ಸ್ಥಳೀಯ ಸುದ್ದಿಗಳು

ಸಂಕ್ರಮಣಕ್ಕೂ ಮುಂಚೆ ಬಂದ ದೀಪಾವಳಿ!

ಸುದ್ದಿಲೈವ್/ಶಿವಮೊಗ್ಗ

ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಭೂಕೇಬಲ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಅವಾಂತರ ಸೃಷ್ಟಿಯಾದ ಉದಾಹರಣೆ ಮರೆ ಮಾಚುವ ಮುನ್ನ, ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸಧ್ಯಕ್ಕೆ ಇದು ಯಾವ ಪ್ರಾಣಾಪಾಯವನ್ನೂ ತಂದೊಡ್ಡದಿದ್ದರೂ ಕಾಮಗಾರಿಯ ಗುಣಮಟ್ಟವನ್ನ ಪ್ರದರ್ಶಿಸುತ್ತದೆ. ಈಗಾಗಲೇ ಜಿಪಂ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುಂದು ಕೊರತೆಗಳ ಬಗ್ಗೆ ತನಿಖೆಗೆ ಶದೇಶಿಸಿದ್ದರು.

ಆದೇಶ ಹೊರಡಿಸಿ ನಾಲ್ಕು ತಿಂಗಳು ಕಳೆದರೂ ಯಾವ ತನಿಖಾಧಿಕಾರಿಗಳು ಇದುವರೆಗೂ ಮಾಧ್ಯಮದ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಇದೂ ಸಹ ತಿಪ್ಪೆ ಸಾರಿದಂತಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟವಾಗಿತ್ತು. ಆದರೆ ಕಾಂಗ್ರೆಸ್ ಇದನ್ನ ತನಿಖೆ ನಡೆಸಿಯೇ ನಡೆಸಲಿದೆ ಎಂಬ ಭರವಸೆಯೂ ಸುಳ್ಳಾಗಿದೆ.

ಬೆಳೆಗ್ಗೆ ಎದ್ದರೆ ಮಬೆ ಮುಂದಿನ ಸ್ಮಾರ್ಟ್ ಸಿಟಿ ಕಾಮಗಾರಿ ಸಾರ್ವಜನಿಕ ತೆರಿಗೆ ಹಣವನ್ನ ಅಣುಕಿಸುವಂತಿದೆ. ಆದರೆ ಯಾವ ಪದರಯೋಜನವಾಗದ ಸ್ಥಿತಿಗೆ ತಲುಪಿದೆ. ಬಹುಶಃ ಈ ಆದೇಶವೂ ನೆನಗುದಿಗೆ ಬೀಳುವ ಸಾಧ್ಯತೆ ಇದೆ.

ಇಲ್ಲಿ ನಡೆದಿರುವ ಘಟನೆ ಏನೆಂದರೆ ಜೈಲ್ ವೃತ್ತದಲ್ಲಿರುವ ಸಿಗ್ನಲ್ ಲೈಟ್ ನ ಹಿಂಭಾಗದಲ್ಲಿ ಭೂಗತ ಕೇಬಲ್ ಗಳಿಗೆ ಟ್ರಾನ್ಸ್ ಫಾರ್ಮರ್ ಮತ್ತಿತರೆ ಸಂಪರ್ಕ ನೀಡುವ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಮಾಮೂಲಿ ಎನಿಸಿದರೂ ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಯನ್ನ ಎತ್ತಿಹಿಡಿದಿವೆ.

ಕಳೆದ ಒಂದು ವರ್ಷದ‌ಹಿಂದೆ ನೆಲಗಳಲ್ಲಿ ಪಟಾಕಿ ಹೊಡೆದಂತೆ ಸಂಪರ್ಕಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗುತ್ತಿತ್ತು. ಈಗ ಕಂಬಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದು ದೊಡ್ಡ ಅನಾಹುತಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಆ ದೇವರೇ ಶಿವಮೊಗ್ಗದವರನ್ನ ಕಾಪಾಡಬೇಕು.

ಇದನ್ನೂ ಓದಿ-https://suddilive.in/archives/6282

Related Articles

Leave a Reply

Your email address will not be published. Required fields are marked *

Back to top button