ಸ್ಥಳೀಯ ಸುದ್ದಿಗಳು

ಭಕ್ತವತ್ಸಲಂ ವರದಿ ಜಾರಿಯಾಗಬೇಕು-ಸುನೀಲ್ ಕುಮಾರ್

ಸುದ್ದಿಲೈವ್/ಶಿವಮೊಗ್ಗ

ಮಕ್ಕಳಿಗೆ ಸೈಕಲ್ ಯೋಜನೆ, ರೈತರಿಗೆ ಪ್ರತ್ಯೇಕ ಬಜೆಟ್ ನೀಡಬಹುದು ಎಂಬ ಕಲ್ಪನೆ ಆರಂಭವಾಗಬೇಕೆಂದರೆ ಮಾಜಿ ಸಿಎಂ ಬಿಎಸ್ ವೈ ಬರಬೇಕಾಯಿತು ಎಂದು ಮಾಜಿ  ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಅವರು ಸಾಗರದ ರಾಷ್ಟ್ರಧ್ವಜ ಸ್ಥಂಭದ ಮೈದಾನದಲ್ಲಿ ಈಡಿಗ ಬಿಲ್ಲವ ಎಂಬ 26 ಸಮುದಾಯಗಳ ಶಕ್ತಿ ಸಾಗರ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಬಿಎಸ್ ವೈ ಸಿಎಂ ಆದ ನಂತರ ನೂರಾರು ಸಮುದಾಯದ ಮಠಕ್ಕೆ ಅನುದಾನ ನೀಡಿದ ಕೀರ್ತಿ ಸಲ್ಲುತ್ತದೆ ಎಂದರು.

ಹಿಂದುಳಿದ ವರ್ಗದವರಿಗೆ ನ್ಯಾಯಕೊಟ್ಟಿದ್ದು ಬಿಎಸ್ ವೈ. ಶಿವಮೊಗ್ಗದಲ್ಲಿ ಸಮುದಾಯ ಭವನ ನಿರ್ಮಾಣ, ಮಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣಕ್ಕೆ ಬೆನ್ನಲುಬಾಗಿ ನಿಂತಿದ್ದು ಬಿಎಸ್ ವೈ ಎಂದರು.

ಭಕ್ತವತ್ಸಲಂ ಸಮಿತಿ ರಚಿಸಿ ರಾಜಕೀಯ ವಾಗಿ ಹಿಂದುಳಿದ ಸಮುದಾಯಕ್ಕೆ ಒತ್ತು ನೀಡಲು ವರದಿ ನೀಡಿತ್ತು. ಇದರಲ್ಲಿ ಈಡಿಗ ಸಮುದಾಯಕ್ಕೆ ಅನುಕೂಲವಾಗುವಂತೆ ವರದಿ ನೀಡಿತ್ತು.  ಆದರೆ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ವಜಾ ಮಾಡಿದೆ. ಅದನ್ನ ಜಾರಿ ಮಾಡುವಂತೆ ಸಮುದಾಯದ ಮುಖಂಡರು ಮತ್ತು ಯುವಕರು ಕಾಂಗ್ರೆಸ್ ಸರ್ಕಾರವನ್ನ ಒತ್ತಾಯಿಸಬೇಕೆಂದರು.

ಹಾಲಪ್ಪ ಮಾತು

ಬಿಎಸ್ ವೈ ಜಾತ್ಯಾತೀತ ನಾಯಕರಾದ ಕಾರಣ ಅತ್ಯುತ್ತಮಕ್ಕೆ ಏರಲು ಸಾಧ್ಯವಾಗಿದೆ. ಅದರಂತೆ ಬಂಗಾರಪ್ಪನವರೂ ಹೌದು. ಬಿಎಸ್ ವೈ ಉಪಮುಖ್ಯಮಂತ್ರಿಯಾಗಿದ್ದಾಗ 8 ನೇ ತರಗತಿ ಹೆಣ್ಣು ಮಕ್ಕಳಿಗೆ ಸೈಕಲ್ ಕೊಟ್ಟ ಪರಿಣಾಮ ಹೈಸ್ಕೂಲ್ ಗೆ ಬರುವಂತಾಹಿದೆ. ಇದರಿಂದ 6 ಸಾವಿರ ಮಕ್ಕಳಲ್ಲಿ 3 ಸಾವಿರ ಹೆಣ್ಣುಮಕ್ಕಳು ಈಡಿಗ ಸಮುದಾಯದವರಾಗಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.

