ಕ್ರೈಂ ನ್ಯೂಸ್

ಈಶ್ವರಪ್ಪನವರ ಕಾರ್ಯಕ್ರಮ ಆಯೋಜನೆಗೆ ಅಡ್ಡಿ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಈಶ್ವರಪ್ಪನವರ ಕಾರ್ಯಕ್ರಮವನ್ನ ನಡೆಸದಂತೆ ತಡೆಯಲು ಆಯೋಜಕರಿಗೆ ಜಿವ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾರಿಕಾಂಬಾ ಟ್ರಸ್ಟ್ ಸಂಘದ ಸಂಯೋಜಕರ ಮೂಲಕ ಲೋಕಸಭಾ ಚುನಾವಣಾ ಅಂಗವಾಗಿ ಕಾಮಾಕ್ಷಿ ಬೀದಿಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರ ಸಭೆಗೆ ಜನರನ್ನು ಆಯೋಜಿಸುವ ಕುರಿತು ಅಲ್ಲಿನ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು,

ಈ ಸಂಬಂಧ ಫೆ.20 ರಂದು ಸುಮಾರು ಬೆಳಿಗ್ಗೆ 10-30 ಗಂಟೆಗೆ ಬೀದಿಯ ರಾಷ್ಟ್ರಭಕ್ತರ ಬಳಗದ ಕಾರಗಯಕರ್ತರು ಜನರನ್ನು ಒಟ್ಟು ಗೂಡಿಸಲು ಮನೆ ಮನೆಗೆ ಹೋಗಿ ಕರೆಯುತ್ತಿದ್ದಾಗ ಅದೆ ಕೇರಿಯ ವಾಸಿಯ ಮಹಿಳೆ ಒಬ್ವರು ಏಕಾಏಕಿ ಕೂಗಾಡುತ್ತಾ ನಮ್ಮ ಮನೆಯ ಹತ್ತಿರ ಬಂದು ಈಶ್ವರಪ್ಪ ರವರ ಪರವಾಗಿ ಏಕೆ ಪ್ರಚಾರ ಮಾಡುತ್ತಿರುವಿರೆಂದು ಅವ್ಯಾಚ್ಯ ಶಬ್ದಗಳಿಂದ ನಿಂದಿದ್ದಾರೆ.

ಎಲ್ಲೆಲ್ಲೋ ಇರೋ ನಾಯಿಗಳೆಲ್ಲಾ ಬಂದು ನಮ್ಮ ಕೇರಿಗೆ ಬರುತ್ತಿದ್ದಾವೆ ಇವುಗಳಿಗೆ ಓದ್ದು ಓಡಿಸಬೇಕು ಪೂರ್ಣಿಮಾರವರದ್ದು ಇಲ್ಲಿ ಅತಿ ಆಗಿದೆ ಹೀಗೆ ಮಾಡುತ್ತಿದ್ದರೆ ಅವಳಿಗೂ ಜೀವಸಹಿತ ಬಿಡುವುದಿಲ್ಲ ಎಂದು ಕೆಟ್ಟದಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ.

ಈ ಪ್ರಕರಣ ಈಗ ಕಾಮಾಕ್ಷಿ ಬೀದಿಯ ಕಮಲಿ, ಗಂಗೂ, ಪ್ರಜ್ವಲ್ ಅಕ್ಷತಾರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/13517

Related Articles

Leave a Reply

Your email address will not be published. Required fields are marked *

Back to top button