ಕ್ರೈಂ ನ್ಯೂಸ್

ರಸ್ತೆ ಅಪಘಾತ ಬೈಕ್ ಸವಾರರಿಬ್ಬರು ಸಾವು

ಸುದ್ದಿಲೈವ್/ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆಯ ಬಳಿ ಭೀಕರ ಅಪಘಾತ ಸಂಭವಿಸಿದೆ. ಮಂಡಗದ್ದೆ ಫಿಶ್ ಹೋಟೆಲ್​ ಸಮೀಪ ಈ ಘಟನೆ ನಡೆದಿದೆ. ಸಂಜೆ ಆರು ಮುಕ್ಕಾಲುರ ಹೊತ್ತಿಗೆ ಬೈಕ್​ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದ್ದು ಮೃತರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಅವರ ಬಳಿ ಯಾವುದೇ ವಿವರ ಸ್ಥಳೀಯರಿಗೆ ಸಿಕ್ಕಿಲ್ಲ .ಬೈಕ್​ನಲ್ಲಿದ್ದವರು. ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು. ಇನ್ನೊಂದಡೆ ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಸಹ್ಯಾದ್ರಿ ಬಸ್ ಬರುತ್ತಿತ್ತು. ಎದುರುಬದುರಾಗಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ಅಪಘಾತಕ್ಕೊಳಗಾದ ಬೈಕ್​ನ ನಂಬರ್​ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು, KA 17EC 2519 ರಿಜಿಸ್ಟ್ರೇಷನ್​ನ ಗಾಡಿಯ ಹಿಂಬದಿಯಲ್ಲಿ ದೊಡ್ಮನೆ ಎಂದು ಬರೆಯಲಾಗಿದೆ. ಮೃತರ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ-https://suddilive.in/archives/7846

Related Articles

Leave a Reply

Your email address will not be published. Required fields are marked *

Back to top button