ರಾಜಕೀಯ ಸುದ್ದಿಗಳು

ಯೂ ಟರ್ನ್ ಹೊಡುದ್ರ ಸಂಸದರು?

ಸುದ್ದಿಲೈವ್/ಶಿವಮೊಗ್ಗ

ಯುವಜನತೆಯ ಕಣ್ಣಿಗೆ ಮಣ್ಣೆರುಚುವ ಕಾರ್ಯಕ್ರಮವನ್ನ ಕಾಂಗ್ರೆಸ್ ನಿನ್ನೆ ಕಾಂಗ್ರೆಸ್ ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.

ನಿನ್ನೆ ವೇದಿಕೆ ಮೇಲೆ ಉಪಸ್ಥಿತರಿದ್ದ ವೇಳೆ ಒಳ್ಳೆ ಕಾರ್ಯಕ್ರಮ ಎಂದಿದ್ದ ಸಂಸದ ರಾಘವೇದ್ರ ಇಂದು ಯುಟರ್ನ್ ಹೊಡೆದಿದ್ದಾರೆ. ಯುವಜನ ಯುವಕರಿಗೆ ಮಾಸಾಶನ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಗ್ಯಾರೆಂಟಿ ಅಲೆಯ ಮೇಲೆ ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿಯನ್ನ ಜಾರಿ ಮಾಡಲು ಅನೇಕ ಮಾನದಂಡ ಹಾಕಿದೆ. ನಿರುದ್ಯೋಗಿಗಳು ದೊಡ್ಡಸಙಖ್ಯೆಯಲ್ಲುದ್ದಾರೆ. 2022-23 ನೇ ಸಾಲಿನ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 6 ತಿಂಗಳ ನಂತರ ಯುವನಿಧಿ ಜಾರಿಗೊಳಿಸಲಾಗಿದೆ ಎಂದು ಸುದ್ದಿಗೋಚ್ಠಿಯಲ್ಲಿ ತಿಳಿಸಿದರು.

ನಾಲ್ಕೈದು ವಿಶ್ವವಿದ್ಯಾಲಯಯದ ಮಕ್ಕಳಿಗೆ ಯುವನಿಧಿ ಸಿಗುತ್ತಿಲ್ಲ. ಮಕ್ಕಳಲ್ಲೂ ಕೂಡ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನೀಡುವುದಾಗಿ ಮತದಾರರಿಗೆ ಮೋಸ ಮಾಡಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಕತ್ತರಿ ಹಾಕುವ ಕೆಲಸವೂ ಆಗಿದೆ  ಪದವೀಧರರ ಎಲ್ಲರಿಗೂ ಮಾಸಾಶನ ನೀಡುವುದಾಗಿ ಹೇಳಿದರು ಈಗ ಕಂಡೀಷನ್ ಹೇರಿದ್ದಾರೆ. ಕೆಲಸ ಸಿಗುವವರೆಗೂ ಎಂದಿದ್ದರು‌ ಈಗ ಎರಡು ವರ್ಷದ ವರೆಗೆ ಎನ್ನಲಾಗಿದೆ.

ಎಲ್ಲಾ ಗ್ಯಾರೆಂಟಿಯನ್ನ ಲೋಕಸಭಾ ಚುನಾವಣೆಯ ನಂತರ ಮುಂದುವರೆಸುವ ಬಗ್ಗೆ ಅನುಮಾನವಿದೆ. ಐದು ಗ್ಯಾರೆಙಟಿಯನ್ನ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ನಡೆದಿದೆ.  1ಲಕ್ಷ ಜನ ನೋಂದಣಿದಾರರಿಗೆ 200 ಕೋಟಿ ರೂ. ಹಣ ನೀಡಬಹುದಾಗಿದೆ. ಪಿಎಂ ವಿಶ್ವಕರ್ಮ ಯೋಜನೆ ಎಲ್ಲರಿಗೂ ಅನುಕೂಲವಾಗಲಿದೆ ಬಳಕೆಗೆ ಕರೆ ನೀಡಿದರು.‌

ಶಕ್ತಿಯೋಜನೆಯಲ್ಲಿ ಜಿಲ್ಲೆಯಲ್ಲಿ 1.41 ಕೋಟಿ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಿದ್ದಾರೆ  44.59 ಕೋಟಿ ಹೊರೆಯಾಗಿದೆ. ಅಭಿವೃದ್ಧಿ ಕಾಮಗಾರಿ ಇಲ್ಲವಾಗಿದೆ. ಇಲ್ಲಿ ದುರುಪಯೋಗ ವಾಗುತ್ತಿದೆಯಾ ಎಂಬ ಶಂಕೆಯೂ ಇದೆ ಎಂದು ದೂರಿದರು.

ಸಿಎಂ ನಿನ್ನೆ ನಾನೆ ಫ್ರೀಡಂ ಪಾರ್ಕ್ ಮಾಡಿಸಿದ್ದಾಗಿ ಹೇಳಿದ್ದಾರೆ. ತಪ್ಪು ಮಾಹಿತಿ ಇದೆ. ಸೋಗಾನೆಯಲ್ಲಿ 10-11 ನೇ ಸಾಲಿನ ಬಜೆಟ್ ನಲ್ಲಿ 34 ಕೋಟಿ ರೂ ವೆಚ್ಚದಲ್ಲಿ ಕಾರಾಗೃಹ ನಿರ್ಮಾಣಕ್ಕೆ ಹಣ ನೀಡಿದ್ದಾರೆ.ಕಾರಾಗೃಹವನ್ನ  ಸರ್ವೆ ನಂಬರ್ 120 ರಲ್ಲಿ ನಿರ್ಮಿಸಲಾಗಿದೆ. 48 ಗಂಟೆಯಲ್ಲಿ ಬಿಎಸ್ ವೈ ಹಳೇ ಜೈಲನ್ನ ಫ್ರೀಡಂ ಪಾರ್ಕ್ ಎಂದು  ಆದೇಶಿಸಿರುವುದಾಗಿ ಎಂದರು.

ಪಾಲಿಕೆ ಪ್ರಕ್ರಿಯೆ ಆಗಿಲ್ಲ. ಚಂದ್ರಶೇಖರ್ ಆಜಾದ್ ಹೆಸರಿಡಲಾಗಿತ್ತು. ಆದರೆ ಪಾಲಿಕೆಯ ಒಪ್ಪಿಗೆ ಯಾಗಿರಲಿಲ್ಲ. ಸುತ್ತೂರು ಶ್ರೀಗಳ ಜಯಂತಿ ನಡೆದಾಗ ಬಿಜಾಪುರದ ಸಿದ್ದೇಶ್ವರ ಸ್ವಾಮಿಗಳು ಅಲ್ಲಮನ ಹೆಸರನ್ನ ಪ್ರಸ್ತಾಪಿಸುವ ಮುಂಚೆ ಸ್ವಾತಂತ್ಯ ಹೋರಾಟಗಾರ  ಚಂದ್ರ ಶೇಖರ್ ಆಜಾದ್ ಹೆಸರನ್ನ ಪ್ರಸ್ತಾಪಿಸಿದ್ದರು ಎಂದು ಸಂಸದರು ತಿಳಿಸಿದರು.

ಇದನ್ನೂ ಓದಿ-https://suddilive.in/archives/6724

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373