ಸ್ಥಳೀಯ ಸುದ್ದಿಗಳು
ಭಾರತ ತಂಡಕ್ಕೆ ಶುಭ ಹಾರೈಸಿದ ಹೆಚ್ ಸಿ ಯೋಗೀಶ್ ಬಳಗ

ಸುದ್ದಿಲೈವ್/ಶಿವಮೊಗ್ಗ

ನಾಳೆ ನಡೆಯುವ ಹೈವೋಲ್ಟೇಜ್ ವಿಶ್ವಕಪ್ ನ ಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದುಬರಲಿ ಎಂದು ಹೆಚ್ ಸಿ ಯೋಗೀಶ್ ಸ್ನೇಹಿತರ ಬಳಗ ಶಿವಪ್ಪ ನಾಯಕ ಪ್ರತಿಮೆಯ ಬಳಿ ಶುಭಹಾರೈಸಿದೆ.
ಭಾರತಾಂಬೆಯ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಹೆಚ್ ಸಿ ಯೋಗೇಶ್ ಸ್ನೇಹಿತರ ಬಳಗ ಶುಭಕೋರಿದೆ. ಈ ವೇಳೆ ಮಾತನಾಡಿದ ಹೆಚ್ ಸಿ ಯೋಗೀಶ್ ನಾಳೆಯ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಭಾರತ ಗೆದ್ದುಬರಲಿದೆ. 8 ಲೀಗ್ ಪಂದ್ಯಾವಳಿ ಮತ್ತು ಸೆಮಿಫೈನಲ್ ನಲ್ಲಿ ಭಾರತದ ಪ್ರದರ್ಶನ ಗಮನಿಸಿದರೆ ನಾಳೆಯ ಗೆಲವು ನಮ್ಮದೆ ಎಂದರು.
ಈ ವೇಳೆ ಬಳಗದ ದೇವೇಂದ್ರಪ್ಪ, ಚಿನ್ನಪ್ಪ, ಪರ್ವೇಜ್ ಅಲ್ತಾಫ್, ಕವಿತಾ ಮೊದಲಾದವರು ಭಾರತ ತಂಡಕ್ಕೆ ಶುಭಹಾರೈಸಿದ್ದಾರೆ.
ಎಟಿಎನ್ ಸಿ ಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಹ ಶುಭ ಹಾರೈಸಿದರು. ಜೀತೇಗೆ ಬೈ ಜೀತೆಗಾ ಇಂಡಿಯಾ ಜೀತೇಗಾ ಎಂಬ ಘೋಷಣೆ ಕೂಗಲಾಯಿತು. ಕಮಲಾನೆಹರೂ ಕಾಲೇಜಿನಲ್ಲೂ ಭಾರತ ತಂಡಕ್ಕೆ ಶುಭಹಾರೈಸಲಾಯಿತು.
ಇದನ್ನೂ ಓದಿ-https://suddilive.in/archives/3211
