ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ-ಸೆಟ್ಲುಮೆಂಟ್ ಆಗದ ಕಾರಣ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಹೋದಲ್ಲಿ ದಂಡ ಕಟ್ಟೋದು ಫಿಕ್ಸ್ ಆಗಲಿದೆ. ವಿದ್ಯುತ್ ಕಂಬಗಳು ಸಾರ್ವಜನಿಕ ಆಸ್ತಿಯಾಗಿ ಪರಿಗಣಿಸಿದ್ದರಿಂದ ರಸ್ತೆ ಅಪಘಾತದಲ್ಲಿ ವಿದ್ಯುತ್ ಕಂಬ ಹಾಳಾದರೂ ದಂಡ ತೆತ್ತಬೇಕಿದೆ.
ಅ.21 ರಂದು ಭದ್ರಾವತಿಯಿಂದ ಶಿವನಿ ಕಡೆಗೆ ಹೊರಟಿದ್ದ ಕೆ.ಎ-52 ಬಿ-4032 ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಂಗೂರಿನ ಅಣಪ್ಪ ರವರ ಮನೆಯ ಹತ್ತಿರ ರಸ್ತೆಯ ಎಡ ಬದಿಯಲಿರುವ ಮೆಸ್ಕಾಂ ಇಲಾಖೆಯ ಕೆ.ಇ.ಬಿ ವಿದ್ಯುತ್ 33 ಕೆ.ವಿ ವಾಹಕದ ಕಂಬಗಳಿಗೆ ಡಿಕ್ಕಿ ಹೊಡೆಸಿದ್ದಾನೆ.
ಪರಿಣಾಮ ಲಾರಿ ಸಮೇತ ಕಂಬ ಕೆಳಗೆ ಬಿದ್ದಿದ್ದು ಏಕಕಾಲದಲ್ಲಿ 07 ಕಂಬಗಳು ಮುರಿದು ಬಿದ್ದಿತ್ತು.ವಿದ್ಯುತ್ ವಾಹಕಗಳು ತುಂಡಾಗಿ ಬಿದ್ದಿದ್ವು. ಇದರೊರಿಂದ ನಮ್ಮ ಇಲಾಖೆಗೆ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿದೆ. ಲಾರಿ ಚಾಲಕ ಮಂಜುನಾಥರವರು ಮೆಸ್ಕಾಂ ಇಲಾಖೆಯೊಂದಿಗೆ ರಾಜಿ ಮಾಡಿಕೊಂಡು ಕೆ.ಇ.ಬಿ ಕಂಬಗಳನ್ನು ಹಾಕಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದನು.
ಆದರೆ ಇದುವರೆವಿಗೂ ಕಂಬಗಳನ್ನು ಹಾಕಿಸಿಕೊಟ್ಟಿರುವುದಿಲ್ಲ. ಆದ್ದರಿಂದ ಭದ್ರಾವತಿ ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್ ಕೆ.ಎ-52 ಜಿ-4032 ಲಾರಿ ಚಾಲಕ ಮಂಜುನಾಥ ರವರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1792
