ಕ್ರೈಂ ನ್ಯೂಸ್

ಕಳುವು ಆರೋಪಿಯ ಬಂಧನ

ಸುದ್ದಿಲೈವ್/ಸಾಗರ:

ನಗರ ವ್ಯಾಪ್ತಿಯ ಜನ್ನತ್ ನಗರದ ಮನೆಯೊಂದರಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀಧರ ನಗರ ನಿವಾಸಿ ಇರ್ಫಾನ್ ಎಂಬಾತನನ್ನು ಮಂಗಳವಾರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದ್ದು  ಆರೋಪಿತನಿಂದ ಒಟ್ಟು 80,300 ರೂ.ಮೌಲ್ಯದ ಸ್ವತ್ತನ್ನ ವಶಪಡಿಸಿಕೊಳ್ಳಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ 17/02/2022 ರಂದು ನಗರಸಭೆ ವ್ಯಾಪ್ತಿಯ ಜನ್ನತ್ ನಗರದ 3ನೇ ಕ್ರಾಸ್ ನಿವಾಸಿ ಜರೀನಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು , ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ವಿವಿಧ ಆಭರಣಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಟೆ ಪೊಲೀಸರು ಕಲಂ 457,380 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್, ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಅನಿಲ್ ಕುಮಾರ್ ಭೂಮರೆಡ್ಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 2 ಕಾರಿಯಪ್ಪನವರ ಮಾರ್ಗದರ್ಶನದಲ್ಲಿ ಸಾಗರ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಗೋಪಾಲಕೃಷ್ಣ  ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಸೀತಾರಮ್ ನೇತೃತ್ವದಲ್ಲಿ ಪೇಟೆ ಪೊಲೀಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ರತ್ನಾಕರ, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ವಿಶ್ವನಾಥ್ ರವರ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿ ನಗರದ ಶ್ರೀಧರ ನಗರ ನಿವಾಸಿ ಇರ್ಫಾನ್ ಎಂಬಾತನನ್ನು ಬಂಧಿಸಿ ದಸ್ತಗಿರಿ ನಡೆಸಿದ್ದಾರೆ.

ಆರೋಪಿಯಿಂದ ಅಂದಾಜು 69,300/- ಮೌಲ್ಯದ ವಿವಿಧ ಚಿನ್ನದ ಆಭರಣಗಳು ಮತ್ತು 11,000/- ರೂ ನಗದು ಹಣ ಅಮಾನತ್ತು ಪಡಿಸಿಕೊಂಡಿದ್ದು , ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಿಂದ ಒಟ್ಟು 80,300/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ,

ಇದನ್ನೂ ಓದಿ-https://suddilive.in/archives/9350

Related Articles

Leave a Reply

Your email address will not be published. Required fields are marked *

Back to top button