ಸ್ಥಳೀಯ ಸುದ್ದಿಗಳು
ಭಾವೈಕ್ಯತೆಗೆ ಸಾಕ್ಷಿಯಾದ ಶಿರಾಳಕೊಪ್ಪ ಗಣಪತಿ ಮೆರವಣಿಗೆ

ಸುದ್ದಿಲೈವ್/ಶಿರಾಳಕೊಪ್ಪ

ಶಿರಾಳಕೊಪ್ಪದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸೌಹಾರ್ದತೆ ಮೆರೆದಿದ್ದಾರೆ. ಹಿಂದು ಮುಸ್ಲಿಂರು ಇಬ್ಬರೂ ಮೆರವಣಿಗೆ ಭಾಗಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಅಪರೂಪದ ಭಾವೈಕ್ಯತೆ ಮೆರಯಲಾಗಿದೆ.
ಶಿರಾಳಕೊಪ್ಪದಲ್ಲಿ ಹಿಂದು ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನ ಇಂದು ವಿಸರ್ಜಿಸಲಾಗುತ್ತಿದೆ. ವಿಸರ್ಜನಾ ಮೆರವಣಿಗೆಯಲ್ಲಿ ಭಾವೈಕ್ಯತೆ ಮೆರೆಯಲಾಗಿದೆ.
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಂ ಭಾಂಧವರು, ಹಿಂದು ಯುವಕರ ಜೊತೆ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ-https://suddilive.in/2023/09/30/ಅ-03-ರಂದು-ವಿದ್ಯುತ್-ವ್ಯತ್ಯಯ/
