ಕೊನೆ ಉಸಿರು ಎಳೆದ ಭರತ್!

ಸುದ್ದಿಲೈವ್/ತೀರ್ಥಹಳ್ಳಿ

ಭಾನುವಾರ ನಸುಕಿನ ಜಾವ ನಡೆದ ಸಜೀವ ದಹನ ಪ್ರಕರಣದಲ್ಲಿ ಬದುಕುಳಿದಿದ್ದ ಭರತ್ ಸಹ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾನೆ.
ಭಾನುವಾರ ನಸುಕಿನ ಜಾವದಲ್ಲಿ ಮನೆಯಲ್ಲಿಯೇ ಕಟ್ಟಿಗೆ ಜೋಡಿಸಿ ಕೇಕುಡ ಕುಟುಂಬ ತೀರ್ಥಹಳ್ಳಿ ತಾಲೂಕು ಅರಳಸುರಳಿ ಗ್ರಾಮದಲ್ಲಿ ದುರಂತ ಅಂತ್ಯ ಕಂಡಿತ್ತು. ಇದರಲ್ಲಿ ರಾಘವೇಂದ್ರ ಕೇಕುಡ ಅವರ ಮಗ ಭರತ್ ಬದುಕುಳಿದಿದ್ದನು. ರಾಘವೇಂದ್ರ ಕೇಕುಡ, ನಾಗರತ್ನ ಮತ್ತು ಶ್ರೀರಾಮ ಎಂಬುವರು ಸಜೀವ ದಹನ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದಲ್ಲಿ ಗಾಯಾಳು ಭರತ್ ಬದುಕುಳಿದ್ದರು. ಈತನನಿಗಾಗಿ ಉಳಿಸಿಕೊಳ್ಳಲು ಮಂಗಳೂರು, ಮಂಗಳೂರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭರತ್ ಇಂದು ಕೊನೆ ಉಸಿರು ಎಳೆದಿದ್ದಾರೆ.
ಈ ದುರಂತ ಅಂತ್ಯ ಕಂಡ ಕೇಕುಡ ಕುಟುಂಬದ ಕುರಿತು ತೀರ್ಥಹಳ್ಳಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು. ಬದಕುಳಿದ ಭರತ್ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/949
