ಕ್ರೈಂ ನ್ಯೂಸ್

ಯುವತಿಯನ್ನ‌ ಚೇಡಿಸಿದವನ ವಿರುದ್ಧ‌ ಬಿತ್ತು‌ ಕೆಸ್

ಸುದ್ದಿಲೈವ್/ಶಿವಮೊಗ್ಗ

19 ವರ್ಷದ ಯುವತಿಯನ್ನ ಕಂಡು ಚುಡಾಯಿಸಿ, ಆಕೆಯ ಫೋಟೋವನ್ನ ಅಪ್ಲೋಡ್ ಮಾಡಿ ಅಪ್ಪನ ಮರ್ಯಾದೆ ತೆಗೆಯುತ್ತೇನೆ ಎಂಬ ಯುವಕನ ವಿರುದ್ಧ ಯುವತಿ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿ ಕಲ್ಲಪ್ಪಕೇರಿಯಲ್ಲಿ ವಾಸವಾಗಿದ್ದು ಈಗ ಶಿವಮೊಗ್ಗದಲ್ಲಿಯೇ ಬೇರೆಡೆ ವಾಸವಾಗಿದ್ದರು. ಮೊನ್ನೆ ಸೋಮವಾರ ಫೆ.19 ರಂದು ಯುವತಿ ತಮ್ಮ ಹಳೇ ಮನೆಯ ಬಳಿಯಿರುವ ಸ್ನೇಹಿತೆಯನ್ನ ಮಾತನಾಡಿಸಿಕೊಂಡು ಬರೋಣ ಎಂದು ಹೇಳಿ ಕಲ್ಲಪ್ಪನ ಕೇರಿಗೆ ಹೋಗಿದ್ದಾಗ ಸೀಗೆಹಟ್ಟಿಯ ರಮೇಶ್ ಎಂಬಾತ ನೋಡಿರುತ್ತಾನೆ.

ಹಿಂಬಾಲಿಸಿಕೊಂಡು ಹೋದ‌ ಯುವಕ ಯುವತಿಯನ್ನ ಕಂಡು ತುಂಬ ಚೆನ್ನಾಗಿ‌ಕಾಣ್ತೀಯ ಎಂದು ಕೆಟ್ಟದೃಷ್ಠಿಯಿಂದ ನೋಡಿರುವುದಾಗಿ‌ ದೂರಿನಲ್ಲಿ ಆರೋಪಿಸಲಾಗಿದೆ.

ನಂತರ ನಿನ್ನ ಫೋಟೋ ನನ್ನ ಬಳಿ ಇದೆ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವೆ. ನಿಮ್ಮಪ್ಪನ ಮಾನ ತೆಗೆಯುವೆ ಎಂದು ಗದರಿಸಿದ್ದಾನೆ‌. ಈ ಬಗ್ಗೆ ಯುವತಿ ದೊಡ್ಡೊಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9494

Related Articles

Leave a Reply

Your email address will not be published. Required fields are marked *

Back to top button