ಕ್ರೈಂ ನ್ಯೂಸ್

ನೆಟ್ಟಗೆ ಸೈಕಲ್ ಹೊಡಿ ಎಂದಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರದಲ್ಲಿ ಓರ್ವ ಯುವಕ ಮತ್ತು ಅನ್ಯಕೋಮಿನ ಯುವಕನ ನಡುವೆ ವೀಲಿಂಗ್ ವಿಚಾರದಲ್ಲಿ ಗಲಾಟೆಯಾಗಿದ್ದು ಯುವಕನೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡಪೇಟೆಯ ಬಳಿ‌ ಸೈಕಲ್ ನ್ನ ರ್ಯಾಶ್ ಆಗಿ ಓಡಿಸಿದ್ದ ವಿಚಾರವಾಗಿ ಸುಶೀಲ್ ಎಂಬ ಯುವಕ ಪ್ರಶ್ನಿಸಿದ್ದಕ್ಕೆ ಆತನನ್ನ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ. ಸುಶೀಲ್ (23) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ.

ಕುಮದ್ವತಿ ಕಾಲೇಜಿನಲ್ಲಿ‌ ಕಂಪ್ಯೂಟರ್ ಆಪರೇಟರ್ ಆಗಿರುವ ಸುಶೀಲ್ ಮನೆ ಬಳಿ ನಾಯಿ ಹಿಡಿದುಕೊಂಡು ಹೋಗುವಾಗ ಸೈಕಲ್ ನ್ನ ವೀಲಿಂಗ್ ಮಾಡಿಕೊಂಡು ಹೋಗುತ್ತಿದ್ದ ಅಪ್ರಾಪ್ತ ಬಾಲಕನಿಗೆ ವೀಲಿಂಗ್ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಇತರೆ ಮೂವರನ್ನ ಕರೆದುಕೊಂಡು ಬಂದು ಆತನೊಂದಿಗೆ ಜಗಳವಾಡಿದ್ದಾನೆ. ಈ ನಾಲ್ವರಲ್ಲಿ ಒಬ್ಬ ಸುಶೀಲ್ ಗೆ ಚಾಕು ಇರಿದಿದ್ದಾನೆ ಎಂದು ಹೇಳಾಗುತ್ತಿದೆ. ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ಮುಖ್ಯರಸ್ತೆಯ ವಿಠ್ಠಲ ದೇವಸ್ಥಾನದ ಬಳಿ ನಡೆದ ಘಟನೆ ನಡೆದಿದೆ.

ಎರಡು ಮೂರು ದಿನಗಳ ಹಿಂದೆ ಸೈಕಲ್ ನಲ್ಲಿ ವೀಲಿಂಗ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಈ ಬಾಲಕ ನಿನ್ನೆ ಮತ್ತೆ ವೀಲಿಂಗ್ ಮಾಡುತ್ತಿದ್ದಾಗ  ಬುದ್ಧಿವಾದ ಹೇಳಿದ್ದಕ್ಕೆ ಈ ಘಟನೆ ಸಂಭವಿಸಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಶಿಕಾರಿಪುರ ಡಿಎಸ್ಪಿ ಕೇಶವ್ ಭೇಟಿ ನೀಡಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನ ಬಂಧಿಸಲಾಗುವುದು. ಸೈಕಲ್ ಮೇಲೆ ಹೋಗುತ್ತಿದ್ದಾಗ ಈ ಗಲಾಟೆ ನಡೆದಿದೆ. ಸಧ್ಯಕ್ಕೆ ಸುಶೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಎಸ್ಪಿಯವರು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8568

Related Articles

Leave a Reply

Your email address will not be published. Required fields are marked *

Back to top button