ನಗರ‌ ಸುದ್ದಿಗಳು

ಬೆಕ್ಕಿನ ಕಲ್ಮಠದಲ್ಲಿ ದೇವಸ್ಥಾನಗಳ ಕುಂದುಕೊರತೆ ಮತ್ತು ಸಂಘಟನೆ ಕುರಿತು ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ದೇವಸ್ಥಾನ-ಸಂಸ್ಕೃತಿ ರಕ್ಷಣೆಗಾಗಿ ಮಾರ್ಚ್ 3 ರಂದು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ ನಡೆಯಲಿದೆ. ಈ ಪರಿಷತ್ ನಲ್ಲಿ ದೇವಸ್ಥಾನಗಳ ಸರಕಾರೀಕರಣ ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಠದ ಸಂಯೋಜಕ ವಿಜಯ ರೇವಣ್ಕರ್ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಿಂದ 200 ಕ್ಕೂ ಹೆಚ್ಚು ಆಮಂತ್ರಿತ ದೇವಸ್ಥಾನದ ವಿಶ್ವಸ್ಥರು, ಅರ್ಚಕರು, ಪುರೋಹಿತರು, ನ್ಯಾಯವಾದಿಗಳು ಧಾರ್ಮಿಕ ಚಿಂತಕರು ಭಾಗಿಯಾಗಲಿದ್ದಾರೆ.

ಈ ಮಹಾಸಂಘ ಹೊಸದಾಗಿ ಆರಂಭವಾಗಿದೆ. ಜಿಲ್ಲಾ ಮಟ್ಟದಲ್ಲಿ ಆರಂಭವಾಗಲಿದೆ. ಹೊಯ್ಸಳ ಸಂದರ್ಭದಲ್ಲಿ ದೇವಸ್ಥಾನಗಳು ಅವನತಿಗೆ ಹೋಗಿದೆ. ರಾಜ್ಯದಲ್ಲಿ 34½ ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಬರಲಿದೆ. ಅದರಲ್ಲಿ 500 ದೇವಸ್ಥಾನಗಳಿಗೆ ಆದಾಯ ಬರ್ತಾ ಇದೆ.‌ ಆದರೆ ಉಳಿದ ದೇವಸ್ಥಾನಗಳು ಆದಾಯವಿಲ್ಲದ ಕಾರಣ ಅನುದಾನಗಳೆ ಬರುತ್ತಿಲ್ಲ

ಮೊದಲು ದೇವಸ್ಥಾನದ ವಿಷಯದಲ್ಲಿ ಸಂಘಟನೆ ಆಗಬೇಕು. ದೇವಸ್ಥಾನಗಳಲ್ಲಿ ಭ್ರಷ್ಠಾಚಾರಗಳು ನಡೆಯುತ್ತಿವೆ. ಕೆಲ ಪುರೋಹಿತರು ಅನುದಾನ ಪಡೆಯಲು ಮುಜುರಾಯಿ ಇಲಾಖೆಯಿಂದ ಅನುದಾನ ಪಡೆಯಲು ಲಂಚದ ಮೊರೆ ಹೋಗುವ ಅನಿರ್ವಾತೆ ಇದೆ. ಮಹಾಸಂಘ ಈ ಬಗ್ಗೆ ಪ್ರತಿಭಟಿಸಲಿದೆ ಎಂದರು.

ದನ್ನೂ ಓದಿ-https://suddilive.in/archives/9836

Related Articles

Leave a Reply

Your email address will not be published. Required fields are marked *

Back to top button