ಸ್ಥಳೀಯ ಸುದ್ದಿಗಳು

ಇಂದಿನಿಂದ ಆರಂಭವಾಗಿದೆ ತುಂಗನದಿಯ ಉತ್ತರ ದಂಡೆ ಯೋಜನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ತುಂಗ ನದಿಯ ಬಲದಂಡೆಯ ಉತ್ತರ ದಂಡೆ ಅಭಿವೃದ್ಧಿ ಯೋಜನೆಗೆ ಇಂದಿನಿಂದ ಚಾಲನೆ ದೊರೆತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಈ ಯೋಜನೆಗೆ 80 ಕೋಟಿ ರೂ. ವ್ಯಯಮಾಡಲಾಗಿದೆ.

2.8 ಕಿಮೀಟರ್ ದೂರದ ವಾಕಿಂಗ್ ಪಾತ್, ಗಾರ್ಡನ್, ಗಳು, ಪಾರಂಪರಿಕ ಪ್ರತಿಮೆಗಳು, ದೋಣಿ ವಿಹಾರವನ್ನ ನಿರ್ಮಿಸಲಾಗಿದೆ. ಆದರೆ ದೋಣಿ ವಿಹಾರವನ್ನ ಮಳೆಗಾಲ ಹೊರತುಪಡಿಸಿ ಗುಜರಾತ್ ನ ಸಾಬರಮತಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವಂತೆ ನಿರ್ಮಿಸಲಾಗುತ್ತಿದೆ.

ಇಂದು ವಾಕಿಂಗ್ ಪಾತ್ ನ ಪ್ರಾಯೋಗಿಕವಾಗಿ ಸಾರತವಜನಿಕರಿಗೆ ಓಡಾಡಲು ಅವಕಾಶ ಮಾಡಲಾಗಿದೆ. ಮಾ.8 ರಂದು ಸಂಜೆಯ ನಂತರವೂ ವಾಕಿಂಗ್ ಗೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಕ್ಕಿನ ಕಲ್ಮಠದ ಹಿಂಭಾಗದಿಂದ ಹಿಡಿದು, ಬೈಪಾಸ್ ರಸ್ತೆಯ ವರೆಗಿನ‌ವಾಕಿಂಗ್ ಪಾತ್ ಗೆ 9 ಗೇಟಿನ ಮೂಲಕ ಪ್ರವೇಶ ದ್ವಾರಗಳನ್ನ ನಿರ್ಮಿಸಲಾಗುತ್ತಿದೆ.

ಈ ಕುರಿತು ಸುದ್ದಿವೈವ್ ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಪ್ರಾಯೋಗಿಕವಾಗಿ ಈ ಪ್ರವೇಶವನ್ನ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಾಧಕ ಬಾಧಕಗಳನ್ನ ನೋಡಿಕೊಂಡು ನಂತರ ಮಾ.8 ರಿಂದ ಸಂಜೆಯ ವಾಯುವಿಹಾರಕ್ಕೆ ಬಿಡಲಾಗುತ್ತಿದೆ. ಸಧ್ಯಕ್ಷೆ ಪ್ರವೇಶ ಶುಲದಕವಿರುವುದಿಲ್ಲ. ಹಲವು ಎಚ್ಚರಿಕೆಯ ಕ್ರಮವನ್ನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/9446

Related Articles

Leave a Reply

Your email address will not be published. Required fields are marked *

Back to top button