ಕ್ರೈಂ ನ್ಯೂಸ್

ವೇಶ್ಯವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರ ದಾಳಿ

ಸುದ್ದಿಲೈವ್/ಶಿವಮೊಗ್ಗ

ವೇಶ್ಯವಾಟಿಕೆ ಅಡ್ಡೆ ಮೇಲೆ ನಿನ್ನೆ ಪೊಲೀಸರ ದಾಳಿ ನಡೆದಿದೆ. ಶಿವಮೊಗ್ಗದ ವಿನೋಬನಗರ ಪೊಲೀಸರಿಂದ ‌ದಾಳಿ ನಡೆದಿದ್ದು ಓರ್ವ ಮಹಿಳೆಯ ಮೇಲೆ ಎಫ್ಐಆರ್ ದಾಖಲಾಗಿದೆ.

ಬಾಡಿಗೆಗೆ ಮನೆ ಪಡೆದು ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆದಿದೆ. ಶಿವಮೊಗ್ಗದ ಆಲ್ಕೊಳ ವೃತ್ತದ ಬಳಿಯ ಖ್ಯಾತ ಶೋರೂಮ್ ಸಮೀಪದ ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ವೇಶ್ಯವಾಟಿಕೆ ನಡೆಸುತ್ತಿದ್ದ ಮಹಿಳೆ ಹಾಗು ಮನೆಯಲ್ಲಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಯುವತಿಯನ್ನ ರಕ್ಷಣೆ ಮಾಡಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ನಾಗರತ್ನ ಎಂಬ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಓರ್ವ ಯುವತಿಯನ್ನ ರಕ್ಷಣೆ ಮಾಡಲಾಗಿದೆ. ವಿನೋಬ ನಗರ ಠಾಣೆಯ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/9970

Related Articles

Leave a Reply

Your email address will not be published. Required fields are marked *

Back to top button