ಕ್ರೈಂ ನ್ಯೂಸ್
ಪೆಟ್ಟಿಗೆಯಲ್ಲಿ ಪತ್ತೆಯಾಗಿದ್ದು ಅಡುಗೆ ಉಪ್ಪು ಮತ್ತು ಇತರೆ ತ್ಯಾಜ್ಯ ವಸ್ತುಗಳು-ಎಸ್ಪಿ ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಬಿಳಿ ಪೌಡರ್ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಪತ್ತೆಯಾದ ಬಿಳಿಪೌಡರ್ ಪ್ರಾಥಮಿಕ ತನಿಖೆಯಲ್ಲಿ ಅಡಿಗೆ ಉಪ್ಪು ಎಂದು ತಿಳಿದು ಬಂದಿದೆ ಎಂದಿದ್ದಾರೆ.
ನ.03 ರಂದು ತಂದಿಟ್ಟಿರುವ ಬಗ್ಗೆ ತನಿಖೆ ನಡೆಸಲಾಗಿದೆ. ಬಾಕ್ಸ್ ಉತ್ಪಾದನೆಯಾಗಿದ್ದು ಬಾಂಗ್ಲಾ ಎಂದು ಬರೆದಿರುವುದು ತಿಳಿದು ಬಂದಿದೆ. ನಮ್ಮ ತಂಡ ಸಧ್ಯಕ್ಕೆ ಯಾವುದೇ ಸ್ಪೋಟಕ ವಸ್ತುಗಳು ಇಲ್ಲದಿರುವುದನ್ನ ಖಚಿತ ಪಡಿಸಿಕೊಂಡು ಸ್ಪೋಟಿಸಿ ಪೆಟ್ಟಿಗೆ ಒಪನ್ ಮಾಡಲಾಗಿದೆ ಎಂದರು.
ಆಟೋ ಡ್ರೈವರ್ ಗಳಿಂದ ಪೆಟ್ಟಗೆ ಪತ್ತೆಯಾಗಿದ್ದು ಮಾಹಿತಿ ತಿಳಿದು ಬಂದಿದೆ. ವೇಸ್ಟ್ ಮೆಟರಿಯಲ್ ಪತ್ತೆಯಾಗಿದೆ. ವಾಹನಗಳಲ್ಲಿ ಇಬ್ಬರು ಬರುವುದು ಪತ್ತೆಯಾಗಿದೆ. ಇಬ್ಬರನ್ನ ಪತ್ತೆಹಚ್ಚಲಾಗಿದೆ. ಪತ್ತೆಯಾಗಿರುವ ಬಗ್ಗೆ ಕ್ರಿಮಿನಲ್ ಬ್ಯಾಕ್ ರೌಂಡ್ ಇನ್ನೂ ತನಿಖೆ ಆಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ-https://suddilive.in/archives/2565
