ಸ್ಥಳೀಯ ಸುದ್ದಿಗಳು

ಜೋಡಿ ಮಾರ್ಗ ಚಾಲನೆ : ಗುಂಡಿ ಅಗೆಯುವುದು-ಕಂಬ ಹತ್ತುವುದು ನಿಷೇಧ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕಿನ ಕುಂಸಿ ಉಪವಿಭಾಗ ವ್ಯಾಪ್ತಿಯ ಜೋಡಿ ಮಾರ್ಗಗಳನ್ನು ದಿ: 23-02-2024 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ಚಾಲನೆಗೊಳಿಸಲಾಗುವುದು. ಆದ್ದರಿಂದ ಈ ಮಾರ್ಗದಲ್ಲಿ ಸಾರ್ವಜನಿಕರು ಗುಂಡಿ ತೆಗೆಯುವುದು ಮತ್ತು ಕಂಬ ಹತ್ತುವುದನ್ನು ನಿಷೇಧಿಸಲಾಗಿದೆ.

ಕುಂಸಿ ಉಪವಿಭಾಗ ವ್ಯಾಪ್ತಿಯ ಸಿದ್ಲಿಪುರದಲ್ಲಿ ಕೆಎಸ್‍ಎಸ್‍ಐಡಿಸಿ ವತಿಯಿಂದ ಹೊಸದಾಗಿ ಅಭಿವೃದ್ದಿಪಡಿಸಿರುವ ಕೈಗಾರಿಕೆ ವಸಾಹತುವಿಗೆ ಅಗತ್ಯವಿರುವ 2500 ಕೆವಿಎ ಹೊರಗೆ 25 ಸಂಖ್ಯೆಯ 100 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸುಮಾರು 8 ಕಿ.ಮೀ 3 ಕೋರ್ × 400 ಚದರ ಮಿ.ಮೀ 2 ಸಂಖ್ಯೆಯ ಭೂಗತ ಕೇಬಲ್ ಹಾಗೂ ಮುದ್ದಿನಕೊಪ್ಪ ಕ್ರಾಸ್ ನಿಂದ ಮುದ್ದಿನಕೊಪ್ಪ ಮತ್ತು ಸಿದ್ಲಿಪುರ ಕೈಗಾರಿಕಾ ವಸಾಹತುವರೆಗೆ ಓವರ್‍ಹೆಡ್ ಮಾರ್ಗಗಳ ಮುಖಾಂತರ ಹಾದು ಹೋಗಲಿದೆ.‌

ದಿ: 23.02.2024 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ಈ ಜೋಡಿ ಮಾರ್ಗಗಳನ್ನು ಚಾಲನೆಗೊಳಿಸಲಾದು.
ಈ ಮಾರ್ಗದಲ್ಲಿ 11 ಕೆವಿ ಭೂಗತ ಎಂದು ಬರೆದಿರುವ ಕೇಬಲ್ ಇರುವಿಕೆ ಗುರುತಿಸಿ ಕಲ್ಲುಗಳನ್ನು ನೆಡಲಾಗಿರುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಬರುವ ಸಾರ್ವಜನಿಕರು ಯಾವುದೇ ಕಾಮಗಾರಿಗೆ 11 ಕೆವಿ ಭೂಗತ ಕೇಬಲ್ ಅಳವಡಿಸಿರುವ ಜಾಗದಲ್ಲಿ ಗುಂಡಿಯನ್ನು ತೆಗೆಯುವ ಮತ್ತು ಕಂಬ ಹತ್ತುವುದನ್ನು ನಿಷೇಧಿಸಲಾಗಿದೆ ಹಾಗೂ ಈ ಕೃತ್ಯದಿಮದ ಉಂಟಾಗುವ ವಿದ್ಯುತ್ ಅಪಘಾತಗಳ ಪರಿಣಾಮಗಳಿಗೆ ಸದರಿಯವರೇ ನೇರ ಹೊಣೆಗಾರರಾಗಿರುತ್ತಾರೆ.

ಮತ್ತು ಒಂದು ವೇಳೆ ಭೂಮಿ ಅಗೆಯುವ ಕೃತ್ಯದಿಂದ ಕೇಬಲ್‍ಗೆ ಹಾನಿಯಾದಲ್ಲಿ ಇದರ ರಿಪೇರಿ/ಹೊಸ ಕೇಬಲ್‍ನ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಈ ಪ್ರದೇಶಗಳಲ್ಲಿ ಇನ್ನಿತರ ಇಲಾಖೆಗಳು ಅಥವಾ ಸಾರ್ವಜನಿಕರು ಕೆಲಸ ಮಾಡಬೇಕಾದಲ್ಲಿ ಮೆಸ್ಕಾಂ ವತಿಯಿಂದ ನಿರಾಕ್ಷೇಪಣ ಪತ್ರ ಪಡೆದು ಅವರ ಸಮ್ಮುಖದಲ್ಲಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎಂದು ಕುಂಸಿ ಮೆಸಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9473

Related Articles

Leave a Reply

Your email address will not be published. Required fields are marked *

Back to top button