ಕ್ರೈಂ ನ್ಯೂಸ್

ಸಂಜೆಯಾಗುತ್ತಿದ್ದಂತೆ ಈ ಬಡಾವಣೆ ತನ್ನ ಅಸಲೀ ರೂಪ ಬಿಚ್ಚಿಡುತ್ತೆ-ಇಂಜಿನಿಯರ್ ವಿದ್ಯಾರ್ಥಿಗೆ ಸಿಗರೇಟ್ ನಿಂದ ಚುಚ್ಚಲು ಯತ್ನ

ಸುದ್ದಿಲೈವ್/ಶಿವಮೊಗ್ಗ

ನಗರದ ಜಯನಗರದಲ್ಲಿ ಕುಡಿದ ಅಮಲಿನಲ್ಲಿದ್ದ ಯುವಕರು ಇಂಜಿನಿಯರ್ ವಿದ್ಯಾರ್ಥಿಯನ್ನ ರಾಬರಿ ಮಾಡಲು ಯತ್ನಿಸಿದ್ದು, ಆತನ ಸಹಾಯಕಕ್ಕೆ ಬಂದ ಸ್ಥಳೀಯರಿಗೆ ಚಾಕು ತೋರಿಸಿ ಗದರಿಸಿ ಅಟ್ಟಹಾಸ ಮೆರೆದಿದ್ದಾರೆ. ಇಂದು ಸಂಜೆ ಸುಮಾರು 6-45 ರ ಸಮಯದಲ್ಲಿ ನಡೆದಿದೆ.

ಉಷಾ ನರ್ಸಿಂಗ್ ಹೋಮ್ ವೃತ್ತದ ಬಳಿ ಕೃಷಿನಗರದಿಂದ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಪ್ರಣವ್ ಎಂಬ ಇಂಜಿನಿಯರ್ ವಿದ್ಯಾರ್ಥಿಗೆ ಅಪರಿಚಿತ ಇಬ್ಬರು ಯುವಕರು ಡಿಕ್ಕಿ ಹೊಡೆಸಿದ್ದಾರೆ. ಅಲ್ಲಿ ಆತನ ಮೊಬೈಲ್ ಕಿತ್ತುಕೊಂಡಿದ್ದಾರೆ. ಅಲ್ಲಿಂದ ಕಾಲು ಕಿತ್ತಿದ್ದಾರೆ.

ಯಾಕೆ ಬ್ರದರ್ ಡಿಕ್ಕಿ ಹೊಡೆದು ಮೊಬೈಲ್ ಕಿತ್ತುಕೊಂಡ್ರಿ ಯಂದು ಪ್ರಣವ್ ಕೇಳಿಕೊಂಡು ಬರುತ್ತಿದ್ದಂತೆ ಜಯನಗರ ರಾಮಮಂದಿರದ ಎದುರು ಬೈಕ್ ನಿಲ್ಲಿಸಿ ಯುವಕನಿಗೆ ಹೊಡೆದಿದ್ದಾರೆ. ಬೈಕ್ ಕೀ ಕಿತ್ತುಕೊಂಡಿದ್ದಾರೆ. ಸಹಾಯಕಕ್ಕೆ ಬಂದ ರಾಮ ಮಂದಿರದ ಎದುರಿನ ಅಂಗಡಿಯವರಿಗೆ ಬೈದಿದ್ದಾರೆ.

ತಕ್ಷಣಕ್ಕೆ ಆತನ ತಾಯಿಗೆ ಕರೆ ಮಾಡಿದ್ದಾರೆ. ಕರೆ ಮಾಡುತ್ತೀರಾ ಎಂದು ಚಾಕು ತೋರಿದ್ದಾರೆ. ಯುವಕನ‌ ತಾಯಿ ಸ್ಥಳಕ್ಕೆ ಬರುವ ವೇಳೆ ಪ್ರಣವ್ ಕೈ ಹಿಡಿದು ಯುವಕರು ಸಿಗರೇಟ್ ನಿಂದ ಚುಚ್ಚಲು ಯತ್ನಿಸಿದ್ದಾನೆ. ತಾಯಿ ಬಂದು ಮಗನನ್ನ  ಬಿಡಿ ಇಲ್ಲ ಪೊಲೀಸರನ್ನ ಕರೆಯಿಸುತ್ತೇನೆ ಎಂದಾಗ ಯುವಕರು ಕಾಲುಕಿತ್ತಿದ್ದಾರೆ. ನಂತರ ಪೊಲೀಸರು ಬಂದಿದ್ದಾರೆ.

112 ಗಸ್ತು ಪೊಲೀಸ್ ವಾಹನವೂ ಸ್ಥಳಕ್ಕೆ ಸರಿಯಾಗಿ ಬರಲಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಸಂಜೆಯ ವೇಳೆಗೆ ನಗರದ ಅಫಿಶಿಯಲ್ ನಗರ ಎನಿಸಿಕೊಂಡಿದ್ದ ಜಯನಗರ ತನ್ನ ಕರಾಳ ರೂಪ ತೋರಿಸಿದೆ. ಪೊಲೀಸರು ಏನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಿದೆ.

ಮರಿಚಿಕೆಯಾದ ಪೊಲೀಸ್ ಮೊಹಲ್ಲಾ ಮೀಟಿಂಗ್, ಪೊಲೀಸ್ ಬೀಟ್ ಈ ಪ್ರಕರಣ ಹೆಚ್ಚಲು ಪ್ರಮುಖ‌ ಕಾರಣ ಎಂಬುದಕ್ಕೆ ಎರಡು ಮಾತಿಲ್ಲ. ಈ ರಸ್ತೆ ಹೆಚ್ಚಿನ ಕಮರ್ಷಿಯಲ್ ಅಲ್ಲದ ಕಾರಣ ಕತ್ತಲು ಆವರಿಸಿಕೊಂಡಿರುವುದರಿಂದ ರಾಬರಿ ಹೆಚ್ಚಾಗಲು ಕಾರಣ ಎಂಬುದು ಸ್ಥಳೀಯರ ವಾದ. ಉತ್ತರ ಕೊಡಬಲ್ಲರೆ ಪೊಲೀಸರು?

ಇದನ್ನೂ ಓದಿ-https://suddilive.in/archives/3729

Related Articles

Leave a Reply

Your email address will not be published. Required fields are marked *

Back to top button