಡಾಫೆಯಾಗಿ ಮಾತನಾಡುವವರಿಗೆ ದೇಶದ ಜನರೇ ಉತ್ತರ ಕೊಡ್ತಾರೆ. ನಿನ್ನೆ ರಾಜ್ಯಸಭೆ ಚುನಾವಣಾ ಫಲಿತಾಂಶದಲ್ಲಿ ನಮಗೆ ಹಿನ್ನಡೆಯಾಗಿಲ್ಲ. ನಾವು, ಜೆಡಿಎಸ್ ಸೇರಿ 5 ನೇ ಅಭ್ಯರ್ಥಿ ಹಾಕಿದ್ದು ನಿಜ.ಅದಕ್ಕೆ ಕಾರಣಗಳು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.

ಇದನ್ನೂ ಓದಿ-https://suddilive.in/archives/9764

Related Articles

Leave a Reply

Your email address will not be published. Required fields are marked *

Back to top button