ಕ್ರೈಂ ನ್ಯೂಸ್

ಏ.10 ರವರೆಗೆ ಅವಕಾಶ ಮಾತ್ರ, ಆಮೇಲೆ ಕೇಸ್ ಬೀಳೋದು ಗ್ಯಾರೆಂಟಿ

ಸುದ್ದಿಲೈವ್/ಶಿವಮೊಗ್ಗ

ಹುಲಿ ಉಗುರು, ಪ್ರಾಣಿಗಳ ವಸ್ತುಗಳಿಂದ ತಯಾರಿಸಿರುವ ಚಿನ್ನಾಭರಣ, ಆನೆ ತಲೆ, ಜಿಂಕೆ ಕೊಂಬು, ಕಾಡುಕೋಣದ ಮುಖಗಳು ಮನೆಯಲ್ಲಿಟ್ಟು ಕೊಂಡಿದ್ದರೆ ಈಗಾಗಲೇ ಸರ್ಕಾರ ಕೇಸ್ ಮೂಲಕ ಜನರನ್ನ ಎಚ್ಚರಿಸಿತ್ತು.

ಆದರೆ ಈಗ ಮತ್ತೊಮ್ಮೆ ಅವಕಾಶ ಕಲ್ಲಿಸಿದೆ. ಏ.10 ರ ಒಳಗೆ ಇಂತಹ ವಸ್ತುಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲು ಸೂಚಿಸಲಾಗಿದೆ.  ನಿಗದಿತ ಸಮಯದೊಳಗೆ ವನ್ಯ ಜೀವಿಗಳ ವಸ್ತುಗಳನ್ನ ವಾಪಾಸ್ ನೀಡಿದರೆ ನೀವು ಬಜಾವ್‌ಆಗಲಿದ್ದೀರಿ. ಇಲ್ಲಾಂದರೆ ಕೇಸ್ ಗ್ಯಾರೆಂಟಿ!

ವನ್ಯ ಪ್ರಾಣಿಗಳ‌ ವಸ್ತುಗಳನ್ನ ಚಿನ್ನಾಭರಣದಲ್ಲಿ ಬಳಸಿಕೊಂಡಿದ್ದಕ್ಕೆ ಬಿಗ್ ಬಾಸ್ ನ ಸ್ಪರ್ಧಿಯೊಬ್ಬರ ಬಂಧನವಾಗಿತ್ತು. ಆ ಬಂಧನದ ಬೆನ್ಬಲ್ಲೇ ತೀರ್ಥಹಳ್ಳಿ ತಾಲೂಕಿನಲ್ಲಿನ ಮನೆಗಳಲ್ಲಿ ವನ್ಯ ಜೀವಿಗಳ ಕೊಬುಗಳು ಪತ್ತೆಯಾಗಿತ್ತು. ಅದು ರಾಜಕೀಯ ತಿರುವು ಪಡೆದುಕೊಂಡಿತ್ತು.

ಈ ಎಲ್ಲಾ ಉದಹರಣೆಗಳು ತಲೆನೋವಾಗಿ ಪರಿಣಮಿಸಿದ ಕಾರಣ ಸರ್ಕಾರ ವನ್ಯ ಜೀವಿಗಳ ವಸ್ತುಗಳನ್ನ ಹಿಂತಿರುಗಿಸಲು ಅವಕಾಶ ಕಲ್ಪಿಸಿದೆ. ಎಚ್ಚರ ವಿರಲಿ ಏ.10 ರೊಳಗೆ ನಿಮ್ಮ ಬಳಿಯ ವನ್ಯಜೀವಿಯ ವಸ್ತುಗಳನ್ನ ಹಿಂದಿರುಗಿಸಲು ಸೂಚಿಸಿದೆ.

ಇದನ್ನೂ ಓದಿ-https://suddilive.in/archives/9184

Related Articles

Leave a Reply

Your email address will not be published. Required fields are marked *

Back to top button