ರಾಜಕೀಯ ಸುದ್ದಿಗಳು

ಒಂದು ಕುಟುಂಬಕ್ಕೆ 5000 ರೂ.ವ್ಯಯವಾಗುತ್ತಿದೆ-ಸುದ್ದಿಗೋಷ್ಠಿಯಲ್ಲಿ ಸಚಿವರು

ಸುದ್ದಿಲೈವ್/ಶಿವಮೊಗ್ಗ

ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಗ್ಯಾರೆಂಟಿಯ ನಂತರ ಯುವನಿಧಿ ಜಾರಿಗೊಳಿಸಲಾಗುತ್ತಿದೆ ಒಂದು ತಿಂಗಳಿಗೆ ಒಂದು ಗ್ರಾಪಂಗೆ 75 ಲಕ್ಷ ರೂ. ಹಣ ವ್ಯಯವಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಅಂಕಿ ಅಂಶ ನೀಡಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಐದು ಸಾವಿರ ರೂ.  ೧೫೦೦ ಮನೆಗಳಿಗೆ ಗ್ರಾಪಂನಲ್ಲಿ ಅನುದಾನ ಪಡೆಯಿತ್ತಿವೆ. ವರ್ಷಕ್ಕೆ  ೮ ಕೋಟಿ ರೂ. ಹರಿದು ಹೋಗುತ್ತಿದೆ. ಇದು ಟೀಕೆ ಮಾಡುವವರಿಗೆ ನೀಡುವ ಉತ್ತರವಾಗಿದೆ. ಜನ ಕಷ್ಟಕ್ಕೆ ಕಾಂಗ್ರೆಸ್ ಸ್ಪಂಧಿಸಿದೆ ಎಂದರು.

ಇದನ್ನ ಹೊರತುಪಡಿಸಿ ರಸ್ತೆ ಸಭಾಭವನ ನಿರ್ಮಾಣಕ್ಕೆ ಮುಂದಾಗಿದೆ.‌ನಾಳೆ ಎಐಸಿಸಿ ಅಧ್ಯಕ್ಷರಾದ‌ ಖರ್ಗೆಅ ವರು ದೆಹಲಿಗೆ ಕರೆದಿದ್ದಾರೆ. ಜಿಲ್ಲೆಯ 7 ವಿಧಾನಸಭಾ‌ಕ್ಷೇತ್ರದಿಂದ 1 ರಿಂದ 1-50 ಲಕ್ಷ ಜನ ಇದರ ಲಾಭ ಪಡೆಯಲಿದ್ದಾರೆ.‌ ಅರ್ಜಿ ಹಾಕಲು ಎರಡು ಸಾವಿರ ರೂ. ಹಣ ಬೇಕಿದೆ. ಪದವೀಧರರು ಅಪ್ಪನ ಜೇಬು ನೋಡಬಾರದು ಎಂಬ ಉದ್ದೇಶದಿಂದ ಯುವನಿಧಿ ತರಲಾಗುತ್ತಿದೆ.

ಮುಂದಿನ 2 ವರ್ಷದ ವರೆಗೆ ವಿದ್ಯಾರ್ಥಿಗಳ ಜೊತೆ ಸರ್ಕಾರ ಇರುತ್ತದೆ ಪ್ರತಿ ದಿನ 3 ಸಾವಿರ ರೂ. ಹಣ ನೀಡಲಾಗುತ್ತದೆ. ಡಿಬಿಟಿ ರೀತಿಯಲ್ಲಿ ನೋಂದಿತ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್ ಗೆ ಹಣ ಹೋಗಲಿದೆ. ಬಹುಮತ ಬಂದ ನಂತರ ಮೊದಲಬಾರಿಗೆ ಶಿವಮೊಗ್ಗದಲ್ಲಿ ಲೋಕಾರ್ಪಣೆ‌ ಮಾಡಲಾಗುತ್ತಿದೆ ಎಂದರು.

ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸೇವಾ ಸಿಂಧು ಅಥವಾ ಸೇವಾ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನಿನ್ನೆಯ ವರೆಗೆ 55 ಸಾವಿರ ವಿದ್ಯಾರ್ಥಿಗಳು ಯುವನಿಧಿಯಲ್ಲಿ ನೋಂದಿತರಾಗಿದ್ದಾರೆ.61 ಸಾವಿರ ವಿದ್ಯಾರ್ಥಿಗಳು ನೋಂದಿತರಾಗುತ್ತಿದೆ. ವಿದ್ಯಾರ್ಥಿಗಳಿಗೆ 4.12 ಲಕ್ಷ ನ್ಯಾಡ್ ನಲ್ಲಿ ಹಣ ಠೇವಣಿಯಾಗಿದೆ.  ನೋಂದಣಿ ಆದ ವಿದ್ಯಾರ್ಥಿಗಳಿಗೆ 5.12 ಲಕ್ಷ ಈ ವರ್ಷದ‌ಲ್ಲಿ ವಿದ್ಯಾರ್ಥಿಗಳು ನೋಂದಿತರಾಗಲಿದ್ದು ಮುಂದಿನ ವರ್ಷ 10 ಲಕ್ಷಕ್ಕೂ ಹೆಚ್ಚು ಜನ‌‌ ನೋಂದಣಿ ಆಗಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಯುವಕರಿಗೆ ಕೆಲಸ ಕೊಡಿಸಲು ವಿಫಲವಾಗಿದೆ. ಹಾಗಾಗಿ ನಮ್ಮ ರಾಜ್ಯದ ಮಕ್ಕಳನ್ನ‌ ರಕ್ಷಿಸಲು ಕಾಂಗ್ರೆಸ್ ಮುಂದಾಗಿದೆ. 2013 ರಲ್ಲಿ ಕಾಂಗ್ರೆಸ್ ಪ್ರನಾಳಿಯಲ್ಲಿ ಹೇಳಿದ 90% ಜಾರಿಗೊಳಿಸಿದೆ ಬಿಜೆಪಿ 5% ಜಾರಿಗೊಳಿಸಿಲ್ಲ ಎಂದು ದೂರಿದರು.

ನಾನು ಕಾಂಗ್ರೆಸ್ ನ 25 ಕಾರ್ಯಕ್ರಮ ಹೇಳಬಲ್ಲೆ ಬಿಜೆಪಿದು ಐದು ಕಾರ್ಯಕ್ರಮ ಹೇಳಲು ಸಾಧ್ಯವಿಲ್ಲ. ಒಂದು ಕಾರ್ಯಕ್ರಮ ಬಡವರ ಪರ ಹೇಳಲಿ. 4 ಲಕ್ಷ ಕೋಟಿ ಕರ್ನಾಟಕದ ಪಾಲು ಜಿಎಸ್ ಟಿಯಲ್ಲಿದೆ. ಬರೋದು ಎಷ್ಟು? ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಬಿಜೆಪಿ ಭಾವನಾತ್ಮಕ ರಾಜಕಾರಣ ಮಾಡುತ್ತಿದೆ. ಕಾರ್ಯೋನ್ಮುಖ ರಾಜಕಾರಣ ಮಾತನಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರ ಎಂದರೆ ಸಹಕಾರ ಮಾಡಬೇಕು ಎಂದರು.

ರಾಜ್ಯದಿಂದ 25 ಸಂಸದರಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಬರ ಘೋಷಣೆ ಆಗಿ ತಿಂಗಳುಗಳೆ ಕಳೆದಿದೆ ಇನ್ಬೂ ಹಣಬಂದಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/6549

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373