ಸ್ಥಳೀಯ ಸುದ್ದಿಗಳು

ರಾಮ ಮಂದಿರ ಸರ್ವ ಜನಾಂಗದ ಶಾಂತಿಯ ತೋಟ-ಮೈಸೂರಿನ ಅವಧೂತರು

ಸುದ್ದಿಲೈವ್/ಶಿವಮೊಗ್ಗ

ಹಲವು ದಶಕಗಳ ಸಾಧು ಸಂತರು ತಪಸ್ಸು ಜಪ ತಪ ಆಚರಣೆಗಳ ಫಲಶ್ರುತಿಯಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ ಇಂದು
ನನಸಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಭ್ರಮದಿಂದ ಕುಣಿದಾಡುವ ವಾತಾವರಣ ನಿರ್ಮಾಣಗೊಂಡಿದೆ ಎಂದು ಮೈಸೂರಿನ ಅರ್ಜುನ ಅವಧೂತ ಮಹಾರಾಜರು ಹೇಳಿದರು.

ಅವರು ವಿಪ್ರ ಯುವ ಪರಿಷತ್ ವತಿಯಿಂದ ನಗರದ ಲಗಾನ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ತೇರಾ ಕೋಟಿ ರಾಮ ನಾಮ ಜಪ ಸಾಂಗತ ಮಹಾ ಯಜ್ಞದ ಮೊದಲನೆಯ ದಿನ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಸೀತಾ ರಾಮ ಹನುಮರ ನೆನೆಯಲು ಹರ್ಷಪಡಬೇಕು ವಿವೇಕಾನಂದರ ಆಶಯದಂತೆ ಎಲ್ಲರಲ್ಲೂ ಗುರಿ ತಲುಪಿದ ಸಂಭ್ರಮ ಮನೆ ಮಾಡಿದೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾಗಿದೆ ಎಂದರು.

ರಾಮ ಮಂದಿರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಲ್ಲ ಧರ್ಮದವರು ಜಾತಿ ಜನಾಂಗದವರು ರಾಮ ನಾಮ ಜಪ ಮಾಡುತ್ತಿದ್ದಾರೆ ವಿಶೇಷವಾಗಿ ಹಿಂದುಗಳು ಧರ್ಮವನ್ನು ಒಗ್ಗೂಡಿಸುವ ಯತ್ನದಲ್ಲಿ ನಿರತರಾಗಿದ್ದಾರೆ ಬಾಬರನ ಕಾಲದಲ್ಲಿ ಮತಾಂತರಾಗಿದ್ದ ಮುಸ್ಲಿಮರು ಕೂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣದಿಂದ ಪುಳಕಿತರಾಗಿದ್ದಾರೆ ಎಂದ ಅವರು ರಾಮ ಕೇವಲ ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ರಾಮ ಎಂಬುದು ಭಾವನಾತ್ಮಕ ನಂಟು ಎಂದರು.

ರಾಮ ಎಂದರೆ ಅದೊಂದು ಶಕ್ತಿ ಅದೊಂದು ತೇಜಸ್ಸು ಅದೊಂದು ಸಾಕ್ಷಾತ್ಕಾರ ವಾತ್ಸಲ್ಯಮಯಿ ತಾಯಿ ಜಗತ್ತಿನ ಬೆಳಕು ರಾಮ ಒಂದು ಆದರ್ಶ ತಂದೆ ಸಮಾನರಾದ ರಕ್ಷಕ ಎಂದವರು ಬಣ್ಣಿಸಿದರು

ರಘುಕುಲ ತಿಲಕ ರಾಮನನ್ನು ಹಾಗೂ ಹಿಂದೂ ಧರ್ಮವನ್ನು ನಿಂದಿಸುವುದು ತರವಲ್ಲ ಈ ಹಿಂದೆ ಹಿಂದುವಿನಿಂದ ಅನೇಕ ಧರ್ಮಕ್ಕೆ ಮತಾಂತರವಾಗಿರುವ ವಿಶ್ವದ ಎಲ್ಲ ಧರ್ಮದವರು ಅಯೋಧ್ಯೆಯಲ್ಲಿ ರಾಮ ನಾಮ ಜಪ ಮಾಡುವ ದಿನ ಸನ್ನಿ ಹಿತವಾಗಿದೆ. ಅಯೋಧ್ಯೆ ಜಗದ್ ವಿಖ್ಯಾತವಾಗಲಿದೆ ಎಂದವರು ಭವಿಷ್ಯ ನುಡಿದರು

ರಾಮಮಂದಿರ ನಿರ್ಮಾಣದಲ್ಲಿ ಸೇವೆ ಮಾಡಿದ ಕರೆಸೇವಕರ ಸೇವೆ ಆತ್ಯಮೂಲ್ಯ ಎಂದ ಅವರು ರಾಮಮಂದಿರ ನಿರ್ಮಾಣದಿಂದ ವಿಶ್ವದೆಲ್ಲೆಡೆ ಭಾರತದಲ್ಲಿ ಖ್ಯಾತಿ ಹೆಚ್ಚಾಗಿದೆ ಎಲ್ಲರ ಮನೆ ಮನಗಳಲ್ಲಿ ರಾಮ ಇದ್ದಾನೆ. ಕಲಿಯುಗದ ಅವಧಿ ಪೂರ್ಣಗೊಂಡು
ಧರ್ಮ ಯುಗ ಪುನರಾರಂಭಗೊಂಡಿದೆ ಎಂದ ಅವರು ವಿಪ್ರ ಎಂದರೆ ವಿವೇಕ ಮತ್ತು ಪ್ರಜ್ಞೆಯ ಸಂಕೇತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅರಸೀಕೆರೆಯ ಸತೀಶ್ ಅವಧೂತರು ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ಸತ್ಯನಾರಾಯಣ್ ರಾವ್ ವಿಪ್ರ ಯುವ ಪರಿಷತ್ತಿನ ನಿರ್ದೇಶಕರು ಉಪಸ್ಥಿತರಿದ್ದರು ನಾಳೆ ಶ್ರೀರಾಮನಿಗೆ ಪಟ್ಟಾಭಿಷೇಕ ಹಾಗೂ ಯಾಗದ ಪೂರ್ಣಾಹುತಿ ನಡೆಯಲಿದೆ.

ಇದನ್ನೂ ಓದಿ-https://suddilive.in/archives/7855

Related Articles

Leave a Reply

Your email address will not be published. Required fields are marked *

Back to top button