ಸ್ಥಳೀಯ ಸುದ್ದಿಗಳು
ನಗರದ ಪ್ರತಿಷ್ಠಿತ ಜ್ಯೂವಲರಿ ಅಂಗಡಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿದೆ. ಪ್ರತಿಷ್ಟಿತ ‘ಆಭರಣ‘ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ.
ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ‘ಆಭರಣ’ ಶೋ ರೂಂನ ಮೇಲೆ ಹಾಸನ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಆಭರಣ ಶೋ ರೂಂ ನಲ್ಲಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಐಟಿ ದಾಳಿ ಹಿನ್ನೆಲೆ – ತಾತ್ಕಾಲಿಕವಾಗಿ ಗ್ರಾಹಕರಿಗೆ ನಿರ್ಬಂಧಿಸಲಾಗಿದೆ. ದಾಳಿ ಹಿನ್ನಲೆಯಲ್ಲಿ ತಾತ್ಕಾಲಿಕ ನಾಮಫಲಕವನ್ನ ಅಂಗಡಿಯ ಗೇಟ್ ಗೆ ಹಾಕಲಾಗಿದೆ.
ಲೆಕ್ಕಪರಿಶೋಧನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ವ್ಯವಹಾರಗಳು ಇಲ್ಲವೆಂದು ನಾಮಪಲಕವನ್ನ ತೂಗುಹಾಕಲಾಗಿದೆ. ದೊಡ್ಡಪೇಟೆ ಠಾಣೆಯ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ-https://suddilive.in/archives/2148
