ಕ್ರೈಂ ನ್ಯೂಸ್

ಓರ್ವ ಮಹಿಳೆ ಮತ್ತು ಓರ್ವ ಯುವತಿ ನಾಪತ್ತೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಓರ್ವ ಮಹಿಳೆ ಮತ್ತು‌ ಇನ್ನೋರ್ವ ಯುವತಿ ಕಾಣೆಯಾಗಿದ್ದಾರೆ. ಒಬ್ಬರು ವಿದ್ಯಾನಗರದ ದುರ್ಗಮ್ಮ ಬೀದಿಯಿಂದ ನಾಪತ್ತೆಯಾದರೆ, ಮತ್ತೋರ್ವ ಯುವತಿ ಬಿಸಿಎಂ ಹಾಸ್ಟೆಲ್ ನಿಂದ ಹೊರಹೋದವಳು ನಾಪತ್ತೆಯಾಗಿದ್ದಾರೆ.

ಶಿವಮೊಗ್ಗ ಕೋಟೆ ಪೋಲಿಸ್ ಠಾಣೆ ವ್ಯಾಪ್ತಿಯ ವಿದ್ಯಾ ನಗರದ ದುರ್ಗಮ್ಮ ಬೀದಿ ವಾಸಿ ಮಧು ಎಂಬುವವರ ಪತ್ನಿ ಪ್ರೇಮಾ ಎಂಬ 39 ವರ್ಷದ ಮಹಿಳೆ ಫೆ. 24 ರಂದು ರಾತ್ರಿ 8 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋದವರು ವಾಪಾಸ್ ಆಗಿಲ್ಲ.

ಈಕೆಯ ಚಹರೆ 5.2ಅಡಿ ಎತ್ತರ, ದೃಡ ಮೈಕಟ್ಟು, ದುಂಡು ಮುಖ, ಕಪ್ಪಕೂದಲು, ಗೋದಿ ಮೈಬಣ್ಣ ಹೊಂದಿರುತ್ತಾರೆ. ಈ ಮಹಿಳೆಯ ಸುಳಿವು ಪತ್ತೆಯಾದರೆ ಕೋಟೆ ಪೋಲಿಸ್ ಠಾಣೆ ಶಿವಮೊಗ್ಗ ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೋಲಿಸ್ ಸಬ್ ಇನ್ಸಪೆಕ್ಟರ್ ಶಿವಮೊಗ್ಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಊರಿಗೆ ಹೋಗುವುದಾಗಿ ಹೇಳಿ ಯುವತಿ ಕಾಣೆ

ಬಾಪೂಜಿನಗರದ ಬಿ.ಸಿ.ಎಂ ಹಾಸ್ಟೆಲ್‍ನಲ್ಲಿದ್ದ ಪ್ರಥಮ ಬಿ.ಎಡ್ ಓದುತ್ತಿದ್ದ ಚೈತ್ರ ಬಿನ್ ಹನುಮಂತಪ್ಪ ಎಂಬ 23 ವರ್ಷದ ಯುವತಿ ಫೆ.20 ರಂದು ಸ್ವಂತ ಊರಾದ ಕೊಪ್ಪಳ ತಾ. ಹಿಟ್ನಾಳ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೋದವರು ಊರಿಗೆ ಹೋಗದೆ ಕಾಣೆಯಾಗಿದ್ದಾರೆ.

ಯುವತಿಯು ಸುಮಾರು 5.2 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಕೋಲುಮುಖ, ಕಪ್ಪಕೂದಲು, ಬಿಳಿ ಮೈಬಣ್ಣ ಹೊಂದಿದ್ದು, ನೀಲಿಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆಯ ಸುಳಿವು ಪತ್ತೆಯಾದರೆ ಕೋಟೆ ಪೋಲಿಸ್ ಠಾಣೆ ಶಿವಮೊಗ್ಗ ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೋಲಿಸ್ ಸಬ್ ಇನ್ಸಪೆಕ್ಟರ್ ಶಿವಮೊಗ್ಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9873

Related Articles

Leave a Reply

Your email address will not be published. Required fields are marked *

Back to top button