ರಾಜಕೀಯ ಸುದ್ದಿಗಳು

ಖಾಸಗಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಆಗರ-ಶೌಚಾಲಯ ನಿರ್ಮಾಣಕ್ಕೂ ಅಡ್ಡಿ

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಆಗರವಾಗಿದೆ. ಕೆಲ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪಾಲಿಕೆಯ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಮುಂದಾದರೂ ಅಡ್ಡಿ ಉಂಟಾಗಿದೆ.

ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆಗೆ ಕಟ್ಟಡದ ಮೇಲ್ಭಾಗದಲ್ಲಿ  ಮೂತ್ರ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಶೌಚಾಲಯವಿದ್ದರೂ ಇಲ್ಲಿ ಕೆಲ ಪ್ರಯಾಣಿಕರ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಆದರೆ ಮೇಲ್ಗಡೆ ಮೂತ್ರ ವಿಸರ್ಜನೆಗೆ ಶೌಚಾಲಯವಿರುವುದು ಬಸ್ ನಲ್ಲಿ ಬರುವ ಕೆಲ ಪ್ರಯಾಣಿಕರಿಗೆ ಗೊತ್ತೇ ಆಗೊಲ್ಲ. .ರಾತ್ರಿ ಹೊತದತಿನಲ್ಲಿ ಬರುವ ಬಸ್ ಪ್ರಯಾಣಿಕರು ಅಲ್ಲೇ ಇಳಿದು ಮೂತ್ರ ವಿಸರ್ಜನೆಗೆ ಮುಂದಾಗುತ್ತಾರೆ.

ಇದರಿಂದ ಪಾಲಿಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಆಸ್ಪರೇಷನಲ್ ಶೌಚಾಲಯ ತೆರೆಯಲು ಮುಂದಾದರೆ ಇಲ್ಲಿನ  ಕೆಲವರು ಆಕ್ಷೇಪಿಸಿರುವುದಾಗಿ ತಿಳಿದು ಬಂದಿದೆ. 25 ಲಕ್ಷ ರೂ. ಅನುದಾನ ಸಹ ಪಾಲಿಕೆಗೆ ಬಂದು ಕುಳಿತಿದೆ. ಆದರೆ ಕೆಲವೊಂದು ಅಡಚಣೆಗಳು ಉಂಟಾಗಿದೆ.

ಶೌಚಾಲಯವೊಂದೇ ಇಲ್ಲಿ ಸಮಸ್ಯೆಯಲ್ಲ, ಇಲ್ಲಿ ಖಾಸಗಿ ವಾಹನಗಳ ಹಾವಳಿಗಳು ಹೆಚ್ಚಿವೆ ಬೈಲಾ ಪ್ರಕಾರ ಹೋಮ್ ಗಾರ್ಡ್ ಗಳ ನೇಮಕ ಇಲ್ಲ. ಇತ್ತೀಚೆಗೆ ಇಲ್ಲಿನ ಬಸ್ ಮಾಲೀಕರ ಸಂಘವೇ ಬಸ್ ನಿಲ್ದಾಣದಲ್ಲಿ  ಸಿಸಿ ಟಿವಿಗಳನ್ನ ಅಳವಡಿಸಿದೆ. ಆದರೆ ಇತರೆ ವಾಹನಗಳ ವಾಹಳಿ, ತಳ್ಳುವ ಗಾಡಿಗಳು ವ್ಯಾಪಾರ ಮಾಡಲಾಗುತ್ತಿದೆ. ಇವುಗಳನ್ನ ಕಡಿಮೆ ಮಾಡಬೇಕಿದೆ ಪ್ರಯಾಣಿಕರ ರಕ್ಷಣೆ ಆಗಬೇಕಿದೆ.

ಇದನ್ನೂ ಓದಿ-https://suddilive.in/archives/9454

Related Articles

Leave a Reply

Your email address will not be published. Required fields are marked *

Back to top button