ಸಿನಿಮಾ ಸುದ್ದಿಗಳು

‘ಕೇಸ್ ಆಫ್ ಕೊಂಡಾಣ’ ಪ್ರಯತ್ನ ಉತ್ತಮ ಆದರೆ…!?

ಸುದ್ದಿಲೈವ್/ಶಿವಮೊಗ್ಗ

ಕೇಸ್ ಆಫ್ ಕೊಂಡಾಣ ಸಿನಿಮಾ ಒಂದು ಥ್ರಿಲ್ಲರ್ ಮೂವಿ ಆಗಿದೆ. ಉತ್ತಮ ಸ್ಕ್ರೀನ್ ಪ್ಲೇ, ಸ್ಟೋರಿ ನರೆಟಿವ್ ಇದೆ. ಒಟಿಟಿ ಫ್ಲಾಟ್ ಫಾರಂ ನಲ್ಲಿ ಈ ಸಿನಿಮಾ ಇನ್ನೂ ಹೆಚ್ಚು ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವ ನಿರೀಕ್ಷೆಯನ್ನೂ ಹೆಚ್ಚಿಸಿದೆ.‌

ಎರಡೇ ಹಾಡು ಇರುವ ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಉತ್ತಮ ನಟರಾಗಿ ನಟನೆ ಮಾಡಿದ್ದಾರೆ. ಕೊಂಡಾಣದಲ್ಲಿ ನಡೆದ ಕ್ರೈಂ‌ ಘಟನೆಯ ಆಧಾರದ ಮೇರೆಗೆ ಸಿನಿಮಾದ ಕಥೆ ಬಿಚ್ಚಿಕೊಳ್ಳಲಿದೆ.

ಶಶಾಂಕ್ ನಾರಾಯಣ ಸಿನಿಮಾದ ಎಡಿಟರ್‌ ಆಗಿದ್ದಾರೆ. ಶ್ರೀ ಹರ್ಷ ಗೋಭಟ್ ಖಳನಟನಾಗಿ ನಟಿಸಿದ್ದಾರೆ. ವಿಶ್ವಜಿತ್ ರಾಮ್ ಛಾಹಾಗ್ರಹಣ ನಿರ್ದೇಶಕರಾಗಿದ್ದಾರೆ. ವಿಷೇಶ ಎಂದರೆ ಇವರೆಲ್ಲಾ ಶಿವಮೊಗ್ಗದವರಾಗಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ರಚನೆ ಮತ್ತು ನಿರ್ದೇಶಕರಾಗಿದ್ದಾರೆ. ಎಸಿಪಿಯಾಗಿ ಭಾವನಾ ಮೆನನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅದರಂತೆ ಸಿನಿಮಾದಲ್ಲಿ ನೆಗೆಟಿವ್ ಸೈಡ್ ಬಹಳನೇ ಇದೆ. ಸಿನಿಮಾ ಪ್ರೇಕ್ಷಕರ ಕುತೂಹಲವನ್ನ ಹಿಡಿದುಕೊಟ್ಟುಕೊಳುವುದರಲ್ಲಿ ವಿಫಲವಾಗಿದೆ. ಒಂದು ಕ್ರೈಂ ಸ್ಟೋರಿ ಹೇಳ್ತಾ ಹೇಳ್ತಾ ಹೋದಂತೆ ಸತ್ಯ ಕುತೂಹಲಕಾರಿಯಾಗಿ ಬಿಚ್ಚಿಕೊಳ್ಳಬೇಕು. ಆದರೆ ಹಾಗೆ ಮೂಡಿಬಂದಿಲ್ಲ.‌

ನಾಟಕದ ರೀತಿಯಲ್ಲಿ ಚಿತ್ರಕತೆ ಬಿಚ್ಚುಕೊಳ್ಳುತ್ತಾ ಹೋಗುತ್ತದೆ. ಕಥೆ ಸೂಪರ್ ಆಗಿದ್ದರೂ ಕತೆಯನ್ನ ಪ್ರೇಕ್ಷಕನ‌ ಎದುರು ಬಿಚ್ಚಿಡುವ ರೀತಿ ಸ್ವಾರಸ್ಯಕರ ಇರಲಿಲ್ಲ. ರೌಡಿಜಂ, ಪೊಲೀಸ್ ಕೊಲೆ, ಬಡತನದ ಜೀವನ, ಪೊಲೀಸ್ ಅಧಿಕಾರಿಯ ಮೌನ, ಹೀಗೆ ಉತ್ತಮವಾಗಿ ಚಿತ್ರೀಕರಣಗೊಂಡರು ಸಿನಿಮಾವನ್ನ ಪ್ರೇಕ್ಷಕರ ಎದುರು ಪ್ರೆಸೆಂಟೇಷನ್ ನಲ್ಲಿ ತಂಡ ಎಡವಿದೆ.

ಸ್ಪರ್ಧಾತ್ಮಕವಾಗಿರುವ ಈ ಸಿನಿಮಾ ರಂಗದಲ್ಲಿ ಕೇಸ್ ಆಫ್ ಕೊಂಡಾಣದ ಪ್ರೆಸೆಂಟೇಷನ್ ಉತ್ತಮವಾಗಿಲ್ಲ. ವಿಜಯರಾಘವೇಂದ್ರರಿಗೆ ಮತ್ತು ಭಾವರವರು ಉತ್ತಮ‌ ನಟಿಸಿದ್ದರೂ ಅವರಿಗೆ  ಬ್ರೇಕ್ ಥ್ರೂ ತಂದುಕೊಡುವ ನಿರೀಕ್ಷೆ ಹುಸಿಯಾಗಿದೆ.‌ ಸಿನಿಮಾ ಸಾಗ್ತಾ ಸಾಗ್ತಾ ಪ್ರೇಕ್ಷಕರಿಗೆ ಬೋರಿಂಗ್ ಎನಿಸುತ್ತದೆ. ಆದರೆ ಸಿನಿಮಾ ತಂಡದ ಪ್ರಯತ್ನ ಮಾತ್ರ ಅದ್ಭುತವಾಗಿದೆ.

ಇದನ್ನೂ‌ ಓದಿ-https://suddilive.in/archives/7779

Related Articles

Leave a Reply

Your email address will not be published. Required fields are marked *

Back to top button