ಸಿನಿಮಾ ಸುದ್ದಿಗಳು

ಕೆರೆಬೇಟೆಯ ಟೈಟಲ್ ಟ್ರ್ಯಾಕ್ ರಿಲೀಸ್

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನ ಆಸ್ಮಿಥೆಯಾಗಿರುವ ಕೆರೆಬೇಟೆ ಸಿನಿಮಾ ಮಾ.15 ರಂದು ಬಿಡುಗಡೆಯಾಗಲಿದೆ. ಈ ಕುರಿತು ಇಂದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಾಯಿತು. ಸಂಸದ ರಾಘವೇಂದ್ರ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದರು.‌

ಕರಡಿಕುಣಿತ, ಜೂಜಾಟ, ಜಾನಪದ, ಅಂಟಿಕೆ ಪಿಂಟಿಕೆಯನ್ನ ಹೊಂದಿ ಸಂಪೀರ್ಣ ಗ್ರಾಮೀಣ ಸಿನಿಮಾವಾಗಿದೆ. ರಂಗಭೂಮಿಯ ನಟರ ತಂವೇ ಇಲ್ಲಿ ಅಭಿನಿಯಿಸಿದೆ. ಟೈಟಲ್ ಟ್ರ್ಯಾಕ್ ರಿಲೀಸ್ ಆದ ನಂತರ ಸಿನಿಮಾ ತಂಡ ಸುದ್ದಿಗೋಷ್ಣಿ ನಡೆಸಿದೆ.

ಮೊದಲಿಗೆ ಮಾತನಾಡಿದ ಸಿನಿಮಾದ ಕಥೆ ಮತ್ತು ನಿರ್ದೇಶಕ ರಾಜು ಗುರು ಬಿ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ, 70 ದಿನ ಔಟ್ ಡೋರ್ ಶೂಟ್ ಆಗಿದೆ. 10 ತಿಂಗಳು ಕಥೆ ಮೇಲೆ ಕೆಲಸ ಮಾಡಿದ್ದೇವೆ. ಸಾಗರ, ಸೊರಬ, ಸಿಗಂದೂರಿನ ಸುತ್ತಮುತ್ತ ಶೂಟಿಂಗ್ ನಡೆಸಿದ್ದೇವೆ ಎಂದರು.

ಸಿನಿಮಾ ನಟ ಗೌರಿಶಂಕರ್ ಮಾತನಾಡಿ, ಜೋಕಾಲಿ ಮತ್ತು ರಾಜಹಂಸ ಎಂಬ ಸಿನಿಮಾ ಮಾಡಿದ್ದೆ. ಈಗ ಹೊಸ ಸಿನಿಮಾ ಕೆರೆಬೇಟೆ ಸಿನಿಮಾ ಮಾ.15 ರಂದು ರಿಲೀಸ್ ಮಾಡ್ತಾ ಇದ್ದೇವೆ. ಸಿನಿಮಾ ಮಾಡುವುದಕ್ಕಿಂತ ಪ್ರಮೋಷನ್ ಕೆಲಸ ಬಹಳ ದೊಡ್ಡದು. ಕೆರೆಬೇಟೆ ಮಲೆನಾಡ ಭಾಷೆ ಮತ್ತು ಸಂಸ್ಕೃತಿಯನ್ನ ಎತ್ತಿಹಿಡಿಯಲಾಗಿದೆ. ಸಿನಿಮಾದ ಕೊನೆಯ 10 ನಿಮಿಷದ ಫಿನಿಶಿಂಗ್ ವರ್ಕ ಮೇಲೆ ಹೆಚ್ಚು ಕೆಲಸ ಮಾಡಲಾಗಿದೆ. ನೇಟಿವಿಟಿ ಸಿನಿಮಾವನ್ನ ಕಮರ್ಷಿಯಲ್ ಆಗಿ ಮಾಡಲಾಗಿದೆ.

ಸಿನಿಮಾ ಬದುಕಿನ‌ಮೇಲೆ ಕಥೆ ಹೇಳುತ್ತೆ. ಇದು ಕನಸು ಆಗಿರಬಹುದು. ಮಾ.15 ನಂತರ ಈ ಕಥೆ ಬಗ್ಗೆ ನಿಮಗೆ ಗೊತ್ತಾಗುತ್ತೆ. ಗಗನ್ ಬಗೇರಯಾ ಸಿನಿಮಾ ಸಂಗೀತ ನಡೆಸಿದ್ದಾರೆ. ಆರಂಭದಲ್ಲಿ ಮೂವರಿದ್ದಿವಿ. ನಾವು ಮಾತ್ರ ಮಲೆನಾಡ ಭಾಗದವರಾಗಿದ್ದೇವು.‌ ಚಿಲ್ಲರ್ ಮಂಜು, ಅಭಿನಯಿಸಿದ್ದಾರೆ. ತಿಂಗಳಾನುಕಟ್ಟಲೆ ರಿಯರ್ಸಲ್ ಮಾಡಿದ್ದೇವೆ. ಔಟ್ ಡೋರ್ ಶೂಟಿಂಗ್ ಕಷ್ಟವಾಗಿತ್ತು. ಆದರೆ ಸಮಸ್ಯೆಯಾಗಿಲ್ಲ. ಸಿಗಂದೂರಿನ ಹಾರ್ಗೆಯಿಂದ ಕೋಗಾರ್ ಘಾಟ್ ಬಳಿ ಶೂಟಿಂಗ್ ಮಾಡಿದ್ದೇವೆ.

ಜೈಶಂಕರ್ ಪಟೇಲ್ ಪ್ರೊಡ್ಯೂಸರ್ ಆಗಿದ್ದಾರೆ ಮಾ. 15 ರಂದು ಬಿಡುಗಡೆಯನ್ನ ನಟ ದರ್ಶನ್ ಅವರ ಸಹೋದರ ದಿನಕರ್ ತೂಗದೀಪ್ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ದೀಪಾವಳಿ ಹಬ್ಬದಂತೆ ಕೆರೆಭೇಟೆ ಇಡೀ ಸಿನಿಮಾ ಸದ್ದು ಮಾಡುತ್ತೆ. ಆದರೆ ಸಿನಿಮಾದಲ್ಲಿ ಬದುಕಿನ ಸುತ್ತಮುತ್ತ ಕಥೆ ಹೆಣೆಯಲಾಗಿದೆ ಎಂದರು.

ನಟಿ ಬಿಂದೂ ಶಿವರಾಮ್ ಮಾತನಾಡಿ, ಗುಣಮಟ್ಟದ ಸಿನಿಮಾ ತೆಗೆಯಲಾಗಿದೆ. ಸಿನಿಮಾ ಇಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆಡಿಷನಲ್ ಆಗಿ ಸೆಲೆಕ್ಟ್ ಆಗಿದ್ದೆ.‌ ನೈಜಕಥೆಯನ್ನ ರಾನಲ್ಲಿ ಶೂಟಿಂಗ್ ಮಾಡಲಾಗಿದೆ ಜನಮನ ಪ್ರೊಡಕ್ಷನ್ ನಿಂದ ಸಿನಿಮಾ ಬಿಡುಗಡೆಯಾಗಲಿದೆ ಎಂದರು.‌

ಇದನ್ನೂ ಓದಿ-https://suddilive.in/archives/9839

Related Articles

Leave a Reply

Your email address will not be published. Required fields are marked *

Back to top button