ಕೇವಲ 20 ವರ್ಷದ ಹಿಂದೆ ಎಷ್ಟು ಜನ ಹಿಂದುಳಿದ ವರ್ಗವರು ಶಿಕ್ಷಾವಂತರಾಗಿದ್ದಾರೆ. ಈಗ ಎಷ್ಟು ಜನ ಮಹಿಳೆಯರು ಶಿಕ್ಷಾವಂತರಾಗಿದ್ದಾರೆ. ಲೆಕ್ಕ ಹಾಕಿದರೆ ಈಗ ಅತಿಹೆಚ್ಚು ಜನ ಮಹಿಳೆಯರು ಶಿಕ್ಷಣ ಪಡೆಯುವಂತಾಗಿದೆ ಎಂದರು.

ತ್ಯಾಗರ್ತಿಯಲ್ಲಿ, ಹೊಸನಗರ, ಈಡಿಗರ ಸಮುದಾಯ ಕಲ್ಯಾಣಮಂಟಪ, ಮಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ, ಶಿವಮೊಗ್ಗದಲ್ಲಿ ಈಡಿಗರ ಸಮುದಾಯ ಭವನ, ಸಿದ್ದಪುರದಲ್ಲಿ ಸಮುದಾಯ ಭವನ, ಚಿಕ್ಕಮಗಳೂರು ಈಡಿಗರ ಸಮುದಾಯ ಭವನಕ್ಕೆ ಹಣ ಮತ್ತು ಜಾಗ ಒದಗಿಸಲಾಗಿದೆ. ನಿಟ್ಟೂರು ಗರ್ತಿಕೆರೆ ಮಠಕ್ಕೆ 5 ಕೋಟಿ ಹಣ ಬಿಡುಗಡೆ. ಮಾಡಿಸಿದ್ದು ಬಿಎಸ್ ವೈ ಎಂದಿದ್ದಾರೆ.

543 ಲೋಕಸಭಾ ಚುನಾವಣೆಗೆ ಆಯ್ಕೆ ಮಾಡುವ 9 ಜನರಲ್ಲಿ ಬಿಎಸ್ ವೈ ಒಬ್ಬರಾಗಿದ್ದಾರೆ.

ಸಂಸದ ರಾಘವೇಂದ್ರ ಮಾತು

ತತ್ವ ಸಹಿತ ರಾಜಕಾರಣವನ್ನ‌ಹಿಡಿದು ಸಾಗಿದವರು ತಂದೆ ಯಡಿಯೂರಪ್ಪನವರಾಗಿದ್ದಾರೆ.. ಶಿವಮೊಗ್ಗ ಅಭಿವೃದ್ಧಿ ಆಗ್ತಾ‌ಇದೆ.‌ ರೈತರ ಅಕೌಂಟ್ ಗೆ 50 ಸಾವಿರ ಕೋಟಿ ಹಣ ಜಮಾಯಿಸಿದ್ದಾರೆ.. ಹೆಣ್ಣು ಮಗುವಿನ ಬ್ರೂಣ ಹತ್ಯೆಯನ್ನ ತಡೆಯಲು ಬಿಎಸ್ ವೈ ಭಾಗ್ಯಲಕ್ಷ್ಮೀ ಯೋಜನೆ ಜಾರಿಹೊಳಿಸಿದ್ದು ಬಿಎಸ್ ವೈ ಅವರಾಗಿದ್ದಾರೆ.  ಸುಕನ್ಯ ಸಂಮೃದ್ಧಿ ಯೋಜನೆ ಮೂಲಕ ಮಹಿಳೆಯರ ಆಶಾಕಿರಣವಾಗಿ ಬಿಜೆಪಿ ಮಾಡಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಈಡಿಗರ ಸ್ವಾಭೀಮಾನಿನ ಬದುಕಿಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನಿವೇಶನ ನೀಡಲಾಗಿಲ್ಲ. ಕೋರ್ಟ್ ನಲ್ಲಿ 9900 ಕುಟುಂಬ ಪಟ್ಟಿಯನ್ನ ಸೇರಿಸಿ ಅಫಿಡೆವಿಟ್ ಹಾಕಬೇಕಿತ್ತು. ದುರಾದೃಷ್ಟವಶಾತ್ ನಮ್ಮ ಸರ್ಕಾರ ಬಿದ್ದುಹೋಗಿದೆ. ದೇವರ ಮೆಚ್ಚುವ ಕೆಲಸವನ್ನ ನಾಡಿಯೇ ತೀರುವುದಾಗಿ ತಿಳಿಸಿದರು.

ರೈಲ್ವೆ ಅಳಿ ಹೆಚ್ಚಳ, ಕೇಬಲ್ ಸೇತುವೆ ನಿರ್ಮಣ, ಹೊಸನಗರದಿಂದ  ಆಡುಗೋಡಿ ಹೋಗಲು ಬೆಕ್ಕೋಡಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆಗುಂಬೆ ಘಾಟ್ ಗೆ 3000 ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/10085

Related Articles

Leave a Reply

Your email address will not be published. Required fields are marked *

Back to top button