ಉಗ್ರ ನರಸಿಂಹ v/s ಟಿಪ್ಪುಸುಲ್ತಾನ್-ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಗಣಪತಿ ಮತ್ತು ಈದ್ ಮೆರವಣಿಗೆಯ ವೇಳೆ ನಗರದಲ್ಲಿ ಮಾಡಿರುವ ಅಲಂಕಾರವನ್ನ ಹಿಡಿದು ಶಕ್ತಿಶಾಲಿ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಹೊರಟವನ ವಿರುದ್ಧ ದೊಡ್ಡಪೇಟೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ವೇಳೆ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಉಗ್ರ ನರಸಿಂಹ ಮೂರ್ತಿಯ ಫೋಟೊಗೆ ಹೇ ಲೋಗೋ ತೋ ಕುಚ್ ಬಿ ನಹೀ ಹೇ, ಅಸಲಿ ಸಾಬ್ ತೋ ಓಹ್ ಹೇ ಎಂದು ಅಮೀರ್ ಅಹ್ಮದ್ ವೃತ್ತದಲ್ಲಿ ನಿರ್ಮಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ನ ಫೋಟೊ ಸೇರಿಸಿ Tippu sultan ಎಂದು ಬರೆಯಲಾಗಿತ್ತು.
ಈ ಫೊಟೊವನ್ನ ರೀಲ್ಸ್ ರೀತಿ ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಇದನ್ನ ಇತರರಿಗೆ ಶೇರ್ ಮಾಡಲಾಗಿತ್ತು. ಇದು ಒಂದು ಕೋಮಿನ ಜನರನ್ನ ಎತ್ತಿಕಟ್ಟುವ ಮತ್ತು ಜನರನ್ನ ಉದ್ರಿಕ್ತಗೊಳಿಸುವ ಹಾಗೂ ನಗರದಲ್ಲಿ ಸಮಾಜದ ಶಾಂತಿ ಕದಡುವ ವಿಡಿಯೋವಾಗಿದೆ ಎಂದು ಸುಮೋಟೋ ಪ್ರಕರಣ ದಾಖಲಾಗಿದೆ.
ವಿಡಿಯೋ ಇತ್ತೀಚೆಗೆ ಪತ್ತೆಯಾಗಿರುವುದರಿಂದ ಟಿಪ್ಪುನಗರದ ವೆಲ್ಡಿಂಗ್ ಕೆಲಸ ಮಾಡುವ ವಸೀಮ್ ಅಕ್ರಮ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1213
