ಸ್ಥಳೀಯ ಸುದ್ದಿಗಳು

ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ವರ್ಗಾವಣೆನಾ? ಎತ್ತಂಗಡಿನಾ?

ಸುದ್ದಿಲೈವ್/ಶಿವಮೊಗ್ಗ

ಆರೋಗ್ಯ ಕುಟುಂಬ ಮತ್ತು  ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಜೇಶ್ ಸುರಗೀಹಳ್ಳಿ ವರ್ಗಾವಣೆಗೊಂಡಿದ್ದಾರೆ. ರಾಜೇಶ್ ಸುರಗೀಹಳ್ಳಿಯವರಿಗೆ ಸ್ಥಳ ತೋರಿಸಿಲ್ಲ. ಬಹುಶಃ ಈ ವರ್ಗಾವಣೆ ಎತ್ತಂಗಡಿ ಇರಬಹುದಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಡಿಹೆಚ್ ಒ ಸ್ಥಾನಕ್ಕೆ ತೀರ್ಥಹಳ್ಳಿಯ ತಾಲೂಕ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ.ನಟರಾಜ್ ಕೆಎನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ 2018 ರಿಂದ ಸುಧೀರ್ಘ ಸೇವೆ ಸಲ್ಲಿಸಿದ್ದ ಡಿಹೆಚ್ ಒ ಡಾ.ರಾಜೇಶ್ ಸುರಗೀಹಳ್ಳಿ ಅವರ ಯುಗ ಅಂತ್ಯವಾಗಿದೆ.

ಡಾ.ರಾಜೇಶ್ ಸುರಗೀಹಳ್ಳಿ

ಡಾ. ರಾಜೇಶ್ ಸುರಗೀಹಳ್ಳಿ ಅವರ ಸೇವಾ ಅವಧಿಯೂ ಮುಗಿಯಲು ಬಂದಿದೆ. ಈ ವೇಳೆ ಅವರಿಗೆ ಜಾಗ ತೋರಿಸದ ಕಾರಣ ಅವರ ನಿವೃತ್ತಿ ಅಂಚಿನಲ್ಲಿರುವ ಅವರ ಈ ವರ್ಗಾವಣೆ ಕುತೂಹಲ ಮೂಡಿಸಿದೆ. 2017 ರಲ್ಲಿ ಸಾಗರದ ಅರಳಿಹಳ್ಳಿಯಲ್ಲಿ ಮಂಗನ ಕಾಯಿಲೆ ತಾಂಡವವಾಡಿತ್ತು. ಡಿಹೆಚ್ ಒ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಡಾ.ಸುರುಗೀಹಳ್ಳಿಯವರನ್ನ ಮತ್ತೆ ಮಡಿಕೇರಿಯಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು.

2017 ಕ್ಕೂ ಮುಂಚೆ ಡಾ. ಸುರಗೀಹಳ್ಳಿ ಮೂರು ವರ್ಷದಿಂದ ಶಿವಮೊಗ್ಗದಲ್ಲಿಯೇ ಡಿಹೆಚ್ ಒ ಕೆಲಸ ನಿರ್ವಹಿಸುತ್ತಿದ್ದರು. ಡಾ.ಸುರಗೀಹಳ್ಳಿ ಅವರಿಗೆ ಬಿಜೆಪಿ ಸರ್ಕಾರವಿದ್ದಾಗ ಕೆಲವರ ಶ್ರೀರಕ್ಷೆ ಸಹ ಇತ್ತು ಎಂದು ಹೇಳಲಾಗುತ್ತಿತ್ತು. ಹೊಂದಾಣಿಕೆಯ ಅಧಿಕಾರಿಗಳೆಂದೆ ಹೆಸರುವಾಸಿಯಾಗಿದ್ದರು.

ಇದನ್ಬೂ ಓದಿ-https://suddilive.in/archives/10563

Related Articles

Leave a Reply

Your email address will not be published. Required fields are marked *

Back to top button